ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆಯಾದ್ರೆ ಐದು ರಸ್ತೆಗಳಲ್ಲಿ ಸಂಚಾರ ಬಂದ್

|
Google Oneindia Kannada News

ನವದೆಹಲಿ, ಫೆಬ್ರವರಿ.23: ರಾಷ್ಟ್ರ ರಾಜಧಾನಿಯ ಶಾಹಿನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಶಾಂತಿಯುತವಾಗಿಯೇ ಹೋರಾಟ ನಡೆಸಲಾಗುತ್ತಿದೆ. ಆದರೆ, ದೆಹಲಿ ಪೊಲೀಸರು ಅನಗತ್ಯವಾಗಿ ನಗರದ ಐದು ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಿದ್ದಾರೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಚೇರ್ ಮನ್ ವಜಾಹತ್ ಹಬೀಬುಲ್ಲಾ ಆರೋಪಿಸಿದ್ದಾರೆ.
ನಗರದಲ್ಲಿರುವ ಕೆಲವು ರಸ್ತೆಗಳಿಗೂ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೂ ಸಂಬಂಧವೇ ಇಲ್ಲ. ಅನವಶ್ಯಕವಾಗಿ ಪೊಲೀಸರು ಅಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಆ ರಸ್ತೆಗಳಿಗೂ ಶಾಹಿನ್ ಬಾಗ್ ಪ್ರತಿಭಟನೆಗೂ ಎಲ್ಲಿಂದ ಎಲ್ಲಿಯ ನಂಟು ಎಂದು ವಜಾಹತ್ ಪ್ರಶ್ನೆ ಮಾಡಿದ್ದಾರೆ.

ಶಾಹಿನ್ ಬಾಗ್ ಇತ್ಯರ್ಥಕ್ಕೆ ನೇಮಕಗೊಂಡ ತ್ರಿಮೂರ್ತಿಗಳ ಕುರಿತು ಮಾಹಿತಿ
ಕಳೆದ ಫೆಬ್ರವರಿ.19ರಂದು ಶಾಹಿನ್ ಬಾಗ್ ಪ್ರತಿಭಟನಾಕಾರರ ಜೊತೆ ಸಂಧಾನ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸುವಂತೆ ಹಿರಿಯ ವಕೀಲ ಸಂಜಯ್ ಹೆಗಡೆ ಹಾಗೂ ಸಾಧನಾ ರಾಮಚಂದ್ರನ್ ಜೊತೆಗೆ ವಜಾಹತ್ ಹಬೀಬುಲ್ಲಾರನ್ನು ಸಹ ಸುಪ್ರೀಂಕೋರ್ಟ್ ನೇಮಿಸಿತ್ತು.

ಸುಪ್ರೀಂಗೆ ಅಫಿಡವಿಟ್ ಸಲ್ಲಿಸಲಿರುವ ಮಧ್ಯವರ್ತಿಗಳು

ಸುಪ್ರೀಂಗೆ ಅಫಿಡವಿಟ್ ಸಲ್ಲಿಸಲಿರುವ ಮಧ್ಯವರ್ತಿಗಳು

ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟಗಾರರ ಜೊತೆ ನಡೆಸಿದ ಸಂಧಾನ ಮಾತುಕತೆ ಮತ್ತು ಪರಿಸ್ಥಿತಿಯ ಕುರಿತು ಸೋಮವಾರ ಮೂವರು ಮಧ್ಯವರ್ತಿಗಳು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಲಿದ್ದಾರೆ.

ಸುಖಾಸುಮ್ಮನೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿರುವುದಕ್ಕೆ ಯಾರು ಹೊಣೆ?

ಸುಖಾಸುಮ್ಮನೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿರುವುದಕ್ಕೆ ಯಾರು ಹೊಣೆ?

ಶಾಹಿನ್ ಬಾಗ್ ಹೋರಾಟವನ್ನೇ ನೆಪವಾಗಿ ಇಟ್ಟುಕೊಂಡು ನಗರದ ಹಲವೆಡೆ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆ ರಸ್ತೆಗಳು ಶಾಹಿನ್ ಬಾಗ್ ಗೆ ಯಾವುದೇ ಮಾರ್ಗದಲ್ಲೂ ಸಂಪರ್ಕಿಸಲು ಸಾಧ್ಯವಿಲ್ಲ. ಅಂಥ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡುವುದಕ್ಕೆ ಅನುಮತಿ ಕೊಟ್ಟಿದ್ದು ಯಾರು. ಆ ರಸ್ತೆಗಳನ್ನು ಬಂದ್ ಮಾಡಿದ್ದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಲಾಗಿದೆ.

ಸೋಮವಾರ ಫೋಟೋ ಜೊತೆಗೆ ಮ್ಯಾಪ್ ಬಗ್ಗೆ ದಾಖಲೆಗಳು ಸಲ್ಲಿಕೆ

ಸೋಮವಾರ ಫೋಟೋ ಜೊತೆಗೆ ಮ್ಯಾಪ್ ಬಗ್ಗೆ ದಾಖಲೆಗಳು ಸಲ್ಲಿಕೆ

ದೆಹಲಿಯಲ್ಲಿ ಶಾಹಿನ್ ಬಾಗ್ ಗೆ ಸಂಪರ್ಕಿಸುವ ರಸ್ತೆಗಳಷ್ಟೇ ಅಲ್ಲ, ಹಲವೆಡೆ ರಸ್ತೆಗಳ ಸಂಪರ್ಕವನ್ನು ಬಂದ್ ಮಾಡಲಾಗಿದೆ. ಆ ರಸ್ತೆಗಳ ಪೋಟೋ ಮತ್ತು ಮ್ಯಾಪ್ ನ ಫೋಟೋವನ್ನು ಅಫಿಟವಿಟ್ ಜೊತೆಗೆ ಸುಪ್ರೀಂಕೋರ್ಟ್ ಗೆ ಸಲ್ಲಿಸಲು ಸಂಧಾನ ಮಧ್ಯಸ್ಥಿಕೆ ವಹಿಸಿದ್ದ ವಜಾಹತ್ ಹಬೀಬುಲ್ಲಾ ತೀರ್ಮಾನಿಸಿದ್ದಾರೆ.

ನಗರದ ಯಾವ ಯಾವ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ?

ನಗರದ ಯಾವ ಯಾವ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ?

ದೆಹಲಿಯಲ್ಲಿ ನಡೆಯುತ್ತಿರುವ ಶಾಹಿನ್ ಬಾಗ್ ಹೋರಾಟದ ನೆಪದಲ್ಲಿ ನಗರದ ಜಿ ಡಿ ಬಿರ್ಲಾ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ನ್ಯೂ ಫ್ರೆಂಡ್ಸ್ ಕಾಲನಿ, ಮಹಾರಾಣಿ ಬಾಗ್, ಸುಖದೇವ್ ವಿಹಾರ್ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ.

English summary
Anti-CAA Protest At Shaheen Bagh, But Why Police Block Other Road In City. Mediator Wajahat Habibulla Questioned Delhi Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X