ದೆಹಲಿ: 50 ದಿನಗಳ ಬಳಿಕ ಒಂದೇ ದಿನ 2 ಸಾವಿರ ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ಆಗಸ್ಟ್ 31: ದೆಹಲಿಯಲ್ಲಿ 50 ದಿನಗಳ ಬಳಿಕ ಒಂದೇ ದಿನ 2 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

Recommended Video

      Goaದಲ್ಲಿ20 ರುಪಾಯಿಗೆ ಸಿಗ್ತಿದೆ ಬಿಯರ್ | Oneindia Kannada

      ಜುಲೈ 10ರ ಬಳಿಕ ಮೊದಲ ಬಾರಿಗೆ ಇಷ್ಟೊಂದು ಪ್ರಕರಣ ದಾಖಲಾಗಿದೆ. ಅಂದು 1954 ಪ್ರಕರಣಗಳು ಪತ್ತೆಯಾಗಿವೆ. ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೂ ಅನುಮತಿ ನೀಡಲಾಗಿದೆ.

      ಕಳೆದ 24 ಗಂಟೆಯಲ್ಲಿ 2024 ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಒಟ್ಟು 1,73,390 ಪ್ರಕರಣಗಳಿವೆ. 22 ಮಂದಿ ಸಾವನ್ನಪ್ಪಿದ್ದು, ಒಟ್ಟು 4426 ಮಂದಿ ಮೃತಪಟ್ಟಿದ್ದಾರೆ.1,54,171 ಮಂದಿ ಗುಣಮುಖರಾಗಿದ್ದಾರೆ. 14793 ಸಕ್ರಿಯ ಪ್ರಕರಣಗಳಿವೆ. 820 ಕಂಟೈನ್ಮೆಂಟ್ ಝೋನ್‌ಗಳಿವೆ.

      After 50 Days Delhi Again Crosses 2,000-Mark In Daily Coronavirus Cases

      ದೆಹಲಿ ಸರ್ಕಾರದ ಹೆಲ್ತ್ ಬುಲೆಟಿನ್ ಪ್ರಕಾರ 6881 ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು 24 ಗಂಟೆಗಳಲ್ಲಿ ಮಾಡಿದೆ. 13555 ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗಿದೆ.

      50 ದಿನಗಳ ಕಾಲ ನಿತ್ಯ 1 ಸಾವಿರಕ್ಕಿಂತಲೂ ಕಡಿಮೆ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಕೊರೊನಾ ನಿಯಂತ್ರಣದಲ್ಲಿ ನಾವು ಜಯ ಸಾಧಿಸಿದ್ದೇವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

      ಆದರೆ ಈಗ ಮತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ಈಗ 35 ಲಕ್ಷ ಕೊರೊನಾ ಸೋಂಕಿತರಿದ್ದಾರೆ. ಬ್ರೆಜಿಲ್‌ಗಿಂತ ಕೇವಲ 3 ಲಕ್ಷ ಪ್ರಕರಣಗಳಿಂದ ಹಿಂದಿದ್ದೇವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+