• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಗಾಂಧಿ ಸ್ಥಾನಕ್ಕೆ ಸಮರ್ಥ ಯುವಕರನ್ನೇ ಕಾಂಗ್ರೆಸ್ ಬಯಸುತ್ತಿದೆ:ಅಮರೀಂದರ್

|

ನವದೆಹಲಿ, ಜುಲೈ 6: ರಾಹುಲ್ ಗಾಂಧಿ ಬದಲಿ ಸ್ಥಾನಕ್ಕೆ ಯುವಕರನ್ನೇ ನೇಮಿಸುವ ಅವಶ್ಯಕತೆ ಕಾಂಗ್ರೆಸ್‌ಗೆ ಇದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ರಾಜೀನಾಮೆ ಕುರಿತು ನಿತ್ಯ ಕಾಂಗ್ರೆಸ್ ಮುಖಂಡರುಗಳು ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಅಮರಿಂದರ್ ಸಿಂಗ್ ರಾಹುಲ್ ಗಾಂಧಿ ಜಾಗಕ್ಕೆ ಉತ್ಸುಕ, ಬಿಸಿ ರಕ್ತದ ಯುವಕರೇ ಬರಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸುಶೀಲ್ ಕುಮಾರ್ ಶಿಂಧೆ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಕೇಳಿ ಬಂದಿದೆ. ಶಿಂಧೆ ಅವರಿಗೆ 77 ವರ್ಷ, ಖರ್ಗೆಗೆ ಅವರಿಗೆ 76 ವರ್ಷ ವಯಸ್ಸಾಗಿದೆ. ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಇನ್ನು ಖರ್ಗೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ಸೂಕ್ತರನ್ನು ಹುಡುಕುವ ಜವಾಬ್ದಾರಿಯನ್ನು ಪಕ್ಷಕ್ಕೆ ನೀಡಿದ್ದಾರೆ. ಆದರೆ ಚುನಾವಣೆ ಸೋಲಿನ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ, ಇದು ಪಕ್ಷದ ಅಭಿವೃದ್ಧಿಗೆ ಮಾರಕವಾಗುತ್ತಿತ್ತು ಎಂದು ರಾಹುಲ್ ಹೇಳಿದ್ದರು.

2017ರಲ್ಲಿ ಸೋನಿಯಾ ಗಾಂಧಿ ಅವರಿಂದ ರಾಹುಲ್ ಗಾಂಧಿ ಅಧಿಕಾರ ಪಡೆದುಕೊಂಡಿದ್ದರು.

English summary
Punjab chief minister Amarinder singh ays congress want young blood to replace rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X