Breaking: 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ: ಕೇಜ್ರಿವಾಲ್

ನವದೆಹಲಿ ಜುಲೈ 24: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಜತೆಗೆ ಕೆಲವು ಅಭಿವೃದ್ಧಿ ಪರ ಯೋಜನೆಗಳನ್ನು ಭಾನುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ದೆಹಲಿಯನ್ನು ಭಾರತದ ಆಹಾರ ರಾಜಧಾನಿ ಎಂದು ಪರಿಗಣಿಸಲಾಗಿದೆ. ಹೀಗಾಗಿಯೇ ದೆಹಲಿಯಲ್ಲಿ ಉದ್ಯೋಗ ಹೆಚ್ಚಿಸಲು ವಿಶೇಷ ಯೋಜನೆ ಪ್ರಾರಂಭಿಸಲಾಗುವುದು. ಆಮ್‌ ಆದ್ಮಿ ಪಕ್ಷ ಮುಖ್ಯಸ್ಥರು ನಗರದಲ್ಲಿನ ಎಲ್ಲಾ ಆಹಾರ ಕೇಂದ್ರಗಳನ್ನು ನವೀಕರಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ದೆಹಲಿ ಸ್ಥಳೀಯ ಮೂಲಸೌಕರ್ಯ, ಆಹಾರ ಸುರಕ್ಷತೆ ಮತ್ತು ಬ್ರ್ಯಾಂಡಿಂಗ್ ಉದ್ಯೋಗದ ಪ್ರಮುಖ ಕೇಂದ್ರವಾಗಲಿದೆ ಎಂದು ವಿವರಿಸಿದ್ದಾರೆ.

ಯೋಜನೆಗಳ ಅಡಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ. ಈಗಾಗಲೇ ಆಮ್‌ ಆದ್ಮಿ ಸರ್ಕಾರ ಈವರೆಗೆ ಯುವಕರಿಗಾಗಿ ಸುಮಾರು 12ರಿಂದ 13 ಲಕ್ಷದಷ್ಟು ಉದ್ಯೋಗಾವಕಾಶ ಕಲ್ಪಿಸಿದೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟು ಎಎಪಿಯಿಂದ 20 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಸಲು ಪ್ರಯತ್ನಿಸಲಾಗುವುದು ಎಂದರು.

AAP To Create 20 lakh jobs in New Delhi for next five years

ಪಂಜಾಬ್, ಗುಜರಾತಿ, ದಕ್ಷಿಣ ಭಾರತೀಯ, ಮರಾಠಿ, ಬೆಂಗಾಲಿ. ಇಟಾಲಿಯನ್, ಏಷ್ಯನ್ ಮತ್ತು ಕಾಂಟಿನೆಂಟಲ್ ಸೇರಿದಂತೆ ದೆಹಲಿಯಲ್ಲಿ ಎಲ್ಲ ಬಗೆಯ ಆಹಾರ ಲಭ್ಯ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ಆಹಾರ ಕೇಂದ್ರಗಳನ್ನು ತೆರೆಯುವ ಮೂಲಕ ಈ ಕಲ್ಪನೆಯನ್ನು ಇನ್ನಷ್ಟು ಉತ್ತೇಜಿಸುವ ಗುರಿ ಎಎಪಿ ಸರ್ಕಾರ ಹೊಂದಿದೆ. ಇದರ ಭಾಗವಾಗಿ ಎಎಪಿ ಸರ್ಕಾರವು ಆರಂಭದಲ್ಲಿ ಇಲ್ಲಿನ ಮಜ್ನು ಕಾ ತಿಲಾ ಮತ್ತು ಚಾಂದಿನಿ ಚೌಕ್‌ನಲ್ಲಿರುವ ಎರಡು ಆಹಾರ ಕೇಂದ್ರಗಳನ್ನು ನವೀಕರಿಸಲಿದೆ ಎಂದು ಹೇಳಿದರು.

12 ವಾರಗಳಲ್ಲಿ ನವೀಕರಣದ ವಿನ್ಯಾಸವನ್ನು ಅಂತಿಮಗೊಳಿಸಲಿದ್ದು, ನಂತರ ಗುತ್ತಿಗೆ ನೀಡಲಾಗುವುದು. ಸದ್ಯ ಫುಡ್ ಹಬ್ ಪ್ರಾಯೋಗಿಕ ಯೋಜನೆಯಾಗಿದ್ದು, ಇದರ ಯಶಸ್ವಿ ನಂತರ ದೆಹಲಿಯಾದ್ಯಂತ ಫುಡ್ ಹಬ್‌ಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+