ಕಾರಿನಲ್ಲಿ ಪ್ರಯಾಣಿಸುವಾಗಲೂ ಮಾಸ್ಕ್ ಕಡ್ಡಾಯ, ಅಸಂಬದ್ಧ ಎಂದ ಕೋರ್ಟ್

ನವದೆಹಲಿ, ಫೆ.2: ಕಾರುಗಳಲ್ಲಿ ಒಬ್ಬರೇ ಪ್ರಯಾಣಿಸುವವರೂ ಸಹ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು ಎನ್ನುವ ದೆಹಲಿ ಸರ್ಕಾರದ ಆದೇಶವನ್ನು 'ಅಸಂಬದ್ಧ' ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಈ ನಿಯಮವನ್ನು ಈಗಲೂ ಏಕೆ ಮುಂದುವರಿಸಲಾಗುತ್ತಿದೆ ಎಂದು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಕೋವಿಡ್‌ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದ ಪ್ರಕರಣದ ವಿಚಾರಣೆಯನ್ನು ನಡೆಸಿ, ಈ ರೀತಿ ಅಭಿಪ್ರಾಯಪಟ್ಟಿದೆ.

ವಿಚಾರಣೆಯ ಒಂದು ಹಂತದಲ್ಲಿ, ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ರಾ ಅವರು "ಕಾರುಗಳಲ್ಲಿ ಮಾಸ್ಕ್‌ಗಳನ್ನು ಧರಿಸುವುದರ ವಿರುದ್ಧ ನಾವು ನ್ಯಾಯಾಲಯದಿಂದ ಆದೇಶವನ್ನು ಪಡೆಯಬಹುದೇ?," ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಕಾರುಗಳಲ್ಲಿ ಮಾಸ್ಕ್‌ ಧರಿಸುವ ಆದೇಶವನ್ನು ಹೊರಡಿಸಿರುವುದು ದೆಹಲಿ ಸರ್ಕಾರ. ಹಾಗಾಗಿ, ತಾನು ಅದನ್ನು ಹಿಂಪಡೆಯಲು ಅಗದು ಎಂದು ನೆನಪಿಸಿತು. ಇದೇ ವೇಳೆ, ಈ ಬಗ್ಗೆ ಸೂಕ್ತ ನಿರ್ದೇಶನವನ್ನು ದೆಹಲಿ ಸರ್ಕಾರದಿಂದ ಪಡೆಯುವಂತೆ ಸೂಚಿಸಿದೆ.

‘Absurd’: High Court on Delhi Government Order to Wear Mask in Car While Driving Alone

Recommended Video

      ಪ್ರಾಣಿಗಳ ಮಾಂಸ ತಿಂದು ಸಿಂಹದಂತೆ ಬೇಟೆಯಾಡೋ ಪಾಕ್ ಬೌಲರ್ಸ್ ಹೆಚ್ಚು ಬಲಿಷ್ಟ | Oneindia Kannada

      ಕಳೆದ ವರ್ಷ ಏಪ್ರಿಲ್‌ 2021ರಂದು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಒಬ್ಬರೇ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಮತ್ತಾರೂ ಜೊತೆಯಲ್ಲಿ ಇಲ್ಲದೆ ಹೋದರೂ ಸಹ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಇದೇ ನ್ಯಾಯಾಲಯ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+