ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Narendra Modi Birthday : ಮೋದಿ ಜನ್ಮದಿನಕ್ಕೆ ದೆಹಲಿ ರೆಸ್ಟೋರೆಂಟ್‌ವೊಂದರಲ್ಲಿ 56 ಖಾದ್ಯಗಳ ವಿಶೇಷ ಥಾಲಿ

|
Google Oneindia Kannada News

ನವದೆಹಲಿ ಸೆಪ್ಟೆಂಬರ್ 16: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದ್ದು, ಈ ದಿನ ಅವರ ಹೆಸರಿನಲ್ಲಿಥಾಲಿ'ಯನ್ನು ದೆಹಲಿ ಮೂಲದ ರೆಸ್ಟೋರೆಂಟ್ ಬಿಡುಗಡೆ ಮಾಡಲು ನಿರ್ಧರಿಸಿದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.0 ರೆಸ್ಟೋರೆಂಟ್, 56 ವಿವಿಧ ಖಾದ್ಯಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ಗ್ರಾಹಕರಿಗೆ ಪ್ರಸ್ತುತಪಡಿಸಲಿದೆ. ಈ ಥಾಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳ ಆಯ್ಕೆಯನ್ನು ಹೊಂದಿರುತ್ತದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.0 ರೆಸ್ಟೋರೆಂಟ್ ಈ ವಿಶಿಷ್ಟ ಆಲೋಚನೆಯೊಂದಿಗೆ ವೈರಲ್ ಆಗಿದೆ.

ರೆಸ್ಟೊರೆಂಟ್‌ನ ಮಾಲೀಕ ಸುಮಿತ್ ಕಲಾರ ಅವರು ಎಎನ್‌ಐಗೆ ಮಾತನಾಡಿ, "ನಾನು ಪ್ರಧಾನಿ ಮೋದಿ ಜಿ ಅವರನ್ನು ತುಂಬಾ ಗೌರವಿಸುತ್ತೇನೆ. ಅವರು ನಮ್ಮ ರಾಷ್ಟ್ರದ ಹೆಮ್ಮೆ ಮತ್ತು ಅವರ ಜನ್ಮದಿನದಂದು ನಾವು ವಿಶಿಷ್ಟವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಆದ್ದರಿಂದ ನಾವು ಈ ಭವ್ಯವಾದ ಥಾಲಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಇದನ್ನು ನಾವು '56 ವಿವಿಧ ಖಾದ್ಯಗಳನ್ನು ಹೊಂದಿರುವ ಮೋದಿ ಜೀ ಥಾಲಿ' ಎಂದು ಹೆಸರಿಸಿದ್ದೇವೆ.

ನಮೀಬಿಯಾದಿಂದ ಚಿರತೆಗಳೊಂದಿಗೆ ಹಾರುವ ಹುಲಿ ಮುಖದ ವಿಮಾನನಮೀಬಿಯಾದಿಂದ ಚಿರತೆಗಳೊಂದಿಗೆ ಹಾರುವ ಹುಲಿ ಮುಖದ ವಿಮಾನ

ನಾವು ಅವರಿಗೆ ಈ ಥಾಲಿಯನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ ಮತ್ತು ಅವರು ಇಲ್ಲಿಗೆ ಬಂದು ತಿನ್ನಬೇಕೆಂದು ಬಯಸುತ್ತೇವೆ. ಆದರೆ, ಭದ್ರತಾ ಕಾರಣಗಳಿಂದ ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದು ಅವರನ್ನು ತುಂಬಾ ಪ್ರೀತಿಸುವ ಅವರ ಎಲ್ಲಾ ಅಭಿಮಾನಿಗಳಿಗೆ. ದಯವಿಟ್ಟು ಬಂದು ಈ ಥಾಲಿಯನ್ನು ಆನಂದಿಸಿ" ಎಂದು ಮೋದಿ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

A special thali of 56 dishes at a Delhi restaurant for Modis birthday

ಮಾತ್ರವಲ್ಲದೆ ಈ ವಿಶೇಷ ಥಾಲಿಯು ಗ್ರಾಹಕರಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ. ''ಹೌದು, ನಾವು ಈ ಥಾಲಿಯೊಂದಿಗೆ ಕೆಲವು ಬಹುಮಾನಗಳನ್ನು ಇಡಲು ನಿರ್ಧರಿಸಿದ್ದೇವೆ. ದಂಪತಿಗಳಲ್ಲಿ ಯಾರಾದರೂ ಈ ಥಾಲಿಯನ್ನು 40 ನಿಮಿಷಗಳಲ್ಲಿ ಮುಗಿಸಿದರೆ ನಾವು ಅವರಿಗೆ 8.5 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ. ಅಲ್ಲದೆ, ಸೆಪ್ಟೆಂಬರ್ 17-26 ರ ನಡುವೆ ನಮ್ಮನ್ನು ಭೇಟಿ ಮಾಡುವ ಮತ್ತು ಈ ಥಾಲಿಯನ್ನು ತಿನ್ನುವವರಲ್ಲಿ, ಅದೃಷ್ಟಶಾಲಿ ವಿಜೇತರು ಅಥವಾ ದಂಪತಿಗಳು ಕೇದಾರನಾಥಕ್ಕೆ ಉಚಿತವಾಗಿ ಪ್ರಯಾಣಿಸುತ್ತಾರೆ. ಏಕೆಂದರೆ ಇದು ಪ್ರಧಾನಿ ಮೋದಿ ಜಿ ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ" ಎಂದು ಅರ್ಡೋರ್ 2.0 ಮಾಲೀಕರು ಹೇಳಿದರು.

English summary
September 17 is Prime Minister Narendra Modi's birthday and on this day a Delhi based restaurant has decided to launch a special thali' in his name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X