ದೆಹಲಿ: ಅತಿಕ್ರಮಣ ವಿರೋಧಿ ಅಭಿಯಾನಕ್ಕೆ ಅಡ್ಡಿಪಡಿಸಿದ ಎಎಪಿ ಶಾಸಕ ಬಂಧನ
ದೆಹಲಿ ಮೇ 12: ಮದನ್‌ಪುರ ಖಾದರ್ ಪ್ರದೇಶದಲ್ಲಿ ಉದ್ದೇಶಿತ ಅತಿಕ್ರಮಣ ವಿರೋಧಿ ಅಭಿಯಾನವನ್ನು ಕೈಗೊಳ್ಳಲು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಅಧಿಕಾರಿಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಎಎಪಿ ನಾಯಕನ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ಪೊಲೀಸರು ಇನ್ನೂ ವಿವರಗಳನ್ನು ಒದಗಿಸಿಲ್ಲ. ಆದರೆ "ಅಮಾನತುಲ್ಲಾ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ" ಎಂದು ಡಿಸಿಪಿ (ಆಗ್ನೇಯ) ಇಶಾ ಪಾಂಡೆ ಹೇಳಿದ್ದಾರೆ.

ಮದನ್‌ಪುರ ಖಾದರ್‌ನಲ್ಲಿ ನಡೆದ ಅಕ್ರಮ ಭೂ ವಿರೋಧಿ ಆಂದೋಲನದ ವೇಳೆ ಅಕ್ರಮ ಕಟ್ಟಡ ಕೆಡವಲು ಅಧಿಕಾರಿಗಳಿಗೆ ಅವಕಾಶ ನೀಡದ ಶಾಸಕ ಖಾನ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕ್ರಿಯೆಯ ಮೇಲೆ ಕೆರಳಿದ ಕೆಲವು ಜನರು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡುವಂತೆ ಒತ್ತಾಯಿಸಿದ ನಂತರ ಕೆಡವಲು ಚಾಲನೆಯ ಸಮಯದಲ್ಲಿ ಹಿಂಸಾಚಾರ ಭುಗಿಲೆದ್ದಿತು.

ಮೇ 13 ರವರೆಗೆ ಅಕ್ರಮ ಭೂಮಿ ತೆರವುಗೊಳಿಸವ ಅಭಿಯಾನ ನಡೆಯಲಿದ್ದು ಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ವೇಳಾ ಪಟ್ಟಿ ಪ್ರಕಾರ ಮೇ 13 ರಂದು ಖಡ್ಡಾ ಕಾಲೋನಿಯಲ್ಲಿ ಅಕ್ರಮ ಭೂ ತೆರವು ಕಾರ್ಯಚರಣೆ ನಡೆಯುತ್ತದೆ.












Click it and Unblock the Notifications