ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು "ಆಂದೋಲನ ಜೀವಿ"? ಮೋದಿ ಬಳಸಿದ ಈ ಪದಕ್ಕೆ ಕಾಂಗ್ರೆಸ್ಸಿಗರ ಬಾಣ

|
Google Oneindia Kannada News

ನವದೆಹಲಿ, ಫೆಬ್ರುವರಿ 10: "ಆಂದೋಲನ ಜೀವಿ". ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಬಳಸಿದ ಈ ಪದ ಈಗ ಚರ್ಚೆಗೆ ಕಾರಣವಾಗಿದೆ. ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರಸ್ತಾಪ ಮಾಡುತ್ತಿದ್ದ ಸಂದರ್ಭ ಮೋದಿ ಈ ಪದ ಬಳಸಿದ್ದು, ಕಾಂಗ್ರೆಸ್ಸಿಗರು ಈ ಪದದ ಹಿಂದೆ ಬಿದ್ದಿದ್ದಾರೆ. ಹೌದು. ನಾವು ಆಂದೋಲನಜೀವಿಗಳು ಎನ್ನುತ್ತಿದ್ದಾರೆ.

ಮೊದಲು ಈ ಪದದ ಕುರಿತು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ತಾವೂ "ಆಂದೋಲನ ಜೀವಿ" ಎಂದಿದ್ದಾರೆ. ಏನಿದು ಆಂದೋಲನಜೀವಿ? ಮುಂದೆ ಓದಿ...

ದೇಣಿಗೆ ಸಂಗ್ರಹಿಸುವವರು 'ಚಂದಾ ಜೀವಿ'ಗಳೇ?: ಸರ್ಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆದೇಣಿಗೆ ಸಂಗ್ರಹಿಸುವವರು 'ಚಂದಾ ಜೀವಿ'ಗಳೇ?: ಸರ್ಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆ

 ಸಂಸತ್ತಿನಲ್ಲಿ ಆಂದೋಲನಜೀವಿ ಪದ ಬಳಸಿದ್ದ ಮೋದಿ

ಸಂಸತ್ತಿನಲ್ಲಿ ಆಂದೋಲನಜೀವಿ ಪದ ಬಳಸಿದ್ದ ಮೋದಿ

ರಾಜ್ಯಸಭೆಯಲ್ಲಿ ಸೋಮವಾರ ಭಾಷಣ ಮಾಡುವ ಸಂದರ್ಭ ಪ್ರಧಾನಿ ಮೋದಿ, "ಶ್ರಮಜೀವಿ, ಬುದ್ಧಿಜೀವಿ ಎಂಬ ಪದಗಳ ಕುರಿತು ನೀವು ಕೇಳಿರುತ್ತೀರಿ. ಈಚೆಗೆ ಹೊಸದೊಂದು ಸಂಗತಿಯೂ ಕಂಡುಬರುತ್ತಿದೆ. ಅದಕ್ಕೆ ಕಾರಣರಾದವರನ್ನು ಆಂದೋಲನ ಜೀವಿಗಳು ಎನ್ನಬಹುದು. ಎಲ್ಲೆಲ್ಲಿ ಪ್ರತಿಭಟನೆ ನಡೆಯುತ್ತದೋ ಅಲ್ಲೆಲ್ಲಾ ಈ ಆಂದೋಲನಜೀವಿಗಳು ಇರುತ್ತಾರೆ. ವಕೀಲರು, ವಿದ್ಯಾರ್ಥಿಗಳು, ಕಾರ್ಮಿಕರು ಯಾರೇ ಪ್ರತಿಭಟನೆ ಮಾಡಲಿ ಅಲ್ಲೆಲ್ಲಾ ಇವರಿರುತ್ತಾರೆ. ಕೆಲವೊಮ್ಮೆ ಮುಂದಾಳತ್ವದಲ್ಲಿರುತ್ತಾರೆ. ಕೆಲವೊಮ್ಮೆ ಹಿಂದೆಯಿಂದ ಕೆಲಸ ಮಾಡುತ್ತಿರುತ್ತಾರೆ. ಪ್ರತಿಭಟನೆ ಇಲ್ಲದೆ ಅವರಿಗೆ ಬದುಕಲು ಸಾಧ್ಯವೇ ಇಲ್ಲ. ಅಂಥ "ಆಂದೋಲನಜೀವಿ"ಗಳನ್ನು ಗುರುತಿಸಿ ಅಂಥವರಿಂದ ನಮ್ಮ ದೇಶ ರಕ್ಷಿಸಿಕೊಳ್ಳಬೇಕಿದೆ ಎಂದು ಟೀಕಿಸಿದ್ದರು.

 ಗಾಂಧಿ ಸರ್ವೋತ್ಕೃಷ್ಟ ಆಂದೋಲನಜೀವಿ; ಚಿದಂಬರಂ

ಗಾಂಧಿ ಸರ್ವೋತ್ಕೃಷ್ಟ ಆಂದೋಲನಜೀವಿ; ಚಿದಂಬರಂ

ಮೋದಿಯವರ ಈ ಪದ ಬಳಕೆ ಬಗ್ಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಮುಖಂಡ ಚಿದಂಬರಂ, "ಹೌದು ನಾನು ಆಂದೋಲನ ಜೀವಿ ಹಾಗೂ ಈ ಪದವನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ. ನಾನು ಹೆಮ್ಮೆಯಿಂದ ಆಂದೋಲನ ಜೀವಿ ಎಂದು ಹೇಳಿಕೊಳ್ಳುತ್ತೇನೆ. ಸರ್ವೋತ್ಕೃಷ್ಟ ಆಂದೋಲನ ಜೀವಿ ಎಂದರೆ ಮಹಾತ್ಮ ಗಾಂಧಿ" ಎಂದು ಟ್ವೀಟ್ ಮಾಡಿದ್ದರು.

ಎಂಎಸ್‌ಪಿ ಇತ್ತು, ಇದೆ, ಮುಂದೆ ಇದ್ದೇ ಇರುತ್ತದೆ; ಮೋದಿಎಂಎಸ್‌ಪಿ ಇತ್ತು, ಇದೆ, ಮುಂದೆ ಇದ್ದೇ ಇರುತ್ತದೆ; ಮೋದಿ

 ಚಿದಂಬರಂ ನಂತರ ರಾಹುಲ್ ಟ್ವೀಟ್

ಚಿದಂಬರಂ ನಂತರ ರಾಹುಲ್ ಟ್ವೀಟ್

ಚಿದಂಬರಂ ಈ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದಾರೆ. "ನಾನು ಆಂದೋಲನಜೀವಿ" ಎಂದು ಹೇಳಿದ್ದಾರೆ. ಚಿದಂಬರಂ ಟ್ವೀಟ್ ನಂತರ ವಕೀಲರಾದ ಮೀನಾ ಕಂದಸ್ವಾಮಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಿರ್ವಾಹಕ ಗೌರವ್ ಪಾಂಧಿ ಕೂಡ ತಾವು ಹೆಮ್ಮೆಯ ಆಂದೋಲನ ಜೀವಿ ಎಂದು ಹೇಳಿಕೊಂಡು ತಮ್ಮ ಹೆಸರುಗಳೊಂದಿಗೆ ಆಂದೋಲನ ಜೀವಿ ಎಂಬ ಪದವನ್ನೂ ಸೇರಿಸಿ ಟ್ವೀಟ್ ಮಾಡಿದ್ದಾರೆ.

 ಬಿಜೆಪಿಯವರು

ಬಿಜೆಪಿಯವರು "ಚಂದಾಜೀವಿಗಳು" ಎಂದಿದ್ದ ಅಖಿಲೇಶ್ ಯಾದವ್

ಮೋದಿ ಪದ ಬಳಕೆ ಆಕ್ರೋಶ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿ ಜನರನ್ನು ಚಂದಾಜೀವಿಗಳು ಎಂದು ಕರೆದಿದ್ದರು.
'ಈ ದೇಶವು ಸ್ವಾತಂತ್ರ್ಯ ಪಡೆದಿದ್ದೇ ಪ್ರತಿಭಟನೆಗಳ ಮೂಲಕ. ಪ್ರತಿಭಟನೆಗಳ ಮೂಲಕ ಅಸಂಖ್ಯಾತ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ. ಮಹಿಳೆಯರು ಪ್ರತಿಭಟನೆಯ ಮೂಲಕವೇ ಮತದಾನದ ಹಕ್ಕುಗಳನ್ನು ಗಳಿಸಿಕೊಂಡರು. ಆಫ್ರಿಕಾ, ಜಗತ್ತು ಮತ್ತು ಭಾರತಕ್ಕಾಗಿ ಮಹಾತ್ಮಾ ಗಾಂಧಿ ಅವರು ಪ್ರತಿಭಟನೆ ನಡೆಸಿದ್ದರಿಂದಲೇ ಅವರು ರಾಷ್ಟ್ರಪಿತ ಎನಿಸಿಕೊಂಡರು. ಪ್ರತಿಭಟನೆಗಳ ಬಗ್ಗೆ ಏನೆಂದು ಹೇಳಲಾಗುತ್ತಿದೆ? ಆ ಜನರು 'ಆಂದೋಲನ ಜೀವಿ'ಗಳು. ಹಾಗಾದರೆ ದೇಣಿಗೆಗಳನ್ನು ಸಂಗ್ರಹಿಸಲು ಹೊರಗೆ ತೆರಳುವ ಜನರನ್ನು ಏನೆಂದು ನಾನು ಕರೆಯಬೇಕು? ಅವರು 'ಚಂದಾ ಜೀವಿ ಸಂಘಟನೆ'ಯ ಸದಸ್ಯರಲ್ಲವೇ?' ಎಂದು ರಾಮಮಂದಿರ ನಿರ್ಮಾಣಕ್ಕೆ ಚಂದಾ ಎತ್ತುತ್ತಿರುವ ಬಿಜೆಪಿ ಬೆಂಬಲಿಗರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದರು.

English summary
Congress takes jibe over PM Narendra Modi using the word Andolanjeevi before two days in parliament,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X