'ನೋಯ್ಡಾ ಭಾಗವನ್ನು ದೆಹಲಿಗೆ ಸೇರ್ಪಡೆಗೊಳಿಸಿ': ಪ್ರಧಾನಿ ಮೋದಿಗೆ ಎಎಪಿ ಪತ್ರ

ನೋಯ್ಡಾ, ಸೆಪ್ಟೆಂಬರ್ 14: ಆಮ್ ಆದ್ಮಿ ಪಕ್ಷದ ಗೌತಮ್ ಬುದ್ಧ ನಗರ ಘಟಕದ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಯ್ಡಾ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶ ಜಿಲ್ಲೆಯನ್ನು ದೆಹಲಿಯ ಭಾಗವನ್ನಾಗಿ ಮಾಡುವಂತೆ ಒತ್ತಾಯಿಸಿದ್ದಾರೆ. ಎಎಪಿಯ ಗೌತಮ್ ಬುದ್ಧ ನಗರ ಅಧ್ಯಕ್ಷ ಭೂಪೇಂದ್ರ ಸಿಂಗ್ ಜದೌನ್ ಅವರು ಬಹಿರಂಗ ಪತ್ರ ಬರೆದಿದ್ದಾರೆ.

ಈ ಕ್ರಮವು ರಾಷ್ಟ್ರ ರಾಜಧಾನಿಯ ಮಾದರಿಯಲ್ಲಿ ಜಿಲ್ಲೆಯ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಮತ್ತು ಜನರು ನೀರು, ವಿದ್ಯುತ್ ಮತ್ತು ಸಾರ್ವಜನಿಕ ಸಾರಿಗೆಯಂತಹ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಅಥವಾ ಕನಿಷ್ಠ ವೆಚ್ಚದಲ್ಲಿ ಪಡೆಯುತ್ತಾರೆ ಎಂದು ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗೌತಮ್ ಬುದ್ಧ ನಗರವನ್ನು ದೆಹಲಿಗೆ ವಿಲೀನಗೊಳಿಸುವುದರಿಂದ ದೆಹಲಿಯಲ್ಲಿ ಎಎಪಿ ಸರ್ಕಾರದ ಮೂಲಭೂತ ಸೌಲಭ್ಯಗಳು ಸ್ಥಳೀಯರಿಗೆ ಸಿಗುತ್ತದೆ. ಇದರಿಂದ ಜನ ಎಎಪಿಯ ಸೌಲಭ್ಯಗಳನ್ನು ಪಡೆಯುತ್ತಾರೆ. ಭ್ರಷ್ಟಾಚಾರದಿಂದಾಗಿ ಜಿಲ್ಲೆಯ ಪ್ರತಿಷ್ಠೆಗೆ ಮಸಿ ಬಡಿದಂತಾಗಿದೆ. ಜೊತೆಗೆ ಜನ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಸೌಲಭ್ಯಗಳು ಕೈಗೆಟುಕಬೇಕಾಗಿದೆ. ಇದರಿಂದ ಗೌತಮ್ ಬುದ್ಧ ನಗರವನ್ನು ದೆಹಲಿಗೆ ವಿಲೀನಗೊಳಿಸಿ ಎಂದು ಪ್ರಧಾನಿ ಮೋದಿಗೆ ಧ್ಯಕ್ಷ ಭೂಪೇಂದ್ರ ಸಿಂಗ್ ಜದೌನ್ ಅವರು ಪತ್ರ ಬರೆದಿದ್ದಾರೆ.

ಮೂಲಭೂತ ನಾಗರಿಕ ಸೌಲಭ್ಯಗಳು ಲಭ್ಯ

ಮೂಲಭೂತ ನಾಗರಿಕ ಸೌಲಭ್ಯಗಳು ಲಭ್ಯ

ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯ ಜನರಿಗೆ ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ, ಸಾರಿಗೆಯಂತಹ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಉಚಿತವಾಗಿ ಅಥವಾ ಕನಿಷ್ಠ ಬೆಲೆಯಲ್ಲಿ ಒದಗಿಸುತ್ತಿದೆ. ಆದರೆ ನೋಯ್ಡಾ ಸೇರಿದಂತೆ ಇಡೀ ಗೌತಮ್ ಬುದ್ಧ ನಗರ ಜಿಲ್ಲೆ ಇದರಿಂದ ವಂಚಿತವಾಗಿದೆ ಎಂದು ಎ.ಎ.ಪಿ. ಸ್ಥಳೀಯ ಮುಖಂಡರು ಬರೆದಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶ ಜಿಲ್ಲೆಯನ್ನು ದೆಹಲಿಯ ಭಾಗವನ್ನಾಗಿ ಮಾಡಿದರೆ ದೆಹಲಿಯ ಮಾದರಿಯಲ್ಲಿ ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ವಾತಾವರಣದಲ್ಲಿ ಉತ್ತಮ ಶಿಕ್ಷಣ ಪಡೆಯಬಹುದು. ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಪಡೆಯಬಹುದು, ವಯಸ್ಸಾದವರು ಉಚಿತವಾಗಿ ತೀರ್ಥಯಾತ್ರೆಗೆ ಹೋಗಬಹುದು.

'ತಮ್ಮ ಭೂಮಿಯ ಮಾಲೀಕತ್ವದ ಹಕ್ಕು'

'ತಮ್ಮ ಭೂಮಿಯ ಮಾಲೀಕತ್ವದ ಹಕ್ಕು'

ಅದೇ ರೀತಿ ಆಧಾರ್ ಕಾರ್ಡ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್, ಜನನ ಪ್ರಮಾಣಪತ್ರಗಳು, ಆಸ್ತಿ ನೋಂದಣಿ ಇತ್ಯಾದಿ ಸಣ್ಣ ಕೆಲಸಗಳಿಗಾಗಿ ಜನರು ಸರ್ಕಾರಿ ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಎಂದು ಅವರು ಹೇಳಿದರು. ತಮ್ಮ ಬೇಡಿಕೆ ಈಡೇರಿದರೆ ದೆಹಲಿಯಲ್ಲಿರುವಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡುತ್ತಾರೆ ಎಂದು ಜಾದೌನ್ ಹೇಳಿದ್ದಾರೆ.
ಇಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ತಮ್ಮ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಪಡೆಯಬೇಕು. ಹಾಗೆಯೇ ಅಕ್ರಮ ಕಾಲೋನಿಗಳಲ್ಲಿ ವಾಸಿಸುವವರೂ ದೆಹಲಿಯಂತಹ ಮಾಲೀಕತ್ವ ಮತ್ತು ಮೂಲ ಸೌಕರ್ಯಗಳನ್ನು ಪಡೆಯಬೇಕು ಎಂದು ಅವರು ಹೇಳಿದರು.

ಗೌತಮ ಬುದ್ಧ ನಗರವನ್ನು ದೆಹಲಿಗೆ ವಿಲೀನಗೊಳಿಸಲು ಒತ್ತಾಯ

ಗೌತಮ ಬುದ್ಧ ನಗರವನ್ನು ದೆಹಲಿಗೆ ವಿಲೀನಗೊಳಿಸಲು ಒತ್ತಾಯ

ನೋಯ್ಡಾ ಪ್ರಾಧಿಕಾರ, ಗ್ರೇಟರ್ ನೋಯ್ಡಾ ಪ್ರಾಧಿಕಾರ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರದ ಮೂರು ಸ್ಥಳೀಯ ಅಧಿಕಾರಿಗಳ ಭ್ರಷ್ಟಾಚಾರವು ಜಿಲ್ಲೆಯ ಪ್ರತಿಷ್ಠೆಗೆ ಮಸಿ ಬಳಿದಿದೆ ಎಂದು ಅವರು ಆರೋಪಿಸಿದರು.
ಆದ್ದರಿಂದ, ನೋಯ್ಡಾ ಸೇರಿದಂತೆ ಇಡೀ ಗೌತಮ ಬುದ್ಧ ನಗರವನ್ನು ದೆಹಲಿಯಲ್ಲಿ ವಿಲೀನಗೊಳಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದು ಎಎಪಿ ಜಿಲ್ಲಾ ಮುಖ್ಯಸ್ಥರು ಪತ್ರದಲ್ಲಿ ಬರೆದಿದ್ದಾರೆ.

1997 ರಲ್ಲಿ ರಚನೆ

1997 ರಲ್ಲಿ ರಚನೆ

ಪಶ್ಚಿಮ ಉತ್ತರ ಪ್ರದೇಶದ ದೆಹಲಿಯ ಪಕ್ಕದಲ್ಲಿರುವ ಗೌತಮ್ ಬುದ್ಧ ನಗರವನ್ನು 1997 ರಲ್ಲಿ ರಚಿಸಲಾಯಿತು. ಇದು 1,442-ಚದರ-ಕಿಮೀ ಪ್ರದೇಶದಲ್ಲಿ ಹರಡಿಕೊಂಡಿದೆ. ಇದನ್ನು ಗಾಜಿಯಾಬಾದ್ ಮತ್ತು ಬುಲಂದ್‌ಶಹರ್ ಜಿಲ್ಲೆಗಳ ಭಾಗಗಳಿಂದ ಕೆತ್ತಲಾಗಿದೆ. ಜಿಲ್ಲೆಯಲ್ಲಿ ಸದರ್ (ನೋಯ್ಡಾ), ದಾದ್ರಿ ಮತ್ತು ಜೇವರ್ ಎಂಬ ಮೂರು ತಹಸಿಲ್‌ಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+