ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ವಿನಿಮಯ ಮಿತಿ 2,000 ರೂ.ಗೆ ಇಳಿಕೆ

ಹಹ ವಿನಿಮಯ ಮಿತಿ ನಿಯಮಗಳನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಪ್ರಸ್ತುತ ಒಬ್ಬ ವ್ಯಕ್ತಿ ದಿನವೊಂದಕ್ಕೆ 2000 ರೂ. ವರೆಗೂ ಮಾತ್ರ ಹಣ ವಿನಿಮಯಮಾಡಿಕೊಳ್ಳಬಹುದಾಗಿದೆ ಎಂದು ಗುರುವಾರ ವಿತ್ತ ಇಲಾಖೆ ತಿಳಿಸಿದೆ.

By Prithviraj
|
Google Oneindia Kannada News

ನವದೆಹಲಿ, ನವೆಂಬರ್, 17: ಗರಿಷ್ಠ ಮುಖಬೆಲೆಯ ನೋಟು ನಿಷೇಧ ಪರಿಣಾಮ ಹಣ ವಿನಿಮಯ ಮಾಡಿಕೊಳ್ಳಲು ವಿಧಿಸಿದ್ದ ನಿಯಮಗಳನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ.

ನೂತನ ವಿನಿಮಯ ನಿಯಮಗಳನುಸಾರ ದಿನವೊಂದಕ್ಕೆ ಗರಿಷ್ಠ 2 ಸಾವಿರ ರೂ. ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಗುರುವಾರ ಅದೇಶ ಹೊರಡಿಸಲಾಗಿದೆ. [ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ಡ್ರಾ ಮಾಡಬಹುದು]

An individual can exchange only 2 thousand Rs per day

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮತನಾಡಿದ ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಹಿಂದೆ ವಿಧಿಸಿದ್ದ ನಿಯಮಗಳ ಪ್ರಕಾರ 4,500ರೂ. ಮೌಲದ್ಯ ವರೆಗೂ ಹಳೆಯ ನೋಟುಗಳನ್ನು ನೀಡಿ ಹೊಸ ನೋಟು ಪಡೆದುಕೊಳ್ಳಬಹುದಾಗಿತ್ತು. ಈಗ ಆ ಮಿತಿಯನ್ನು 2,000 ರೂ. ಗೆ ಇಳಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 8ರಂದು ಪ್ರಧಾನಿ ಮೋದಿ ಅವರು 500ರೂ. ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ ನಂತರ ದೇಶದಾದ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಮುಂದುವರೆದಿತ್ತು.

ಇಂದೂ ಸಹ ಹಣ ವಿನಿಮಯಕ್ಕಾಗಿ ಹಲವು ಮಂದಿ ಬ್ಯಾಂಕ್ ಗಳ ಮುಂದೆ ಕ್ಯೂಕಟ್ಟಿ ನಿಲ್ಲುತ್ತಿದ್ದಾರೆ. 9 ದಿನ ಕಳೆದರೂ ಜನರ ಬವಣೆ ನೀಗಿಲ್ಲ. ಹೊಸ ನಿಯಮಗಳು ಶುಕ್ರವಾರದಿಂದ ಜಾರಿಯಾಗಲಿವೆ ಎಂದು ದಾಸ್ ಹೇಳಿದರು.

English summary
The amount of money that an individual can exchange from banks by handing over the old Rs 500 and Rs 1,000 notes has been lowered to Rs 2,000 from Rs 4,500 with effect from Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X