ಕೇಂದ್ರ ಸರ್ಕಾರದ್ದು 'ಕಪಟಬುದ್ಧಿ': ಅಣ್ಣಾ ಹಜಾರೆ ಆಕ್ರೋಶ
ನವದೆಹಲಿ, ಮಾರ್ಚ್ 23: ಕೇಂದ್ರ ಸರ್ಕಾರದ ವಿರುದ್ಧ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, 'ಕೇಂದ್ರ ಸರ್ಕಾರದ್ದು ಕಪಟ ಬುದ್ಧಿ, ಎಂದು ಹರಿಹಾಯ್ದಿದ್ದಾರೆ.
"ನೀವು ಈ ಪ್ರತಿಭಟನೆಯಲ್ಲಿ ಬಾಗವಹಿಸುವುದಕ್ಕೆಂದು ಬರುತ್ತಿದ್ದ ಪ್ರತಿಭಟನಾಕಾರರಿದ್ದ ರೈಲುಗಳನ್ನು ತಡೆದಿದ್ದೀರಿ. ಅವರು ಹಿಂಸೆ ಕೈಗೊಳ್ಳುವಂತೆ ಮಾಡುತ್ತಿದ್ದೀರಿ. ಚಳವಳಿ ನಡದೆಯುವ ಸ್ಥಳಗಳಲ್ಲಿ ಪೊಲೀಸರನ್ನು ನೇಮಿಸಿದ್ದೀರಿ. ನಮಗೆ ಪೊಲೀಸ್ ಭದ್ರತೆ ಬೇಡ, ನಿಮ್ಮ ಭದ್ರತೆ ನನ್ನನ್ನು ಕಾಪಾಡುವುದಿಲ್ಲ ಎಂದು ಹಲವು ಬಾರಿ ಮೊದಲೇ ಪತ್ರ ಬರೆದಿದ್ದೇನೆ. ಆದರೂ ಪೊಲೀಸರನ್ನು ನೇಮಿಸಿದ್ದೀರಿ. ನಿಮ್ಮ ಈ ಕಪಟಬುದ್ಧಿಯನ್ನು ಒಪ್ಪುವುದಕ್ಕಾಗುವುದಿಲ್ಲ" ಎಂದು ಗಾಂಧಿವಾದಿ ಅಣ್ಣಾ ಹಜಾರೆ ಸ್ಪಷ್ಟವಾಗಿ ಹೇಳಿದ್ದಾರೆ.
ಸಮರ್ಥ ಲೋಕಪಾಲ ನೇಮಕ ಮತ್ತು ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದಿನಿಂದ ಅಣ್ಣಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

2011 ರಲ್ಲಿ ಲೋಕಪಾಲ ಮಸೂದೆಗೆ ಒಪ್ಪಿಗೆ ನೀಡುವಂತೆ ಅಣ್ಣಾ ಹಜಾರೆ ಆರಂಬಿಸಿದ್ದ ಆಂದೋಲನ ದೇಶದಾದ್ಯಂತ ಭ್ರಷ್ಟಾಚಾರ ವಿರೋಧಿ ಅಲೆ ಎಬ್ಬಿಸಿತ್ತು.












Click it and Unblock the Notifications