ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್ ಬಹಿಷ್ಕಾರ: ಅಭಿಮಾನಿಗಳನ್ನು ಕೆರಳಿಸಿರುವ ಸುಶಾಂತ್ ಸಿಂಗ್ ಫೋಟೋ

|
Google Oneindia Kannada News

ಮುಂಬೈ ಜುಲೈ 27: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇಹಲೋಕ ತ್ಯಜಿಸಿ 2 ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಆದರೆ ಇಂದಿಗೂ ಅವರ ಅಭಿಮಾನಿಗಳು ಅವರನ್ನು ನೆನೆದು ಭಾವುಕರಾಗುತ್ತಾರೆ. ಸುಶಾಂತ್ ಸಾವಿನ ನಂತರ, ಹಲವಾರು ಸಿದ್ಧಾಂತಗಳು ಮುನ್ನೆಲೆಗೆ ಬಂದಿವೆ.

ಕೆಲವೊಮ್ಮೆ ಡಿಪ್ರೆಶನ್ ಗೆ ಬಲಿಯಾಗಿದ್ದರು ಎಂದು ಹೇಳಿದರೆ ಇನ್ನು ಕೆಲವೊಮ್ಮೆ ಬಾಲಿವುಡ್ ಮಾಫಿಯಾಗೆ ಬಲಿಯಾಗಿದ್ದರು ಎಂದೂ ಹೇಳಲಾಗುತ್ತಿತ್ತು. ಆದ್ರೆ ಅಸಲಿ ಸತ್ಯ ಏನು ಅನ್ನೋದು ಅವರ ಅಭಿಮಾನಿಗಳ ಮುಂದೆ ಇನ್ನೂ ಬಂದಿಲ್ಲ. ಆದರೆ, ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ನಟನ ಬಗ್ಗೆ ಏನಾದರೂ ಬಂದರೆ ಅಭಿಮಾನಿಗಳು ಭಾವುಕರಾಗುತ್ತಾರೆ. ಈ ನಡುವೆ ಸುಶಾಂತ್ ಸಿಂಗ್ ಅಭಿಮಾನಿಗಳು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಅನ್ನು ಬಹಿಷ್ಕರಿಸಲು ಒತ್ತಾಯಿಸಿದ್ದಾರೆ.

ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ನಲ್ಲಿ ಸುಶಾಂತ್ ಅವರ ಫೋಟೋವನ್ನು ಟೀಶರ್ಟ್ ಮೇಲೆ ಹಾಕಲಾಗಿದೆ. ಅದರ ಬೆಲೆ ತುಂಬಾ ಕಡಿಮೆಯಾಗಿದ್ದು ಅದರ ಮೇಲೆ ಬರೆದ ಪದದ ವಿರುದ್ಧ ಸುಶಾಂತ್ ಅಭಿಮಾನಿಗಳಿಗೆ ಕೋಪಗೊಂಡಿದ್ದಾರೆ.

179 ರೂಪಾಯಿ ಟೀ-ಶರ್ಟ್ ಮೇಲೆ ಬರೆದಿದ್ದೇನು?

ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಟಿ-ಶರ್ಟ್ ಮಾರಾಟ ನಡೆಯುತ್ತಿದೆ. ಇವರ ಬೆಲೆ ಕೇವಲ 179 ರೂಪಾಯಿ. ಆದರೆ ಅಭಿಮಾನಿಗಳಿಗೆ ಈ ಟೀ ಶರ್ಟ್ ವಿರುದ್ಧ ಕೋಪ ಬಂದಿರುವುದನ್ನು ನೋಡಿದ ಮೇಲೆ ಈ ಟೀ ಶರ್ಟ್‌ನಲ್ಲಿ ಏನಿದೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತಿದೆ. ಈ ಟಿ-ಶರ್ಟ್‌ನಲ್ಲಿ ಸುಶಾಂತ್ ಸಿಂಗ್ ಅವರ ಚಿತ್ರವಿದೆ. ಅದರಲ್ಲಿ 'Depression' (ಖಿನ್ನತೆ) ಎಂದು ಬರೆಯಲಾಗಿದೆ. ಅಭಿಮಾನಿಗಳು ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಫ್ಲಿಪ್‌ಕಾರ್ಟ್ ಅನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.

ಕ್ಷಮೆ ಯಾಚಿಸುವಂತೆ ಒತ್ತಾಯ

ಈ ಜಾಹೀರಾತು ವೈರಲ್ ಆದ ನಂತರ ಅಭಿಮಾನಿಗಳ ಕೋಪ ಹೆಚ್ಚಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ತಪ್ಪು ಸಂದೇಶಗಳನ್ನು ಹರಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು 'ಸಾಮಾನ್ಯ ಮತ್ತು ಜವಾಬ್ದಾರಿಯುತ ನಾಗರಿಕನಾಗಿ ನಾನು ಇಂದು ರಾತ್ರಿ ಫ್ಲಿಪ್‌ಕಾರ್ಟ್‌ಗೆ ನೋಟಿಸ್ ಕಳುಹಿಸುತ್ತೇನೆ' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, 'ದೇಶವು ಸುಶಾಂತ್ ಅವರ ದುರಂತ ಸಾವಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ನ್ಯಾಯಕ್ಕಾಗಿ ಧ್ವನಿ ಎತ್ತುತ್ತಲೇ ಇರುತ್ತೇವೆ. ಫ್ಲಿಪ್ ಕಾರ್ಟ್ ನಾಚಿಕೆಪಡಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ಷಮೆ ಯಾಚಿಸಬೇಕು' ಎಂದು ಬರೆದಿದ್ದಾರೆ.

ಇನ್ನೂ ಪೂರ್ಣಗೊಳ್ಳದ ತನಿಖೆ

ಇನ್ನೂ ಪೂರ್ಣಗೊಳ್ಳದ ತನಿಖೆ

ಜೂನ್ 14, 2020 ರಂದು ಸುಶಾಂತ್ ಸಿಂಗ್ ರಜಪೂತ್ ನಿಧನರಾದರು. 34ನೇ ವಯಸ್ಸಿನಲ್ಲಿ ಸುಶಾಂತ್ ಇಹಲೋಕಕ್ಕೆ ವಿದಾಯ ಹೇಳಿದ್ದರು. ಸುಶಾಂತ್ ಅವರ ಮೃತ ದೇಹವು ಅವರ ಫ್ಲಾಟ್‌ನಲ್ಲಿ ಪತ್ತೆಯಾಗಿದೆ. ಬಳಿಕ ಎಲ್ಲ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸಿವೆ. ಆದರೆ ಸತ್ತು 2 ವರ್ಷ ಕಳೆದರೂ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇದೊಂದು ಯೋಜಿತ ಪಿತೂರಿಯೋ ಎಂಬುದು ತಿಳಿದು ಬಂದಿಲ್ಲ.

ಮಾದಕ ವ್ಯಸನಕ್ಕೆ ಉತ್ತೇಜನ

ಮಾದಕ ವ್ಯಸನಕ್ಕೆ ಉತ್ತೇಜನ

ಜುಲೈ 13ರಂದು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಡ್ರಗ್ಸ್ ವಿರೋಧಿ ಸಂಸ್ಥೆ (ಎನ್‌ಸಿಬಿ) ಪ್ರಮುಖ ವಿಷಯವನ್ನು ಬಹಿರಂಗಪಡಿಸಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಮತ್ತು ಇತರ ಆರೋಪಿಗಳಿಂದ ಹಲವಾರು ಬಾರಿ ಗಾಂಜಾ ಖರೀದಿಸಿ ಸುಶಾಂತ್ ಸಿಂಗ್ ರಜಪೂತ್ ಗೆ ನೀಡಿದ್ದಾಳೆ ಎಂದು ಎನ್‌ಸಿಬಿ ಹೇಳಿದೆ. ನಟಿ ರಿಯಾ ಚಕ್ರವರ್ತಿ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನಿಷೇಧಿತ ವಸ್ತುಗಳನ್ನು ಖರೀದಿಸಿದ್ದಾರೆ ಮತ್ತು ಅವರ ಅತಿಯಾದ ಮಾದಕ ವ್ಯಸನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಎನ್‌ಸಿಬಿ ಆರೋಪಿಸಿದೆ.

Please Note
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

English summary
Actor Sushant Singh Rajput's fans are outraged against online shopping platform Flipkart. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X