ಲೋಕಸಭೆ ಚುನಾವಣೆಗೆ ಆಮ್ ಆದ್ಮಿಯ 20 ಅಭ್ಯರ್ಥಿಗಳು
ನವದೆಹಲಿ, ಫೆ. 16 : ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಲೋಕಸಭೆ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಭಾನುವಾರ 2014ರ ಲೋಕಸಭೆ ಚುನಾವಣೆಗಾಗಿ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಕೇಂದ್ರ ಸಚಿವ ಮನೀಶ್ ತಿವಾರಿ, ಕಪಿಲ್ ಸಿಬಲ್ ಮುಂತಾದವರ ವಿರುದ್ಧ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿ ನೀಡಲು ಪಕ್ಷ ಸಜ್ಜಾಗಿ ನಿಂತಿದೆ.

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿ, 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ. [ರಾಹುಲ್ ವಿರುದ್ಧ ಕುಮಾರ್ ವಿಶ್ವಾಸ್ ಕಣಕ್ಕೆ]
| ಅಭ್ಯರ್ಥಿ | ಕ್ಷೇತ್ರ | ಹಾಲಿ ಸಂಸದ |
| ಕುಮಾರ್ ವಿಶ್ವಾಸ್ | ಅಮೇಥಿ | ರಾಹುಲ್ ಗಾಂಧಿ |
| ಅಶುತೋಷ್ | ಚಾಂದನಿ ಚೌಕ್ | ಕಪಿಲ್ ಸಿಬಲ್ |
| ಅಂಜಲಿ ದಮಾನಿಯಾ | ನಾಗಪುರ | ನಿತಿನ್ ಗಡ್ಕರಿ |
| ಹೆಚ್.ಎಸ್ ಫೂಲ್ಕಾ | ಲೂಧಿಯಾನ | ಮನೀಶ್ ತಿವಾರಿ |
| ಮೀರಾ ಸನ್ಯಾಲ್ | ಮುಂಬೈ ದಕ್ಷಿಣ | ಮಿಲಿಂದ್ ದಿಯೋರಾ |
| ಯೋಗೇಂದ್ರ ಯಾದವ್ | ಗುಡಗಾಂವ್ | ರಾವ್ ಇಂದ್ರಜಿತ್ ಸಿಂಗ್ |
| ಮೇಧಾ ಪಾಟ್ಕರ್ | ಮುಂಬೈ ಈಶಾನ್ಯ | ಸಂಜಯ್ ಪಾಟೀಲ್ |
| ಜರ್ನೇಲ್ ಸಿಂಗ್ | ದೆಹಲಿ ಪಶ್ಚಿಮ | ಮಹಾಬಲ ಮಿಶ್ರಾ |
| ಮುಕೇಶ್ ತ್ರಿಪಾಠಿ | ಫರೂಕಾಬಾದ್ | ಸಲ್ಮಾನ್ ಖುರ್ಷಿದ್ |
| ಮಾಯಂಕ್ ಗಾಂಧಿ | ಮುಂಬೈ ಉತ್ತರ | ಗುರುದಾಸ್ ಕಾಮತ್ |
| ಬಾಬಾ ಹರದೇವ್ | ಮೇನ್ ಪುರಿ | ಮುಲಾಯಂ ಸಿಂಗ್ ಯಾದವ್ |
| ಸುಭಾಷ್ ಪಡೆ | ಪುಣೆ | ಸುರೇಶ್ ಕಲ್ಮಾಡಿ |
| ಖಲೀದ್ ಪರ್ವೇಜ್ | ಮೊರಾದಾಬಾದ್ | ಮೊಹಮದ್ ಅಜರುದ್ದೀನ್ |
| ವಿಜಯ್ ಪಂಡ್ರೆ | ನಾಸಿಕ್ | ಸಮೀರ್ ಭುಝ್ ಬಲ್ |
| ಜರ್ನಿಲ್ ಸಿಂಗ್ ಪಟ್ರಾಕರ್ | ಪಶ್ಚಿಮ ದೆಹಲಿ | ಮಹಾಬಲ ಮಿಶ್ರಾ |
| ಡಾ.ಜಯ್ ಲಾಲ್ ರಾಮ್ | ಲಾಲ್ ಗುಂಜ್ | ಡಾ.ಬಲರಾಮ್ ಸಿಂಗ್ |
| ಅಲೋಕ್ ಅಗರ್ ವಾಲ್ | ಖಾಂಡ್ವಾ | ಅರುಣ್ ಸುಭಾಷ್ ಚಂದ್ರ ಯಾದವ್ |
| ಲಿಂಗರಾಜ್ | ಬರಘಾಲ್ (ಒರಿಸ್ಸಾ) | ಸಂಜಯ್ ಭೋಯ್ |
| ಯೋಗೇಶ್ ದಾಲ್ ಹಿಯಾ | ಸಹರಾನ್ ಪುರ್ | ಜಗದೀಶ್ ಸಿಂಗ್ ರಾಣಾ |
| ಸೋಮೇಂದ್ರ ಢಾಕಾ | ಭಗ್ ಪತ್ | ಅಜಿತ್ ಸಿಂಗ್ |












Click it and Unblock the Notifications