ರೈತರಿಗೆ ಮುಕ್ತ ಪತ್ರ ಬರೆದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌: ಹೊಸ ಕಾನೂನು ನಿಮ್ಮನ್ನು ಸಶಕ್ತಗೊಳಿಸುತ್ತದೆ!

ನವದೆಹಲಿ, ಡಿಸೆಂಬರ್ 17: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನು ವಿರುದ್ಧ ಅನೇಕ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವುದು ಮೋದಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಮುಕ್ತ ಪತ್ರ ಬರೆದಿದ್ದಾರೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ನಿರಂತರವಾಗಿ ಆಂದೋಲನ ನಡೆಸುತ್ತಿರುವ ರೈತರು ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ನರೇಂದ್ರ ತೋಮರ್ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪರಿಚಯಿಸಲಾದ ಹೊಸ ಕೃಷಿ ಕಾನೂನುಗಳು ದೇಶದ ಮತ್ತು ರೈತರ ಹಿತಕ್ಕಾಗಿ ರಚಿಸಲಾಗಿದೆ. ಆದರೆ ಅನಾವಶ್ಯಕವಾಗಿ ಹೊಸ ಕಾನೂನುಗಳ ಬಗ್ಗೆ ಗೊಂದಲ ಸೃಷ್ಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನರೇಂದ್ರ ಸಿಂಗ್ ತೋಮರ್ ತಮ್ಮ ಪತ್ರದಲ್ಲಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್ ಎಂಬ ಮಂತ್ರವನ್ನು ಅನುಸರಿಸಿ, ''ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ಎಲ್ಲರ ಹಿತಕ್ಕಾಗಿ ತಾರತಮ್ಯವಿಲ್ಲದೆ ಎಲ್ಲವನ್ನು ಮಾಡಲು ಪ್ರಯತ್ನಿಸಿದೆ ಎಂದು ನಾನು ಎಲ್ಲಾ ರೈತ ಸಹೋದರ, ಸಹೋದರಿಯರಿಗೆ ಹೇಳಲು ಬಯಸುತ್ತೇನೆ . ಆರು ವರ್ಷಗಳ ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ. ರೈತರ ಹಿತದೃಷ್ಟಿಯಿಂದ ಮಾಡಿದ ಈ ಸುಧಾರಣೆಗಳು ಭಾರತೀಯ ಕೃಷಿಯಲ್ಲಿ ಹೊಸ ಅಧ್ಯಾಯದ ಅಡಿಪಾಯವನ್ನು ರೂಪಿಸುತ್ತವೆ, ದೇಶದ ರೈತರನ್ನು ಹೆಚ್ಚು ಸ್ವತಂತ್ರವಾಗಿಸುತ್ತದೆ, ಅಧಿಕಾರ ನೀಡುತ್ತದೆ'' ಎಂದಿದ್ದಾರೆ

ಇನ್ನು ಹೊಸ ಕಾನೂನುಗಳ ಮೂಲಕ ಎಂಎಸ್‌ಪಿ ಬಗ್ಗೆ ಸುಳ್ಳು ಮಾತ್ರ ಹರಡಿದ್ದು ಅದು ಕೊನೆಗೊಳ್ಳುತ್ತದೆ ಎಂದು ಹೇಳಲಾಗಿದೆ ಎಂದು ನರೇಂದ್ರ ಸಿಂಗ್ ತೋಮರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಎಂಎಸ್‌ಪಿ ಮುಂದುವರಿಯುತ್ತದೆ ಈ ಕುರಿತು ಎಲ್ಲಾ ರೀತಿಯ ಭರವಸೆಗಳನ್ನು ನೀಡಲು ಸರ್ಕಾರ ಸಿದ್ಧವಾಗಿದೆ. ಅದೇ ಸಮಯದಲ್ಲಿ, ಮಂಡಿಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗುತ್ತಿದೆ.

Agriculture Minister Agriculture Minister Narendra Singh Tomar over the new farm laws

ರೈತರಿಂದ ಭೂಮಿಯನ್ನು ಕಸಿದುಕೊಳ್ಳಲಾಗುವುದು ಎಂದು ಗುತ್ತಿಗೆ ಕೃಷಿಯ ಬಗ್ಗೆ ಹೇಳಲಾಗುತ್ತಿರುವ ವಿಷಯಗಳೂ ತಪ್ಪಾಗಿದೆ ಎಂದು ತೋಮರ್ ಹೇಳಿದ್ದಾರೆ. ರೈತರಿಗೆ ತಮ್ಮ ಭೂಮಿಯ ಬಗ್ಗೆ ಯಾವುದೇ ಭಯ ಬೇಡ. ಮಾಲೀಕತ್ವವು ಅವರೊಂದಿಗೆ ಉಳಿಯುತ್ತದೆ ಮತ್ತು ಅವರು ಬಯಸಿದರೆ, ಅವರು ಒಪ್ಪಂದವನ್ನು ಕೊನೆಗೊಳಿಸುತ್ತಾರೆ ಎಂದಿದ್ದಾರೆ.

ಕೇಂದ್ರ ಕೃಷಿ ಸಚಿವರು ರೈತರಿಗೆ ಬರೆದ ಪತ್ರ ಒಟ್ಟು ಎಂಟು ಪುಟಗಳಲ್ಲಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಕೇಂದ್ರ ಕೃಷಿ ಸಚಿವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

''ನರೇಂದ್ರ ಸಿಂಗ್ ತೋಮರ್ ಜಿಯವರು ರೈತ ಸಹೋದರ, ಸಹೋದರಿಯರಿಗೆ ಪತ್ರ ಬರೆದು ಸಭ್ಯ ಸಂಭಾಷಣೆ ನಡೆಸಲು ಪ್ರಯತ್ನಿಸಿದ್ದಾರೆ. ಎಲ್ಲರೂ ಇದನ್ನು ಓದಲು ವಿನಂತಿಸುತ್ತೇನೆ. ಇದನ್ನು ಸಾಧ್ಯವಾದಷ್ಟು ಜನರಿಗೆ ತಲುಪುವಂತೆ ದೇಶವಾಸಿಗಳನ್ನು ಕೋರಲಾಗಿದೆ'' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಸಿಂಗ್ ತೋಮರ್ ತಮ್ಮ ಪತ್ರದಲ್ಲಿ ಕೃಷಿಕರನ್ನು ಒಲಿಸುವುದರ ಜೊತೆಗೆ ವಿರೋಧ ಪಕ್ಷಗಳನ್ನೂ ಗುರಿಯಾಗಿಸಿ ಮಾತನಾಡಿದ್ದಾರೆ. ನಾನು ರೈತರ ಕುಟುಂಬದಿಂದ ಬಂದವನು. ನನಗೆ ಕೃಷಿ ಅರ್ಥವಾಗಿದೆ. ಕೃಷಿ ಕಾನೂನುಗಳ ಮೇಲೆ ರಾಜಕೀಯ ಸ್ವಾರ್ಥದಿಂದ ಪ್ರೇರಿತವಾದ ಸುಳ್ಳುಗಳನ್ನು ಕೆಲವರು ಹರಡುತ್ತಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+