ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್ ಫಂಗಸ್ ಅನುಮಾನಗಳಿಗೆ ಇಲ್ಲಿದೆ ಉತ್ತರ: ಏಮ್ಸ್ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

|
Google Oneindia Kannada News

ನವದೆಹಲಿ, ಮೇ 20: ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕಾಸಿಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಈಗಾಗಲೇ ನೂರಾರು ಕೊರೊನಾ ವೈರಸ್ ಸೋಂಕಿತರು ಇದಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ಅನಿಯಂತ್ರಿತ ಮಧುಮೇಹ ಹೊಂದಿದವರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯ್ಡ್ ಡೋಸ್ ಪಡೆದ ರೋಗಿಗಳು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ.

ಅಪರೂಪ ಹಾಗೂ ಅಪಾಯಕಾರಿಯಾದ ಬ್ಲ್ಯಾಕ್ ಫಂಗಸ್‌ಗೆ ಮಹಾರಾಷ್ಟ್ರದಲ್ಲಿ ಈವರೆಗೂ 90 ಜನರು ಪ್ರಾಣವನ್ನು ಕಳೆದುಕೊಂಡಿದ್ದರೆ, ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ಜನರಲ್ಲಿ ಪತ್ತೆಯಾಗಿದೆ. ಹೀಗಾಗಿ ರಾಜಸ್ಥಾನ ಸರ್ಕಾರ ರಾಜ್ಯದ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಕರ್ನಾಟಕದಲ್ಲಿಯೂ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ನಿತ್ಯವೂ ಪತ್ತೆಯಾಗುತ್ತಿದೆ.

AIIMS guidelines on how to identify black fungus cases and what to do

ಏಮ್ಸ್ ಮಾರ್ಗಸೂಚಿ ಪ್ರಕಾರ ಯಾರಿಗೆಲ್ಲಾ ಅಪಾಯ?

1. ಏಮ್ಸ್ ನೀಡಿದ ಮಾರ್ಗಸೂಚಿಯ ಪ್ರಕಾರ ಅನಿಯಂತ್ರಿತ ಮಧುಮೇಹ ಸಮಸ್ಯೆಯನ್ನು ಹೊಂದಿರುವವರು ಈ ಸಮಸ್ಯೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಮಧುಮೇಹ ಕೀಟೋಆಸಿಡೋಸಿಸ್(ಮಧುಮೇಹದ ಗಂಭೀರ ಸ್ವರೂಪವಾಗಿದ್ದು, ರೋಗಿಗಳ ದೇಹದಲ್ಲಿ ಕೀಟೋನ್ಸ್ ಎಂಬ ರಕ್ತ ಆಮ್ಲಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುತ್ತದೆ), ಅಧಸ್ಟಿರಾಯ್ಡ್ ಗಳನ್ನು ಪಡೆದುಕೊಂಡಿರುವ ಮಧುಮೇಹಿಗಳು ಅಥವಾ ಟೊಸಿಲಿಜುಮಾಬ್(tocilizumab) ಚಿಕಿತ್ಸೆ ಪಡೆದ ರೋಗಿಗಳು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗುವ ಅಪಾಯವಿದೆ ಎಂದು ಏಮ್ಸ್ ಹೇಳಿದೆ.

2. ರೋಗನಿರೋಧಕ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದ ರೋಗಿಗಳು ಅಥವಾ ಆ್ಯಂಟಿ ಕ್ಯಾನ್ಸರ್ ಚಿಕಿತ್ಸೆ ಹಾಗೂ ದೀರ್ಘಕಾಲದ ಅನಾರೋಗ್ಯವನ್ನು ಹೊಂದಿದ ರೋಗಿಗಳು ಕೂಡ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

3. ಕೊರೊನಾ ವೈರಸ್‌ನ ಗಂಭೀರ ಸಮಸ್ಯೆಗೆ ಒಳಗಾಗಿ ವೆಂಟಿಲೇಟರ್ ಮಾಸ್ಕ್ ಅಥವಾ ಮೂಗಿನ ಕೊಳವೆ ಮೂಲಕ ಆಮ್ಲಜನಕದ ಸಹಾಯದಲ್ಲಿದ್ದ ರೋಗಿಗಳು ಕೂಡ ಬ್ಲ್ಯಾಕ್ ಫಂಗಸ್‌ಗೆ ತುತ್ತಾಗುವ ಅಪಾಯವಿದೆ.

4. ಹೀಗೆ ಬ್ಲ್ಯಾಕ್ ಫಂಗಸ್ ಅಪಾಯವನ್ನು ಹೊಂದಿರುವ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ವೈದ್ಯರ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಲು ಏಮ್ಸ್ ವೈದ್ಯರು ಸಲಹೆ ನೀಡಿದ್ದಾರೆ.

ಕೋವಿಡ್-19 ಚಿಕಿತ್ಸೆಗೆ ಔಷಧಗಳ ಕೊರತೆ ಇಲ್ಲ: ಸಚಿವ ಮನ್ಸುಖ್ಕೋವಿಡ್-19 ಚಿಕಿತ್ಸೆಗೆ ಔಷಧಗಳ ಕೊರತೆ ಇಲ್ಲ: ಸಚಿವ ಮನ್ಸುಖ್

ಕಪ್ಪು ಶಿಲೀಂಧ್ರ ಸೋಂಕನ್ನು ಕಂಡುಹಿಡಿಯುವುದು ಹೇಗೆ?

ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ನಂತರ ಬ್ಲ್ಯಾಕ್ ಫಂಗಸ್‌ ಮುನ್ನೆಚ್ಚರಿಕಾ ಕ್ರಮವಾಗಿ ಈ ಮುನ್ಸೂಚನೆಗಳನ್ನು ಗಮನಿಸಬೇಕು

1. ಕಪ್ಪುದ್ರವದ ಅಸಹಜ ವಿಸರ್ಜನೆ, ಮೂಗಿನಲ್ಲಿ ರಕ್ತಸ್ರಾವ ಅಥವಾ ಹೆಪ್ಪುಗಟ್ಟುವಿಕೆ

2. ಮೂಗಿನ ಕಟ್ಟುವಿಕೆ, ತಲೆನೋವು ಅಥವಾ ಕಣ್ಣಿನ ನೋವು, ಕಣ್ಣುಗಳ ಸುತ್ತಲೂ ಸೆಳೆತದ ಅನುಭವ, ಎರಡೆರಡು ಗೋಚರ, ಕಣ್ಣು ಕೆಂಪಾಗುವಿಕೆ, ದೃಷ್ಟಿ ಕಳೆದುಕೊಳ್ಳುವುದು, ಕಣ್ಣು ಮುಚ್ಚುವಾಗ ಸಮಸ್ಯೆ, ಕಣ್ಣು ತೆರೆಯಲು ಅಸಮರ್ಥತೆ.

3. ಮುಖದಲ್ಲಿ ಮರಗಟ್ಟಿದ ಅನುಭವ ಅಥವಾ ಜುಮ್ಮೆನಿಸುವುವ ಅನುಭವ

4. ಜಗಿಯಲು ಅಥವಾ ಬಾಯಿ ತೆರೆಯುವಲ್ಲಿ ತೊಂದರೆ.

ಬ್ಲ್ಯಾಕ್ ಫಂಗಸ್ ಪತ್ತೆಹಚ್ಚಲು ಏಮ್ಸ್ ನೀಡಿದ ಮಾರ್ಗಸೂಚಿಯಲ್ಲಿ ಏನಿದೆ?

1. ಮೇಲಿನ ಲಕ್ಷಣಗಳಿಗೆ ಪೂರಕವಾಗಿ ಯಾವುದೇ ಅಸಹಜ ಬೆಳವಣಿಗೆಗಳು ಕಂಡುಬಂದ ಸಂದರ್ಭದಲ್ಲಿ ರೋಗಿ ಇಎನ್‌ಟಿ ವೈದ್ಯರು, ನೇತ್ರಶಾಸ್ತ್ರಜ್ಞರು ಅಥವಾ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರೊಂದಿಗೆ ತಕ್ಷಣದ ಸಮಾಲೋಚನೆ ನಡೆಸಬೇಕು

2. ನಿರಂತರ ಚಿಕಿತ್ಸೆ ಮತ್ತು ಚಿಕಿತ್ಸೆ ಮತ್ತು ಫಾಲೋಅಪ್. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶದ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಮೇಲ್ವಿಚಾರಣೆ

3. ನಿರಂತರ ಔಷಧಿಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ

Recommended Video

CoviSelf Covid 19 Test at Home Mylab Antigen Test | Oneindia Kannada

4. ಸ್ಟಿರಾಯ್ಡ್ ಅಥವಾ ಆ್ಯಂಟಿಬಯೋಟಿಕ್ ಅಥವಾ ಆಂಟಿಫಂಗಲ್ ಔಷಧಿಗಳ ಮೂಲಕ ಸ್ವಯಂ ಚಿಕಿತ್ಸೆಗೆ ಅವಕಾಶವಿಲ್ಲ.

English summary
AIIMS has released new guidelines on how to o identify black fungus cases and what to do.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X