ಸುಕೇಶ್ ಚಂದ್ರಶೇಖರ್ ಜೊತೆಗೆ ವ್ಯವಹಾರ ನಿಲ್ಲಿಸಿದ್ದ ನೋರಾ ಫತೇಹಿ: ಅಧಿಕಾರಿಗಳು

ನವದೆಹಲಿ, ಸೆ.15: 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರ ಜೊತೆಗಿನ ಸಂಬಂಧ ಮತ್ತು ಉಡುಗೊರೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಗುರುವಾರ ನಟಿ ನೂರಾ ಫತೇಹಿ ಅವರನ್ನು ಪ್ರಶ್ನಿಸಿದೆ.

ಬಾಲಿವುಡ್ ನಟಿ ನೂರಾ ಫತೇಹಿ ಅವರ ಸೋದರ ಮಾವ 2021 ರಲ್ಲಿ ಚಂದ್ರಶೇಖರ್ ಅವರಿಂದ BMW ಅನ್ನು ಪಡೆದಿದ್ದರು ಎಂದು ಆರ್ಥಿಕ ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ರವೀಂದರ್ ಯಾದವ್ ಹೇಳಿದ್ದಾರೆ.

ಬುಧವಾರ, ಆರ್ಥಿಕ ಅಪರಾಧ ವಿಭಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಕಚೇರಿಯಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಎಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಆದರೆ ಇಬ್ಬರು ನಟಿಯರಿಗೂ ಈ ಪ್ರಕರಣಕ್ಕೂ ನೇರ ಸಂಬಂಧವಿಲ್ಲ.

Actor Nora Fatehi Cut Ties With Conman: Probe Agency

ಸುಕೇಶ್ ಅವರು ಸುಲಿಗೆ ಮೂಲಕ ಗಳಿಸಿದ ಅಪಾರ ಆಸ್ತಿ ಹೊಂದಿರುವ ಕಾರಣ ಬಾಲಿವುಡ್ ನಟಿಯರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ (ಇಒಡಬ್ಲ್ಯು) ರವೀಂದರ್ ಯಾದವ್ ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಅಧಿಕಾರಿಗಳು ಗುರುವಾರ ನಟಿ ನೋರಾ ಫತೇಹಿ, ಆಕೆಯ ಸೋದರ ಮಾವ ಮೆಹಬೂಬ್ ಅಕಾ ಬಾಬಿ ಖಾನ್ ಮತ್ತು ಪಿಂಕಿ ಇರಾನಿ ಮೂವರನ್ನು ವಿಚಾರಣೆಗೆ ಕರೆದಿದ್ದರು.

ಇರಾನಿ ಅವರು ಚಂದ್ರಶೇಖರ್ ನಿರ್ದೇಶನದ ಮೇರೆಗೆ ನೋರಾ ಫತೇಹಿ ಅವರಿಗೆ ಉಡುಗೊರೆಗಳನ್ನು ನೀಡಲು ಸಂಪರ್ಕಿಸಿದರು. ಕಳೆದ ವರ್ಷ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಒಡೆತನದ ಚೆನ್ನೈನ ಸ್ಟುಡಿಯೋದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರನ್ನು ಕರೆಸಲಾಗಿತ್ತು.

Actor Nora Fatehi Cut Ties With Conman: Probe Agency

ಈ ಸಂದರ್ಭದಲ್ಲಿ, ಫತೇಹಿಗೆ BMW ಕಾರು ಮತ್ತು ಈವೆಂಟ್‌ನಲ್ಲಿ ಭಾಗವಹಿಸುವ ಶುಲ್ಕವನ್ನು ನೀಡಲಾಯಿತು. ವಿಚಾರಣೆ ವೇಳೆ ಫತೇಹಿ, ಆ ಉಡುಗೊರೆಯನ್ನು ಪಡೆಯಲು ನಿರಾಕರಿಸಿದಳು, ಆದರೆ ಅದನ್ನು ತನ್ನ ಸೋದರ ಮಾವ ಮೆಹಬೂಬ್ ಅಲಿಯಾಸ್ ಬಾಬಿಗೆ ನೀಡಬೇಕು ಎಂದು ಹೇಳಿದ್ದಾಳೆ.

ಮೊರಾಕೊ ಮೂಲದ ಮೆಹಬೂಬ್, ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಕ್ರೀಯರಾಗಿರುವ ಅವರು ಸನ್ನಿ ಲಿಯೋನ್ ಮುಖ್ಯ ಪಾತ್ರದಲ್ಲಿ ನಟಿಸಿದ "ಲೀಲಾ ಏಕ್ ಪಹೇಲಿ" ಚಿತ್ರವನ್ನು ಸಹ ನಿರ್ದೇಶಿಸಿದ್ದರು.

ಗುರುವಾರ ವಿಚಾರಣೆ ವೇಳೆ ಮೆಹಬೂಬ್, ಪಿಂಕಿ ಇರಾನಿಯನ್ನು ಗುರುತಿಸಿದ್ದಾರೆ. ಪಿಂಕಿ ಇರಾನಿ ಅವರ ಕೋಡ್ ವರ್ಡ್ 'ಏಂಜೆಲ್' ಎಂದು ಮೂಲಗಳು ತಿಳಿಸಿವೆ.

ಪಿಂಕಿ ಇರಾನಿ ತನ್ನನ್ನು ನೋರಾಗೆ ಏಂಜೆಲ್ ಎಂಬ ಕೋಡ್ ಹೆಸರಿನೊಂದಿಗೆ ಪರಿಚಯಿಸಿಕೊಂಡಿದ್ದರು. ಇರಾನಿ ಮೂಲಕ ಚಂದ್ರಶೇಖರ್ ಪದೇ ಪದೇ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರಿಂದ ಅವಳು ಆಗಾಗ್ಗೆ ನಿರ್ಲಕ್ಷಿಸುತ್ತಿದ್ದಳು ಎಂದು ಅಧಿಕಾರಿಗಳು ಹೇಳಿದರು.

"ಇಂದು (ಗುರುವಾರ) ನಾವು ನೋರಾ ಫತೇಹಿ, ಇರಾನಿ ಮತ್ತು ಮೆಹಬೂಬ್ ಅವರನ್ನು ಕರೆದು ಪರಸ್ಪರ ಮುಖಾಮುಖಿ ಮಾಡಿದ್ದೇವೆ. ನಾವು ಅವರ ಹೇಳಿಕೆಗಳನ್ನು ಪ್ರತ್ಯೇಕವಾಗಿ ದಾಖಲಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

ನೋರಾ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿರಲಿಲ್ಲ. ಆಕೆ ಆತನೊಂದಿಗೆ ವಾಟ್ಸಾಪ್ ಮೂಲಕ ಎರಡು ಬಾರಿ ಮಾತನಾಡಿದ್ದಳು ಎಂದು ಮೂಲಗಳು ತಿಳಿಸಿವೆ.

ರವೀಂದರ್ ಯಾದವ್, "ಸುಕೇಶ್‌ನ ಅಪರಾಧದ ಪೂರ್ವಾಪರ ತಿಳಿದ ನಂತರವೂ ಜಾಕ್ವೆಲಿನ್ ಆತ‌ನೊಂದಿಗೆ ಸಂಬಂಧವನ್ನು ಕಡಿತಗೊಳಿಸದ ಕಾರಣ ಜಾಕ್ವೆಲಿನ್‌ಗೆ ಹೆಚ್ಚಿನ ತೊಂದರೆಗಳಿವೆ. ಆದರೆ ಏನೋ ಸರಿಯಾಗಿಲ್ಲ ಎಂದು ಅನ್ನಿಸಿದ್ದರಿಂದ ನೋರಾ ಫತೇಹಿ ತನ್ನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ" ಎಂದಿದ್ದಾರೆ.

ದೆಹಲಿ ಪೊಲೀಸ್ ಪ್ರಕರಣದಲ್ಲಿ ನಟಿ ನೋರಾ ಫತೇಹಿ ಕೂಡ ಸಾಕ್ಷಿಯಾಗುವ ಸಾಧ್ಯತೆಯಿದೆ. ಆದರೆ ತನಿಖೆ ಇನ್ನೂ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+