Kane Williamson: ನ್ಯೂಜಿಲೆಂಡ್ ದಿಗ್ಗಜ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಣೆ

Kane Williamson: ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ತಮ್ಮ 16 ವರ್ಷಗಳ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಟಗಾರ, ಕಿವೀಸ್ ಪಡೆಯ ಯಶಸ್ವಿ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. 35 ವರ್ಷ ವಯಸ್ಸಿನ ಈ ದಿಗ್ಗಜ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಟೆಸ್ಟ್ ಸರಣಿಯ ಮಧ್ಯದಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Kane Williamson Retirement New Zealand Legend Announces Shock Exit From International Cricket

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿದ ವಿಲಿಯಮ್ಸನ್

ಈ ಹಿನ್ನೆಲೆ ಅವರು ಸರಣಿಯ ಮುಂಬರುವ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದ ಅವರು, ಈಗ ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್‌ಗೂ ವಿದಾಯ ಹೇಳುವ ಮೂಲಕ ತಮ್ಮ 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಸಂಪೂರ್ಣ ತೆರೆ ಎಳೆದಿದ್ದಾರೆ.

ವಿಲಿಯಮ್ಸನ್ ಭಾವುಕ ನುಡಿ

ತಮ್ಮ ನಿವೃತ್ತಿಯ ನಿರ್ಧಾರದ ಕುರಿತು ಭಾವುಕರಾಗಿ ಮಾಹಿತಿ ಹಂಚಿಕೊಂಡಿರುವ ಕೇನ್ ವಿಲಿಯಮ್ಸನ್, 'ನಾನು ಈ ವಿದಾಯದ ಕುರಿತು ಸಾಕಷ್ಟು ಸಮಯದಿಂದ ಯೋಚಿಸುತ್ತಿದ್ದೆ. ಆದರೆ ಕಳೆದ ಕೆಲವು ದಿನಗಳಿಂದೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಗೌರವಯುತವಾಗಿ ಹಿಂದೆ ಸರಿಯಲು ಇದೇ ಸೂಕ್ತ ಸಮಯ ಎನ್ನುವುದು ನನಗೆ ಅನ್ನಿಸಿತು. ನ್ಯೂಜಿಲೆಂಡ್ ಪರ ಕಣಕ್ಕಿಳಿದ ಪ್ರತಿ ಪಂದ್ಯದಲ್ಲೂ ನನ್ನ ನೂರಕ್ಕೆ ನೂರರಷ್ಟು ಶ್ರಮವನ್ನು ಹಾಕಿದ್ದೇನೆ ಎನ್ನುವ ಹೆಮ್ಮೆ ನನಗಿದೆ,' ಎಂದು ಹೇಳಿದ್ದಾರೆ.

'ಇಷ್ಟು ದಿನ ನನ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರ ಹಸಿವು ಮತ್ತು ಕಠಿಣ ಪರಿಶ್ರಮ ಪಡುವ ಉತ್ಸಾಹ ಇತ್ತು. ಆದರೆ ಈಗ ಮೊದಲಿನಂತೆ ಮೈದಾನದಲ್ಲಿ ಆ ಶ್ರಮವನ್ನು ಹಾಕಲು ನನ್ನ ದೇಹ ಮತ್ತು ಮನಸ್ಸು ಸಂಪೂರ್ಣವಾಗಿ ಸಹಕರಿಸುತ್ತಿಲ್ಲ. ಹಾಗಾಗಿ ನನಗಿಂತ ಉತ್ತಮ ಆಟಗಾರರಿಗೆ ದಾರಿ ಮಾಡಿಕೊಡುವುದು ಸೂಕ್ತ ಎಂದು ಭಾವಿಸಿದೆ,' ಅಂತಾ ಹೇಳಿದ್ದಾರೆ.

'ಪ್ರಸ್ತುತ ನ್ಯೂಜಿಲೆಂಡ್ ತಂಡವು ಸಾಗುತ್ತಿರುವ ಹಾದಿಯ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ತಂಡದಲ್ಲಿ ಅದ್ಭುತ ಸಾಧನೆ ಮಾಡುವ ಹಂಬಲ ಮತ್ತು ಕೌಶಲ್ಯ ಹೊಂದಿರುವ ಸಾಕಷ್ಟು ಯುವ ಪ್ರತಿಭೆಗಳಿದ್ದಾರೆ. ಇಷ್ಟು ಸುದೀರ್ಘ ಕಾಲ ಈ ಅಪರೂಪದ ತಂಡದ ಭಾಗವಾಗಿದ್ದಕ್ಕೆ ಹಾಗೂ ಇಲ್ಲಿ ನನಗೆ ಸಹಕರಿಸಿದವರೆಲ್ಲರಿಗೂ ಧನ್ಯವಾದ ಹೇಳಲು ಭಯಸುತ್ತೇನೆ,' ಎಂದು ತಿಳಿಸಿದ್ದಾರೆ.

ವಿಲಿಯಮ್ಸನ್ ಸಾಧನೆಯ ಅಂಕಿ-ಅಂಶಗಳು

* ಒಟ್ಟು ಪಂದ್ಯಗಳು: 378 ಅಂತಾರಾಷ್ಟ್ರೀಯ ಪಂದ್ಯಗಳು

* ಒಟ್ಟು ರನ್‌ಗಳು: 19,346

* ಶತಕಗಳು: 48 ಆಕರ್ಷಕ ಶತಕಗಳು

* ದ್ವಿಶತಕಗಳು: 6

* ಅರ್ಧಶತಕ: 103 ಟೆಸ್ಟ್ ಕ್ರಿಕೆಟ್: ( ಟೆಸ್ಟ್ ಕ್ರಿಕೆಟ್‌ನಲ್ಲಿ 38, ಏಕದಿನ ಕ್ರಿಕೆಟ್‌ನಲ್ಲಿ 47 ಹಾಗೂ ಟಿ-20 ಕ್ರಿಕೆಟ್‌ನಲ್ಲಿ 18 ಅರ್ಧಶತಕಗಳನ್ನು ಗಳಿಸಿದ್ದಾರೆ)

ಕಿವೀಸ್ ಪಡೆಯನ್ನು ಮುನ್ನಡೆಸಿದ ಯಶಸ್ವಿ ಜನನಾಯಕ

ಬ್ಯಾಟಿಂಗ್ ಜೊತೆಗೆ 2016 ರಿಂದ 2024 ರವರೆಗೆ ನ್ಯೂಜಿಲೆಂಡ್ ತಂಡವನ್ನು ಎಲ್ಲಾ ಮಾದರಿಗಳಲ್ಲಿ ಮುನ್ನಡೆಸಿದ ಕೀರ್ತಿ ಇವರದ್ದಾಗಿದೆ. ಇವರ ಚಾಣಾಕ್ಷ ನಾಯಕತ್ವದ ಅವಧಿಯಲ್ಲಿ ಕಿವೀಸ್ ಪಡೆ ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.

* ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್: 2021 ರಲ್ಲಿ ಭಾರತದ ವಿರುದ್ಧ ನಡೆದ ಉದ್ಘಾಟನಾ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ನ್ಯೂಜಿಲೆಂಡ್ ಜಯಗಳಿಸಿ ಟ್ರೋಫಿ ಮುಡಿಗೇರಿಸಿಕೊಂಡಿದ್ದರು.

* ವಿಶ್ವಕಪ್‌ಗಳಲ್ಲಿ ಪ್ರಾಬಲ್ಯ: ಇವರ ನೇತೃತ್ವದಲ್ಲೇ ನ್ಯೂಜಿಲೆಂಡ್ ತಂಡವು ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ತಲುಪಿದ್ದಲ್ಲದೆ, 3 ಬಾರಿ ಸೆಮಿಫೈನಲ್ ಹಂತ ತಲುಪಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು.

* ವಿಲಿಯಮ್ಸನ್ ಅವರು 2015 ರಲ್ಲಿ 'ಐಸಿಸಿ ಕ್ರಿಕೆಟರ್ ಆಫ್ ದಿ ಇಯರ್' ಮತ್ತು 2019 ರಲ್ಲಿ 'ಐಸಿಸಿ ಟೆಸ್ಟ್ ಪ್ಲೇಯರ್ ಆಫ್ ದಿ ಇಯರ್' ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ಕ್ರಿಕೆಟ್‌ನ ಅತ್ಯುನ್ನತ ಗೌರವವಾದ 'ಸರ್ ರಿಚರ್ಡ್ ಹ್ಯಾಡ್ಲಿ ಮೆಡಲ್' ಅನ್ನು ಬರೋಬ್ಬರಿ 4 ಬಾರಿ ಪಡೆದ ಅಪರೂಪದ ಹೆಗ್ಗಳಿಕೆ ಇವರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+