ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಮಾಲಿನ್ಯ: ಭಾರತದಲ್ಲಿ ತೀವ್ರವಾಗಿದೆ ಶ್ವಾಸಕೋಶ ಸೋಂಕು

By Vanitha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 24 : ಕಳೆದ 30 ವರ್ಷಗಳಿಂದ ವ್ಯಾಪಕವಾಗುತ್ತಿರುವ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನ್ಯಾಷನಲ್ ಹೆಲ್ತ್ ಪ್ರೊಫೈಲ್-2015 ಎಂಬ ಶೀರ್ಷಿಕೆ ಅಡಿಯಲ್ಲಿ ಕಳೆದ ಎರಡು ವರ್ಷದ ಆರೋಗ್ಯ ಸಂಬಂಧಿತ ವರದಿಯನ್ನು ನೀಡಿದೆ.

ತೀವ್ರವಾದ ಶ್ವಾಸಕೋಶದ ಸೋಂಕಿನಿಂದ 2014ರಲ್ಲಿ ಭಾರತದಲ್ಲಿ 3,000 ಮೃತಪಟ್ಟಿದ್ದಾರೆ ಎಂದು ಸೆಂಟ್ರಲ್ ಬ್ಯೂರೋ ಆಫ್ ಹೆಲ್ತ್ ಇಂಟಲಿಜೆನ್ಸ್ ತನ್ನ ವರದಿಯಲ್ಲಿ ತಿಳಿಸಿದ್ದು, ಇದನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಬಿಡುಗಡೆಗೊಳಿಸಿದರು.[ನಿಮ್ಮ ಮಕ್ಕಳ ಶ್ವಾಸಕೋಶದ ಸ್ಥಿತಿ ಹೇಗಿದೆ?]

Acute respiratory infections rise in India

2014ರಲ್ಲಿ 3.48 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಮಹಿಳೆಯರ ಸಂಖ್ಯೆ1.67 ಕೋಟಿ ಇದ್ದು ಮೃತಪಟ್ಟವರು 3000 ಮಂದಿ. 2013ರಲ್ಲಿ 3.34 ಕೋಟಿ ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಲ್ಲಿ 3,513 ಮಂದಿ ಶ್ವಾಸಕೋಶ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

2013ರಲ್ಲಿ ದೆಹಲಿಯಲ್ಲಿ 3,90 ಲಕ್ಷ ಪ್ರಕರಣಗಳಲ್ಲಿ 175 ಮಂದಿ, 2014ರಲ್ಲಿ 3.39 ಲಕ್ಷ ಪ್ರಕರಣದಲ್ಲಿ 104 ಜನ ಮೃತಪಟ್ಟಿದ್ದಾರೆ. 2013ರಲ್ಲಿ ಪಶ್ಚಿಮ ಬಂಗಾಳದಲ್ಲಿ 753 ಮಂದಿ ಬಲಿಯಾಗಿದ್ದರೆ, 2014ರಲ್ಲಿ 625 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ 619 ಮಂದಿ ತೀವ್ರವಾದ ಶ್ವಾಸಕೋಶದ ಸೋಂಕಿನಿಂದ ಮೃತಪಟ್ಟಿದ್ದಾರೆ

English summary
Central bureau of health intelligence published cases of Acute Respiratory Infections. According to this report 3,000 people have died due to ARI in 2014. While 3.48 crore cases were reported 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X