ಬಾಯಿ ಮಾತಿಗೆ ಬಗ್ಗದವರು ಬಂದೂಕಿನ ಮಾತಿಗೆ ಬಗ್ಗುತ್ತಾರೆ ಎಂದ ಯೋಗಿ
ನವದೆಹಲಿ, ಫೆಬ್ರವರಿ.02: ಮಾತಿಗೆ ಬಗ್ಗದ ಜನರಿಗೆ ಗುಂಡೇಟಿನಿಂದಲೇ ದಾರಿಗೆ ತರಬೇಕು ಎನ್ನುವ ಮೂಲಕ ಬಿಜೆಪಿಯ ಮತ್ತೊಬ್ಬ ಸ್ಟಾರ್ ಪ್ರಚಾರಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದರು.

ಆಜಾದಿ ಘೋಷಣೆ ಬಗ್ಗೆ ಯೋಗಿ ಕೆಂಡ:
ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಜನರು ಶಾಹಿನ್ ಬಾಗ್ ನಲ್ಲಿ ಈಗ ಆಜಾದಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದರು. ಶಿವನ ಭಕ್ತರು ಎಂದಾದರೂ ಅಹಿಂಸೆಯನ್ನು ಬೆಂಬಲಿಸುವುದು ಉಂಟೇ. ಆದರೆ, ಮಾತಿಗೆ ಬಗ್ಗದ ಜನರನ್ನು ಗುಂಡೇಟಿನಿಂದಲೇ ಬಗ್ಗಿಸುವುದು ಅನಿವಾರ್ಯ ಎಂದು ಕಿಡಿ ಕಾರಿದ್ದಾರೆ.

ಗುಂಡೇಟಿನ ಬಗ್ಗೆ ಉಲ್ಲೇಖಿಸಿದ ಯೋಗಿ:
ಈ ಹಿಂದೆ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಸಿಎಎ ವಿರೋಧಿ ಹೋರಾಟ ನಡೆಸುತ್ತಿರುವ ದೇಶದ್ರೋಹಿಗಳನ್ನು ಗುಂಡು ಹೊಡೆದು ಕೊಲ್ಲಬೇಕು ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಕೆರಳಿದ ಚುನಾವಣಾ ಆಯೋಗ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಮುಖಂಡ ಪರ್ವೇಶ್ ವರ್ಮಾರಿಗೆ ಶೋಕಾಸ್ ನೋಟಿಸ್ ಕೂಡಾ ಜಾರಿಗೊಳಿಸಿತ್ತು.












Click it and Unblock the Notifications