ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ: ಅಮಿತ್ ಶಾ

|
Google Oneindia Kannada News

Recommended Video

ಕೆಸರು ಹೆಚ್ಚಾದಷ್ಟು ಕಮಲ ಅರಳುತ್ತದೆ..! ಹೊಳೆಯುತ್ತದೆ..!

ನವದೆಹಲಿ, ಮೇ 15: "ನಾವು ಭಾರತದ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಆದರೆ ಯಾವ ರಾಜ್ಯದಲ್ಲೂ ಹಿಂಸೆಯಾಗಿಲ್ಲ. ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹೀಗಾಗುತ್ತದೆ ಎಂದರೆ ಅದಕ್ಕೆ ನೀವೇ ಹೊಣೆ. ಆ ಹಿಂಸಾಚಾರದ ಸಮಯದಲ್ಲಿ CRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡರು.

ಅಮಿತ್ ಶಾ ರೋಡ್ ಶೋ: ಭಾರೀ ಹಿಂಸಾಚಾರ, ಕೋಲ್ಕತ್ತಾದಲ್ಲಿ ಘರ್ಷಣೆ, ಕಲ್ಲು ತೂರಾಟಅಮಿತ್ ಶಾ ರೋಡ್ ಶೋ: ಭಾರೀ ಹಿಂಸಾಚಾರ, ಕೋಲ್ಕತ್ತಾದಲ್ಲಿ ಘರ್ಷಣೆ, ಕಲ್ಲು ತೂರಾಟ

ಮೇ 14 ರಂದು ಸಂಜೆ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್ ಶೋ ನಂತರ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ, ಹಿಂಸಾರೂಪಕ್ಕೆ ತಿರುಗಿತ್ತು. ಈ ಕುರಿತು ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಘಟನೆಗೆ ಟಿಎಂಸಿಯೇ ಹೊಣೆ ಎಂದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

"ನಾವು ಭಾರತದ ಎಲ್ಲಾ ರಾಜ್ಯಗಳನ್ನು ಸ್ಪರ್ಧಿಸಿದ್ದೇವೆ. ಕೇವಲ ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ ಮಾತ್ರವಲ್ಲ. ಕಳೆದ ಆರು ಹಂತಗಳ ಮತದಾನದಲ್ಲೂ ಹಿಂಸೆ ಎಲ್ಲಿಯೂ ಆಗಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಇಂಥ ಘಟನೆ ಏಕೆ ನಡೆಯುತ್ತವೆ? ಅಂದರೆ ಇದಕ್ಕೆ ಟಿಎಂಸಿಯೇ ಕಾರಣ" ಎಂದು ಅಮಿತ್ ಶಾ ಕಿಡಿಕಾರಿದರು.

ಸಿಆರ್ ಪಿಎಫ್ ಸಿಬ್ಬಂದಿಯಿಂದ ಉಳಿದ ಜೀವ!

ಸಿಆರ್ ಪಿಎಫ್ ಸಿಬ್ಬಂದಿಯಿಂದ ಉಳಿದ ಜೀವ!

"ರೋಡ್ ಶೊ ಸಂದರ್ಭದಲ್ಲಿ ಎದ್ದ ಹಿಂಸಾಚಾರ ಭಯಂಕರವಾಗಿತ್ತು. ಟಿಎಂಸಿಯೇ ಈ ಹಿಂಸಾಚಾರ ಆರಂಭಿಸಿತ್ತು. ಬೇರೆ ರಾಜ್ಯದಲ್ಲಿ ಇಂಥ ಘಟನೆ ಎಂದಿಗೂ ಆಗುವುದಿಲ್ಲ. ಪಶ್ಚಿಮ ಬಂಗಾಳದಲ್ಲೇ ಯಾಕಾಗುತ್ತದೆ? ನನ್ನೊಂದಿಗೆ ಸಿಆರ್ ಪಿಎಫ್ ಸಿಬ್ಬಂದಿ ಇಲ್ಲವೆಂದಿದ್ದರೆ ನಾನು ಜೀವಂತವಾಗಿ ವಾಪಸ್ ಬರುತ್ತಿರಲಿಲ್ಲ"- ಅಮಿತ್ ಶಾ

ಅಮಿತ್ ಶಾ ಏನು ದೇವರಾ? ಕಿಡಿಕಾರಿದ ಮಮತಾ ಬ್ಯಾನರ್ಜಿಅಮಿತ್ ಶಾ ಏನು ದೇವರಾ? ಕಿಡಿಕಾರಿದ ಮಮತಾ ಬ್ಯಾನರ್ಜಿ

ಕೆಸರೆರೆಚಿದಷ್ಟೂ ಕಮಲ ಅರಳುತ್ತೆ!

ಕೆಸರೆರೆಚಿದಷ್ಟೂ ಕಮಲ ಅರಳುತ್ತೆ!

"ಪಶ್ಚಿಮ ಬಂಗಾಳದಲ್ಲಿ ಮೇ 23 ರ ನಂತರ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಕೊನೆ ಸಿಗುತ್ತದೆ. ಬಿಜೆಪಿ ವಿರುದ್ಧ ನೀವು ಎಷ್ಟೇ ಷಢ್ಯಂತ್ರ ಮಾಡಿದರೂ ಪ್ರಯೋಜನವಿಲ್ಲ. ನೀವು(ಮಮತಾ ಬ್ಯಾನರ್ಜಿ) ನನಗಿಂತ ಹಿರಿಯರಿರಬಹುದು. ಆದರೆ ರಾಜಕೀಯದಲ್ಲಿ ನಾನು ನಿಮಗಿಂತ ಹೆಚ್ಚು ಅನುಭವ ಹೊಂದಿದ್ದೇನೆ. ಕೆಸರೆರಿಚಿದಷ್ಟೂ ಕಮಲ ಅರಳುತ್ತದೆ ಎಂಬುದು ಗೊತ್ತಿರಲಿ"- ಅಮಿತ್ ಶಾ

ವಿದ್ಯಾಸಾಗರ ಪ್ರತಿಮೆ ಧ್ವಂಸ ಮಾಡಿದ್ದು ಟಿಎಂಸಿ

ವಿದ್ಯಾಸಾಗರ ಪ್ರತಿಮೆ ಧ್ವಂಸ ಮಾಡಿದ್ದು ಟಿಎಂಸಿ

"ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸ ಮಾಡಿದ್ದು ಟಿಎಂಸಿ ಕಾರ್ಯಕರ್ತರು. ಬಿಜೆಪಿ ಕಾರ್ಯಕರ್ತರು ಕಾಲೇಜಿನ ಹೊರಗಿನ ರಸ್ತತೆಯಲ್ಲಿದ್ದರು. ರೋಡ್ ಶೋ ಅಲ್ಲೇ ನಡೆಯುತ್ತಿತ್ತು. ಅಂದಮೇಲೆ ಬಿಜೆಪಿ ಕಾರ್ಯಕರ್ತರು ಪ್ರತಿಮೆ ಒಡೆಯುವುದಕ್ಕೆ ಹೇಗೆ ಸಾಧ್ಯ. ಟಿಎಂಸಿ ಕಾರ್ಯಕರ್ತರೇ ಅನುಕಂಪಕ್ಕಾಗಿ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ"- ಅಮಿತ್ ಶಾ

ಏನಿದು ಹಿಂಸಾಚಾರ?

ಏನಿದು ಹಿಂಸಾಚಾರ?

ಮೇ 14 ರಂದು ಸಂಜೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಈಶ್ವರಚಂದ್ರ ವಿದ್ಯಾಸಾಗರ ಕಾಲೇಜು ರಸ್ತೆಯಲ್ಲಿ ಅಮಿತ್ ಶಾ ರೋಡ್ ಶೋ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಆರಂಭವಾಗಿತ್ತು. ತೃಣಮೂಲ ಕಾಂಗ್ರೆಸ್ ಬೆಂಬಲಿಗರು 'ಅಮಿತ್ ಶಾ ವಾಪಸ್ ತೆರಳಿ' ಎಂದು ಘೋಷಣೆ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಆರಂಭವಾದ ಹಿಂಸಾಚಾರದಿಂದ ವಾಹನಗಳಿಗೆ ಬೆಂಕಿ ಹಚ್ಚಿ, ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ನಡೆಯಿತು. ಅಮಿತ್ ಶಾ ಅವರ ರೋಡ್ ಶೋ ಆ ಸಮಯದಲ್ಲಷ್ಟೇ ಮುಗಿದಿದ್ದರಿಂದ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು.

English summary
Amit Shah, BJP president in pressmeet in Delhi said, Mamata Banerjee claims that BJP is doing riots, I want to tell her, we are fighting in every state in the nation,unlike you on 42 seats in West Bengal. Violence didn't take place in 6 phases of elections anywhere but Bengal which proves that TMC is responsible for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X