ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ ಕಮಿಟಿ ಸಭೆ: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಸೂಚನೆ

ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖಡಕ್ ಸೂಚನೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಚನೆ. ಬೂತ್ ಮಟ್ಟದಿಂದ ಬಿಜೆಪಿಯನ್ನು ಬಲಪಡಿಸುವಂತೆ ರಾಜ್ಯ ನಾಯಕರಿಗೆ ಆಗ್ರಹ.

|
Google Oneindia Kannada News

ನವದೆಹಲಿ, ಆಗಸ್ಟ್ 27: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರ ನಿವಾಸದಲ್ಲಿ ಶನಿವಾರ ರಾತ್ರಿ (ಆಗಸ್ಟ್ 26) ರಾಜ್ಯ ಬಿಜೆಪಿ ಕೋರ್ ಕಮಿಟಿಯ ಸಭೆ ನಡೆಯಿತು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವಾರು ಬಿಜೆಪಿ ನಾಯಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅಮಿತ್ ಶಾ ಅವರು, ರಾಜ್ಯ ಬಿಜೆಪಿ ನಾಯಕರಿಗೆ ಅನೇಕ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯ ಹೊತ್ತಿಗೆ ಪಕ್ಷವನ್ನು ಬಲಪಡಿಸುವ ಬಗ್ಗೆ ಹೆಚ್ಚು ಒತ್ತು ನೀಡಲು ಅವರು ಸೂಚನೆ ನೀಡಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ರೂಪುರೇಷೆಗಳನ್ನೂ ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.

ಬಹುಮುಖ್ಯವಾಗಿ, ಯಾವುದೇ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವ ಕುರಿತಂತೆ ಯಾವುದೇ ಆಶ್ವಾಸನೆ ನೀಡದಂತೆ ಕಟ್ಟುನಿಟ್ಟಾಗಿ ಸೂಚಿಸಿರುವ ಅಮಿತ್ ಶಾ, ಕೋರ್ ಕಮಿಟಿಯ ಪ್ರತಿಯೊಬ್ಬ ಸದಸ್ಯನೂ ತಲಾ ಮೂರು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡು ಚುನಾವಣೆಯ ಹೊತ್ತಿಗೆ ಪಕ್ಷವನ್ನು ಆ ಜಿಲ್ಲೆಗಳಲ್ಲಿ ಬಲಪಡಿಸುವ ಜವಾಬ್ದಾರಿ ಹೊರಬೇಕೆಂದು ಶಾ ಹೇಳಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ನೀಡಿರುವ ಸೂಚನೆ ಹೀಗಿವೆ.

ಬೂತ್ ಮಟ್ಟದಿಂದ ಬಲಪಡಿಸಲು ನಿರ್ಧಾರ

ಬೂತ್ ಮಟ್ಟದಿಂದ ಬಲಪಡಿಸಲು ನಿರ್ಧಾರ

- 224 ವಿಧಾನಸಭಾ ಕ್ಷೇತ್ರಗಳಿಗೆ ಪೂರ್ಣಾವಧಿ ಕಾರ್ಯಕರ್ತರ ನೇಮಕ
- ಓರ್ವ ಹಿರಿಯ ಪೂರ್ಣಾವಧಿ ಕಾರ್ಯಕರ್ತನ ನೇಮಕ
- ರಾಜ್ಯಾದ್ಯಂತ ಪ್ರತಿ ಬೂತ್ ಗೆ ತಲಾ 9 ಸದಸ್ಯರುಳ್ಳ ಬಿಜೆಪಿ ಸಮಿತಿ ನೇಮಿಸಬೇಕು.

ಸರ್ವಜನಾಂಗಕ್ಕೂ ಪ್ರಾಶಸ್ತ್ಯ

ಸರ್ವಜನಾಂಗಕ್ಕೂ ಪ್ರಾಶಸ್ತ್ಯ

- ಕರ್ನಾಟಕದಲ್ಲಿ ಒಟ್ಟು 54 ಸಾವಿರ ಪೋಲಿಂಗ್ ಬೂತ್ ಗಳಿದ್ದು, ಎಲ್ಲಾ ಬೂತ್ ಗಳಲ್ಲಿ ಒಟ್ಟು 5,60,000 ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಬೇಕು.
- ಸಮಿತಿಯಲ್ಲಿ ಸರ್ವ ಜನಾಂಗಕ್ಕೂ ಪ್ರಾತಿನಿಧ್ಯ ನೀಡಬೇಕು.
- ಎಸ್ಸಿ, ಎಸ್ಟಿ, ಮಹಿಳಾ ಸದಸ್ಯರಿಗೂ ಅವಕಾಶ ನೀಡಬೇಕು.
- ಈ ರೀತಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು.

ನವಭಾರತ ನಿರ್ಮಾಣಕ್ಕೆ ಬೇಕಿದೆ ಕಾರ್ಯಕರ್ತರು

ನವಭಾರತ ನಿರ್ಮಾಣಕ್ಕೆ ಬೇಕಿದೆ ಕಾರ್ಯಕರ್ತರು

- ಕೋರ್ ಕಮಿಟಿ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು.
- ಪ್ರತಿ ಸದಸ್ಯನಿಗೆ ಮೂರು ಜಿಲ್ಲೆಗಳ ಜವಾಬ್ದಾರಿ ನೀಡಬೇಕು.
- ನವಭಾರತ ನಿರ್ಮಾಣಕ್ಕೆ ನವ ಕಾರ್ಯಕರ್ತರ ಸೇರ್ಪಡೆ.

ಟಿಕೆಟ್ ಆಶ್ವಾಸನೆ ನೀಡಬಾರದು

ಟಿಕೆಟ್ ಆಶ್ವಾಸನೆ ನೀಡಬಾರದು

- ನವ ಕಾರ್ಯಕರ್ತರ ಸೇರ್ಪಡೆಗೆ ರ್ಯಾಲಿ ನಡೆಸಬೇಕು, ಯಾತ್ರೆ ನಡೆಸಬೇಕು.
- ಈ ಎಲ್ಲಾ ಕಾರ್ಯಗಳನ್ನು ಸೆಪ್ಟಂಬರ್ 30ರೊಳಗೆ ಮುಗಿಸಬೇಕು.
- ಯಾವುದೇ ನಾಯಕರಿಗೆ ಚುನಾವಣಾ ಟಿಕೆಟ್ ನೀಡುವ ಬಗ್ಗೆಆಶ್ವಾಸನೆ ನೀಡಬಾರದು.

English summary
BJP National President Amit Shah has given a series of instructions to Karnataka BJP Core Committee members in a meeting arranged at his residence in New Delhi. In this meeting in stressed to strengthen the party within forthcoming Assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X