ಪ್ರಸಾರ ಭಾರತಿ ಸದಸ್ಯತ್ವದಿಂದ ನಟಿ ಕಾಜೋಲ್ ವಜಾ ಸಾಧ್ಯತೆ
ನವದೆಹಲಿ, ಮೇ 18 : ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯಗೆ ಸದಸ್ಯೆಯಾಗಿರುವ ಬಾಲಿವುಡ್ ನಟಿ ಕಾಜೋಲ್ ಅವರನ್ನು ಸದಸ್ಯ ಸ್ಥಾನದಿಂದ ಕೈಬಿಡುವ ಸಾಧ್ಯತೆಗಳಿವೆ.
ಪ್ರಸಾರಭಾರತಿಯ ಈ ಹಿಂದಿನ ನಾಲ್ಕು ಸಭೆಗಳಿಗೆ ಕಾಜೋಲ್ ಅವರು ಅನುಮತಿ ಪಡೆಯದೆ ಗೈರು ಹಾಜರಾಗಿರುವ ಹಿನ್ನಲೆಯಲ್ಲಿ ಪ್ರಸಾರ ಭಾರತಿಯ ನಿರ್ದೇಶಕ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಕಾಜೋಲ್ ಅವರು 2016ರ ಫೆಬ್ರುವರಿಯಲ್ಲಿ ಪ್ರಸಾರಭಾರತಿಯ ಅಲ್ಪಾವಧಿ ಸದಸ್ಯೆಯಾಗಿ ನೇಮಕಗೊಂಡಿದ್ದರು.

ಪ್ರಸಾರಭಾರತಿಯ ಅಧ್ಯಕ್ಷರ ಅನುಮತಿ ಇಲ್ಲದೆ ಸಂಸ್ಥೆಯ ಮೂರು ಸಭೆಗಳಿಗೆ ಗೈರುಹಾಜರಾಗುವ ಸದಸ್ಯರನ್ನು ಸದಸ್ಯ ಸ್ಥಾನದಿಂದ ತೆರವುಗೊಳಿಸಬಹುದು ಎಂಬ ನಿಯಮವಿದೆ. ಅದರಂತೆ ಕಾಜೋಲ್ ಅವರನ್ನು ತೆಗೆದು ಹಾಕುವ ಸಾಧ್ಯತೆಗಳಿವೆ.
'ವೃತ್ತಿ ಒತ್ತಡ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಕಳೆದ ಮೂರ್ನಾಲ್ಕು ಸಭೆಗಳಿಗೆ ಕಾಜೋಲ್ ಅವರು ಹಾಜರಾಗಲು ಸಾಧ್ಯವಾಗಿರಲಿಲ್ಲ' ಎಂದು ಕಾಜೋಲ್ ಅವರ ಆಪ್ತ ಸಹಾಯಕ ಜೈವೀರ್ ತಿಳಿಸಿದ್ದಾರೆ.












Click it and Unblock the Notifications