ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನು ಕಣ್ಣು ಹೊಡೆದ, ಆಪ್ ಶಾಸಕಿ ಕಪಾಳಕ್ಕೆ ಹೊಡೆದ್ರು

|
Google Oneindia Kannada News

ನವದೆಹಲಿ, ಏ 25: ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಯುವಕನೊಬ್ಬನಿಗೆ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಂಬಾ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ (ಏ 23) ವರದಿಯಾಗಿದೆ.

ಖ್ಯಾತ ಕವಿ ಮಿರ್ಜಾ ಗಾಲಿಬ್ ಅವರ ಸ್ಮಾರಕ ನಿರ್ಮಾಣದ ಕಾಮಗಾರಿಯನ್ನು ವೀಕ್ಷಿಸಲು ಅಲ್ಕಾ ಲಂಬಾ ತೆರಳುತ್ತಿದ್ದಾಗ ಇಪ್ಪತ್ತು ವರ್ಷದ ಯುವಕ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಅಲ್ಕಾ ಆರೋಪಿಸಿದ್ದಾರೆ.

ಮಾನಸಿಕ ರೋಗಿ ಎಂದು ಹೇಳಲಾಗುತ್ತಿರುವ ಈ ಯುವಕ, ಅಲ್ಕಾ ಅವರನ್ನು ನೋಡಿ ಕಣ್ಣು ಹೊಡೆದು ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಸಿಟ್ಟಾದ ಅಲ್ಕಾ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಅಲ್ಕಾ ಕೈಏಟಿನ ರುಚಿ ಸಿಕ್ಕುತ್ತಿದ್ದಂತೇ ಯುವಕ ಅಲ್ಲಿಂದ ಕಾಲ್ಕಿತ್ತ, ಆದರೆ ಅಪ್ ಕಾರ್ಯಕರ್ತರು ಅವನನ್ನು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈತ ಮಾನಸಿಕ ರೋಗಿ ಎಂದು ಆತನ ಕುಟುಂಬದವರು ಹೇಳುತ್ತಿದ್ದಾರೆ. ಆದರೆ ಅದನ್ನು ಸಾಬೀತು ಪಡಿಸುವ ಯಾವುದೇ ದಾಖಲೆ ಈತನ ಕುಟುಂಬದವರು ಪೊಲೀಸರಿಗೆ ನೀಡಲು ವಿಫಲರಾಗಿದ್ದಾರೆ ಎಂದು ಅಲ್ಕಾ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಘಟನೆಯ ಬಗ್ಗೆ ವಿವರಿಸಿರುವ ಅಲ್ಕಾ ಯುವಕನ ಭಾವಚಿತ್ರವನ್ನು ಪ್ರಕಟಿಸಿದ್ದಾರೆ. ದೆಹಲಿಯ ಬಲ್ಜೀತ್ ನಗರದ ನಿವಾಸಿಯಾಗಿರುವ ರಾಜೇಶ್ ಎನ್ನುವಾತನನ್ನು ಪೊಲೀಸರು ಈಗ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯ ಬಗ್ಗೆ ಮತ್ತು ಆಪ್ ಪ್ರತಿಭಟನೆಯ ವೇಳೆ ರೈತನ ಸಾವು, ಪ್ರಧಾನಿ ವಿದೇಶ ಪ್ರವಾಸದ ಬಗ್ಗೆ ಅಲ್ಕಾ ಟ್ವೀಟ್ ಮಾಡಿದ್ದು ಹೀಗೆ...

ಅವನಿಗೆ ನಾನು ಯಾರೆಂದು ಗೊತ್ತಿಲ್ಲ

ಆ ಯುವಕನಿಗೆ ನಾನು ಯಾರೆಂದು ಗೊತ್ತಿಲ್ಲ, ಮೊದಲು ನಕ್ಕ ನಂತರ ಕಣ್ಣು ಹೊಡೆದ, ನಂತರ ನನ್ನ ಹತ್ತಿರ ಬಂದ, ಆಮೇಲೆ ಕೆನ್ನೆಗೆ ಏಟು ತಿಂದ, ಈಗ ಜೈಲು ಪಾಲಾದ.

ಸತ್ಯಕ್ಕೆ ಯಾವತ್ತೂ ಜಯ

ಸತ್ಯಕ್ಕೆ ಯಾವತ್ತೂ ಜಯ

ನಾವೆಲ್ಲಾ ಒಟ್ಟಾಗಿರೋಣ. ಸತ್ಯಕ್ಕೆ ಇಂದಲ್ಲಾ, ನಾಳೆ ಜಯ ಸಿಕ್ಕೇ ಸಿಗುತ್ತೆ. ನಮ್ಮ ಪಕ್ಷದ ಪ್ರತಿಭಟನೆಯ ವೇಳೆ ಆಗಬಾರದ್ದು ಆಗಿಹೋಯಿತು.

ಪ್ರಧಾನಿ ಕ್ಷಮೆಯಾಚಿಸಲಿ

ರೈತನ ಆತ್ಮಹತ್ಯೆ ಘಟನೆಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಮತ್ತು ನಮ್ಮ ನಾಯಕ ಕೇಜ್ರಿವಾಲ್ ಕ್ಷಮೆಯಾಚಿಸಿದ್ದಾರೆ. 2002ರಲ್ಲಿ ನಡೆದ ಮಾರಣಹೋಮದ ಬಗ್ಗೆ ಈಗ ಪ್ರಧಾನಿ ಕ್ಷಮೆಯಾಚಿಸಲಿ - ಆಪ್ ಮುಖಂಡ ಮಾಯಾಂಕ್ ಗಾಂಧಿ

ಪ್ರಧಾನಿಯ ಮುಂದಿನ ಪ್ರವಾಸ ಯಾವ ದೇಶಕ್ಕೆ

ಪ್ರಧಾನಿ ಮೋದಿಯವರ ಮುಂದಿನ ವಿದೇಶ ಪ್ರವಾಸ ಯಾವಾಗ, ಯಾವ ಯಾವ ದೇಶಕ್ಕೆ, ಅಲ್ಕಾ ವ್ಯಂಗ್ಯ.

ರೈತನ ಸಾವು

ರೈತನ ಸಾವು

ಆಪ್ ಪ್ರತಿಭಟನೆಯ ವೇಳೆ ರೈತನ ಆತ್ಮಹತ್ಯೆ ಘಟನೆಯ ಬಗ್ಗೆ ತುಂಬ ನೋವಾಗಿದೆ. ಕೇಜ್ರಿವಾಲ್ ಕೂಡಾ ಬಹಳ ನೊಂದಿದ್ದಾರೆ. ನಾವು ಪ್ರತಿಭಟನೆಯ ವೇದಿಕೆಯಲ್ಲಿ ರೈತನಿಗೆ ಮಾತನಾಡುವ ಅವಕಾಶ ನೀಡಬೇಕಿತ್ತು.

English summary
AAP leader Alka Lamba slapped a man who claimed to be mentally unstable after she found him looking at her an inappropriate way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X