ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ದಿನದ ನಂತರ ಕೊಂಚ ಕಡಿಮೆಯಾದ ಪೆಟ್ರೋಲ್, ಡೀಸೆಲ್ ದರ

|
Google Oneindia Kannada News

ನವದೆಹಲಿ, ಮೇ 30: ಕಳೆದ 16 ದಿನಗಳಿಂದ ನಿರಂತರವಾಗಿ ಏರುತ್ತಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕೊಂಚ ಕಡಿಮೆಯಾಗಿ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಇಂಧನ ಬೆಲೆ ಕಡಿಮೆಯಾಗುವ ಭರವಸೆಯನ್ನು ಇದು ನೀಡಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 61 ಪೈಸೆಯಷ್ಟು ಕಡಿಮೆಯಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 79.10 ರೂ. ಹಾಗೆಯೇ ಡೀಸೆಲ್ ಬೆಲೆ 57 ಪೈಸೆಯಷ್ಟು ಕಡಿಮೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 69.93 ರೂ.

ಸತತ 14ನೇ ದಿನವೂ ಏರಿದ ಪೆಟ್ರೋಲ್ ಬೆಲೆ: ಬೆಂಗಳೂರಲ್ಲಿ ಲೀ.ಗೆ 79.4 ರೂ.ಸತತ 14ನೇ ದಿನವೂ ಏರಿದ ಪೆಟ್ರೋಲ್ ಬೆಲೆ: ಬೆಂಗಳೂರಲ್ಲಿ ಲೀ.ಗೆ 79.4 ರೂ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 77.83 ರೂ., ಮುಂಬೈಯಲ್ಲಿ 85.65 ರೂ., ಕೋಲ್ಕತ್ತಾದಲ್ಲಿ 80.47ರೂ ಮತ್ತು ಚೆನ್ನೈಯಲ್ಲಿ 80.80 ರೂ. ಇದೆ.

After 16 days continuous hike government slashes fuel price

ಡೀಸೆಲ್ ಬೆಲೆ ಮುಂಬೈಯಲ್ಲಿ ಪ್ರತಿ ಲೀಟರ್ ಗೆ 71.30 ರೂ, ಮುಂಬೈಯಲ್ಲಿ 73.20 ರೂ., ಕೋಲ್ಕತ್ತಾದಲ್ಲಿ 71.30 ರೂ. ಮತ್ತು ಚೆನ್ನೈಯಲ್ಲಿ 72.58 ರೂ ಇದೆ.

ಕಳೆದ 16 ದಿನಗಳಿಂದ ಒಂದೇ ಸಮನೆ ಏರುತ್ತಲೇ ಇದ್ದ ಇಂಧನ ದರ ಜನಸಾಮಾನ್ಯನನ್ನು ಕಂಗಾಲು ಮಾಡಿತ್ತು. ಈಗ ಕೊಂಚ ಮಟ್ಟಿಗೆ ಬೆಲೆ ಇಳಿಕೆಯಾಗಿದ್ದು ಸಮಾಧಾನ ತಂದಿದ್ದು, ಇಂಧನ ದರ ಮತ್ತಷ್ಟು ಕಡಿಮೆಯಾಗಲಿ ಎಂಬುದು ಜನಸಾಮಾನ್ಯನ ಆಶಯ.

English summary
After 16 days of continuous hike, fuel prices on Wednesday witnessed a slight drop. The petrol prices have been cut down to 60 paise in Delhi and 59 paise in Mumbai while diesel price went down by 56 paise in Delhi and 59 paise in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X