ದೆಹಲಿಯ ಪೊಲೀಸ್ ಕೇಂದ್ರ ಕಚೇರಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ACP!
ನವದೆಹಲಿ, ನವೆಂಬರ್ 29: ದೆಹಲಿಯ ಪೊಲೀಸ್ ಕೇಂದ್ರ ಕಚೇರಿಯ 10 ನೇ ಮಹಡಿಯಿಂದ ಹಾರಿ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಮೃತ ಪೊಲೀಸ್ ಅಧಿಕಾರಿಯನ್ನು 55 ವರ್ಷ ವಯಸ್ಸಿನ ಎಸಿಪಿ ಪ್ರೇಮ್ ಬಲ್ಲಭ್ ಎಂದು ಗುರುತಿಸಲಾಗಿದೆ. ಕಚೇರಿಯ ಹತ್ತನೇ ಮಹಡಿಯಿಂದ ಹಾರಿದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಗಲೇ ಅವರು ಮೃತರಾಗಿದ್ದರು.
ಅತ್ಯುತ್ತಮ ಕಾರ್ಯಕ್ಷಮತೆಗಾಗಿ 2016 ರಲ್ಲಿ ಪೊಲೀಸ್ ಮೆಡಾಲ್ ಪಡೆದಿದ್ದ ಬಲ್ಲಭ್ ಅವರು ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಮೇಲಧಿಕಾರಿಗಳಿಂದ ಅವರು ಕಿರುಕುಳ, ಒತ್ತಡವನ್ನೇನಾದರೂ ಎದುರಿಸುತ್ತಿದ್ದರೇ ಅಥವಾ ವೈಯಕ್ತಿಕವಾಗಿ ಏನಾದರೂ ಸಮಸ್ಯೆಗಳಿದ್ದವೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications