ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್‌ ಕೇಜ್ರಿವಾಲ್‌ಗೆ ಅಧಿಕಾರದ ಅಮಲು ಹತ್ತಿದೆ ಎಂದ ಅಣ್ಣ ಹಜಾರೆ

|
Google Oneindia Kannada News

ನವದೆಹಲಿ, ಆಗಸ್ಟ್‌ 30: ಹಿರಿಯ ಗಾಂಧಿವಾದಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ದೆಹಲಿಯ ಮದ್ಯ ನೀತಿಯನ್ನು ಟೀಕಿಸಿ ನಿಮಗೆ ಅಧಿಕಾರದ ಅಮಲು ಹತ್ತಿದೆ ಎಂದು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

ಹಜಾರೆ ತಮ್ಮ ಪತ್ರದಲ್ಲಿ ಹಳ್ಳಿಗಳಲ್ಲಿನ ಮದ್ಯದ ವ್ಯಸನದ ಸಮಸ್ಯೆ ಮತ್ತು ಅದರ ಪರಿಹಾರಗಳ ಬಗ್ಗೆ ವ್ಯವಹರಿಸುವ ಕೇಜ್ರಿವಾಲ್ ಅವರದೇ ಸ್ವರಾಜ್‌ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ನಾನು ರಾಜಕೀಯಕ್ಕೆ ಕಾಲಿಡುವ ಮುನ್ನ ಸ್ವರಾಜ್ ಪುಸ್ತಕ ಬರೆದಿದ್ದೇನೆ. ನಾನು ಬರೆದ ಪುಸ್ತಕದ ಮುನ್ನುಡಿಯಲ್ಲಿ ಗ್ರಾಮಸಭೆ, ಮದ್ಯಪಾನ ನೀತಿಯ ಬಗ್ಗೆ ಜಂಬ ಕೊಚ್ಚಿಕೊಂಡಿದ್ದೇನೆ. ಏನೂ ಬರೆದಿದ್ದೇನೆ ಎನ್ನುವುದು ನೆನಪಿರಲಿ ಎಂದು ಹಜಾರೆ ಹೇಳಿದ್ದಾರೆ.

ಉದ್ಧವ್ ಸರ್ಕಾರದ ಅಬಕಾರಿ ನೀತಿ ವಿರುದ್ಧ ಉಪವಾಸ ಕೈಬಿಟ್ಟ ಅಣ್ಣಾ ಹಜಾರೆಉದ್ಧವ್ ಸರ್ಕಾರದ ಅಬಕಾರಿ ನೀತಿ ವಿರುದ್ಧ ಉಪವಾಸ ಕೈಬಿಟ್ಟ ಅಣ್ಣಾ ಹಜಾರೆ

ಪತ್ರದಲ್ಲಿ ಹಜಾರೆ ಅವರು, ನೀವು ಪುಸ್ತಕದಲ್ಲಿ ಆದರ್ಶಪ್ರಾಯವಾಗಿ ಬರೆದಿದ್ದೀರಿ. ಹಾಗಾಗಿ ನಾನು ನಿಮ್ಮಿಂದ ಅಪಾರ ನಿರೀಕ್ಷೆಗಳನ್ನು ಹೊಂದಿದ್ದೆ. ಆದರೆ, ನೀವು ರಾಜಕೀಯಕ್ಕೆ ಕಾಲಿಟ್ಟು ಮುಖ್ಯಮಂತ್ರಿಯಾದ ನಂತರ ಆ ಮಾತುಗಳನ್ನು ಮರೆತಿದ್ದೀರಿ. ಹೊಸ ಅಬಕಾರಿ ನೀತಿ. ರೂಪಿಸಿರುವುದು ಮದ್ಯ ವ್ಯಸನದ ಚಟವನ್ನು ಉತ್ತೇಜಿಸುವಂತಿದೆ. ಈ ನೀತಿಯು ರಾಜ್ಯದ ಮೂಲೆ ಮೂಲೆಗಳಲ್ಲಿ ಮದ್ಯದಂಗಡಿಗಳಿಗೆ ಕಾರಣವಾಗಬಹುದು. ಪರಿಣಾಮವಾಗಿ ಇದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸಬಹುದು. ನೀವು ಅಂತಹ ನೀತಿಯನ್ನು ತರಲು ನಿರ್ಧರಿಸಿದ್ದೀರಿ ಎಂದು ಅಣ್ಣ ಹೇಳಿದ್ದಾರೆ.

ಮದ್ಯದಲ್ಲಿ ಅಮಲು ಇರುತ್ತದೆ. ಅದೇ ಶಕ್ತಿ ಇಲ್ಲೂ ಇದೆ. ನೀವು ಕೂಡ ಅಧಿಕಾರದ ಅಮಲು ಹೊಂದಿದ್ದೀರಿ. 2012ರ ಸೆಪ್ಟೆಂಬರ್ 18ರಂದು ಕೇಜ್ರಿವಾಲ್ ಅವರು ರಾಜಕೀಯ ಸೇರುವ ಇಂಗಿತ ವ್ಯಕ್ತಪಡಿಸಿ ಅಣ್ಣಾ ಸಭೆಯ ತಂಡಕ್ಕೆ ಸೇರಿದ್ದನ್ನು ನೆನಪಿಸಿದ ಹಜಾರೆ. ರಾಜಕೀಯ ಪಕ್ಷವನ್ನು ರಚಿಸುವುದು ನಮ್ಮ ಚಳವಳಿಯ ಉದ್ದೇಶವಲ್ಲ ಎಂಬುದನ್ನು ನೀವು ಮರೆತಿದ್ದೀರಿ ಎಂದು ಹೇಳಿದ್ದಾರೆ.

ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲು 6,300 ಕೋಟಿ ಖರ್ಚು ಮಾಡಲಾಗಿದೆ: ಕೇಜ್ರಿವಾಲ್ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲು 6,300 ಕೋಟಿ ಖರ್ಚು ಮಾಡಲಾಗಿದೆ: ಕೇಜ್ರಿವಾಲ್

 ಉತ್ತಮ ಮದ್ಯನೀತಿ ತರುವಂತೆ ಪ್ರತಿಭಟನೆ

ಉತ್ತಮ ಮದ್ಯನೀತಿ ತರುವಂತೆ ಪ್ರತಿಭಟನೆ

ದೆಹಲಿಯ ಅಬಕಾರಿ ನೀತಿಯನ್ನು ನೋಡಿದರೆ ಐತಿಹಾಸಿಕ ಚಳವಳಿಯನ್ನು ಕಿತ್ತೊಗೆದು ಹುಟ್ಟುಹಾಕಿದ ಪಕ್ಷವು ಇತರ ಪಕ್ಷಗಳು ನಡೆದುಕೊಳ್ಳುತ್ತಿರುವ ಹಾದಿಯಲ್ಲೇ ಸಾಗಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ರಾಳೇಗಣ ಸಿದ್ಧಿ ಗ್ರಾಮದಲ್ಲಿ ಮೊದಲು ಮದ್ಯಪಾನ ಮಾಡಿದ್ದರಿಂದ ಈ ಪತ್ರ ಬರೆಯುತ್ತಿದ್ದೇನೆ. ಮಹಾರಾಷ್ಟ್ರದಲ್ಲಿ ಉತ್ತಮ ಮದ್ಯನೀತಿ ತರುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದೆವು. ಆಂದೋಲನವು ಮದ್ಯಪಾನ ನಿಷೇಧ ಕಾನೂನಿಗೆ ಕಾರಣವಾಯಿತು. ಗ್ರಾಮವೊಂದರಲ್ಲಿ ಶೇ. 51ರಷ್ಟು ಮಹಿಳೆಯರು ಮದ್ಯ ನಿಷೇಧದ ಪರವಾಗಿ ಮತ ಚಲಾಯಿಸಿ ನಂತರ ಮದ್ಯಪಾನ ನಿಷೇಧವಾಯಿತು ಎಂದು ಪತ್ರದಲ್ಲಿ ಬರೆಯಲಾಗಿದೆ.

 ಆಂದೋಲನದಿಂದ ಉದಯವಾದ ಪಕ್ಷಕ್ಕೆ ಹೊಂದಿಕೆಯಲ್ಲ

ಆಂದೋಲನದಿಂದ ಉದಯವಾದ ಪಕ್ಷಕ್ಕೆ ಹೊಂದಿಕೆಯಲ್ಲ

ಇಂತಹ ನೀತಿಯನ್ನು ದೆಹಲಿ ಸರ್ಕಾರವೂ ನಿರೀಕ್ಷಿಸಿತ್ತು. ಆದರೆ ನೀವು ಅದನ್ನು ಮಾಡಲಿಲ್ಲ. ಇತರ ಪಕ್ಷಗಳಂತೆ ಅಧಿಕಾರಕ್ಕೆ ಹಣದಂತಹ ಈ ವಿಷವರ್ತುಲದಲ್ಲಿ ನೀವೂ ಸಿಲುಕಿಸಿದ್ದೀರಿ. ಒಂದು ಪ್ರಮುಖ ಆಂದೋಲನದಿಂದ ಉದಯವಾದ ರಾಜಕೀಯ ಪಕ್ಷಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅಣ್ಣ ಹಜಾರೆ ಅರವಿಂದ ಕೇಜ್ರಿವಾಲ್‌ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 31 ಸ್ಥಳಗಳಲ್ಲಿ ಸಿಬಿಐ ಶೋಧ

31 ಸ್ಥಳಗಳಲ್ಲಿ ಸಿಬಿಐ ಶೋಧ

ಎಎಪಿ ನೇತೃತ್ವದ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿವಾದದಲ್ಲಿ ಸಿಲುಕಿಕೊಂಡಿದೆ. ಆಗಸ್ಟ್ 19ರಂದು, ಸಿಬಿಐ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ರಾಜಧಾನಿಯ ಹಲವಾರು ಅಬಕಾರಿ ಅಧಿಕಾರಿಗಳ ವಿರುದ್ಧ ಸಂಸ್ಥೆ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ನಡೆಸಿತು.

 ಮನೀಶ್‌ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ

ಮನೀಶ್‌ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಒಂದು ತಿಂಗಳ ನಂತರ ಸಿಬಿಐ ಈ ದಾಳಿ ನಡೆಸಿದೆ. ಅಬಕಾರಿ ಇಲಾಖೆಯ ಸಚಿವ ಮನೀಶ್‌ ಸಿಸೋಡಿಯಾ ಅವರನ್ನು ವಿವಾದದಲ್ಲಿ ಇರಿಸುವಂತೆ ಮಡಿದೆ. ಇದರ ಬೆನ್ನಲ್ಲೇ ದೆಹಲಿ ಸರ್ಕಾರ ಈ ನೀತಿಯನ್ನು ಹಿಂಪಡೆಯುವುದಾಗಿ ಘೋಷಿಸಿತ್ತು.

English summary
Senior Gandhian and anti-corruption campaigner Anna Hazare on Tuesday slammed Delhi Chief Minister Arvind Kejriwal for criticizing Delhi's liquor policy, saying he is intoxicated with power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X