Bengaluru Viral: ಈ ವಿಷಯದಲ್ಲಿ ಶಿಮ್ಲಾದಂತಾಗಿದೆ ಬೆಂಗಳೂರು; ಟ್ರಾಫಿಕ್‌ಗೆ ಮಾತ್ರ ನೆಟ್ಟಿಗರ ಟ್ರೋಲ್!, ಏನಿದು ಚರ್ಚೆ

Bengaluru Viral: ಬೆಂಗಳೂರಿನ ಹವಾಮಾನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿದೆ. ಬೆಂಗಳೂರಿನ ತಂಪಾದ ವೆದರ್ ಅನ್ನು ಆನ್‌ಲೈನ್‌ನಲ್ಲಿ ಶಿಮ್ಲಾದೊಂದಿಗೆ ಹೋಲಿಕೆ ಮಾಡಲಾಗಿದೆ. ಅನೇಕರು ಬೆಂಗಳೂರಿನ ಹವಾಮಾನ ಮತ್ತು ಗಾಳಿಯ ಗುಣಮಟ್ಟವನ್ನು ಹೊಗಳಿದ್ದಾರೆ. ಆದಾಗ್ಯೂ, ನಗರದಲ್ಲಿ ವಿಪರೀತವಾಗಿರುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಕಾಮಿಡಿಯನ್ನೂ ಮಾಡಲಾಗಿದೆ. ಕೆಲವರು ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಟ್ರೋಲ್ ಮಾಡಿದ್ದಾರೆ. ಬೆಂಗಳೂರು - ಶಿಮ್ಲಾದಂತೆ ಆಗಿದೆ ಅಂತ ಕೆಲವರು ಹೇಳಿದರೂ, ಬೆಂಗಳೂರಿನ ವೆದರ್ ಬಿಟ್ಟು ಕೆಲವೊಂದು ವಿಷಯಗಳ ಬಗ್ಗೆ ಟ್ರೋಲ್‌ಗಳು ಶುರುವಾಗಿವೆ.

ಬೆಂಗಳೂರು ಮತ್ತು ಜನಪ್ರಿಯ ಹಿಮಾಲಯನ್ ಗಿರಿಧಾಮವಾಗಿರುವ ಶಿಮ್ಮಾದ ಹೋಲಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಶುರುವಾಗಿದೆ. ಎರಡೂ ನಗರಗಳ ನಡುವೆ ತಾಪಮಾನವು ತುಂಬಾ ಜಾಸ್ತಿ ಕಡಿಮೆ ಏನಿಲ್ಲ ಅಂತ ಹೇಳಲಾಗಿದೆ. ನಗರದ ವಿಶಿಷ್ಟ ಹವಾಮಾನದ ಬಗ್ಗೆ ಚರ್ಚೆಗಳು ಶುರುವಾಗಿದೆ. ಕೆಲವರು ಸೋಶಿಯಲ್ ಮೀಡಿಯಾ ಬಳಕೆದಾರರು ಈ ಸಮಯದಲ್ಲಿ ಬೆಂಗಳೂರು ಶಿಮ್ಲಾಕ್ಕಿಂತ ಉತ್ತಮ ಗಾಳಿಯ ಗುಣಮಟ್ಟವನ್ನು ಹೊಂದಿದೆ ಎಂದೂ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿನ ವೈರಲ್ ಪೋಸ್ಟ್‌ನಲ್ಲಿ ನಗರದ ತಾಪಮಾನವನ್ನು ಶಿಮ್ಲಾದ ತಾಪಮಾನದೊಂದಿಗೆ ಹೋಲಿಸಿದ ನಂತರ ಬೆಂಗಳೂರಿನ ಪ್ರಸಿದ್ಧವಾದ ಆಹ್ಲಾದಕರ ಹವಾಮಾನವು ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಚರ್ಚೆ ಆಗುತ್ತಿದೆ. ಆದರೆ ಕೆಲವರು ವೆದರ್‌ ಚೆನ್ನಾಗಿದೆ ಬಾಕಿ ಏನು ಚೆನ್ನಾಗಿಲ್ಲ ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದಾರೆ.

Bengaluru Viral

ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಹವಾಮಾನವು 22 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸುತ್ತಿರುವ ಸ್ಕ್ರೀನ್‌ಶಾಟ್ ಅನ್ನು X ಬಳಕೆದಾರರು ಹಂಚಿಕೊಂಡಿದ್ದರು. ಇದು ಶಿಮ್ಲಾಕ್ಕಿಂತ ಕೆಲವೇ ಡಿಗ್ರಿಗಳ ವ್ಯತ್ಯಾಸವಾಗಿದೆ ಅಲ್ಲಿ 19 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಶಿಮ್ಲಾದ ಅತಿದೊಡ್ಡ ಪ್ರತಿಸ್ಪರ್ಧಿ ಇನ್ನು ಮುಂದೆ ಮತ್ತೊಂದು ಗಿರಿಧಾಮವಲ್ಲ, ಬದಲಾಗಿ ಸಾಮಾನ್ಯ ಬೆಂಗಳೂರಿನ ವಾರದ ದಿನವಾಗಿದೆ ಎಂದು ಬಳಕೆದಾರರು ತಮಾಷೆ ಮಾಡಿದ್ದಾರೆ. ಟೀಕಿಸಿದ್ದಾರೆ. ಪೋಸ್ಟ್ ತ್ವರಿತವಾಗಿ ಆಕರ್ಷಣೆಯನ್ನು ಗಳಿಸಿತು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆಯಿತು.

ಮಾನ್ಸೂನ್ ಆಗಮನದ ನಂತರ ಬೆಂಗಳೂರಿನ ತಂಪಾದ ಹವಾಮಾನ ಹಲವರ ಗಮನ ಸೆಳೆದಿದೆ. ಬೆಂಗಳೂರು ಮತ್ತು ಜನಪ್ರಿಯ ಹಿಮಾಲಯನ್ ಗಿರಿಧಾಮದ ಚರ್ಚೆಯು ಹೆಚ್ಚಾಗಿ ಬೆಂಗಳೂರಿನ ಟ್ರಾಫಿಕ್ ಜಾಮ್‌ ಸಮಸ್ಯೆಯ ಕಡೆ ತಿರುಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ಬಳಕೆದಾರರು ಬೆಂಗಳೂರಿನ ಆರಾಮದಾಯಕ ಹವಾಮಾನ ಅದರ ಭೌಗೋಳಿಕ ಅನುಕೂಲಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಜೂನ್ ಮತ್ತು ಜುಲೈ ತಾಪಮಾನದ ವಿಷಯದಲ್ಲಿ ಬೆಂಗಳೂರು ಉತ್ತರದ ಗಿರಿಧಾಮಗಳಿಗೆ ಹೊಂದಿಕೆಯಾಗುವ ಹವಾಮಾನವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

ಬೆಂಗಳೂರು ಟ್ರಾಫಿಕ್ ಜಾಮ್‌ನ ಬಗ್ಗೆ ಟ್ರೋಲ್

ಹಲವು ಬಳಕೆದಾರರು ಬೆಂಗಳೂರಿನ ಹವಾಮಾನದ ಬಗ್ಗೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬೆಂಗಳೂರಲ್ಲಿ ತಂಪಾದ ತಾಪಮಾನದ ಹೊರತಾಗಿಯೂ, ಬೆಂಗಳೂರಿನ ಟ್ರಾಫಿಕ್ ಜಾಮ್‌ ವಿಪರೀತವಾಗಿದೆ. ಸಿಲ್ಕ್‌ ಬೋರ್ಡ್ ಜಂಕ್ಷನ್ ಬೆಂಗಳೂರನ್ನು ಶಿಮ್ಲಾದಿಂದ ಪ್ರತ್ಯೇಕಿಸಲು ಸಾಕು ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+