ಶುಕ್ರವಾರ ಸಂಜೆ ದೆಹಲಿಯಲ್ಲಿ ಮತ್ತೆ ಲಘು ಭೂಕಂಪ

ನವದೆಹಲಿ, ಜುಲೈ 03: ದೆಹಲಿಯಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿದೆ. ಶುಕ್ರವಾರ ಸಂಜೆ 7.01 ಸುಮಾರಿಗೆ ದೆಹಲಿಯಲ್ಲಿ ಭೂ ಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿದೆ. ಸದ್ಯಕ್ಕೆ ಯಾವುದೇ ಸಾವು, ನೋವಿನ ವರದಿ ಬಂದಿಲ್ಲ. ಹರ್ಯಾಣದಿಂದ 63 ಕಿ.ಮೀ ದೂರ ನೈಋತ್ಯದಲ್ಲಿ ಭೂಕಂಪ ಸಂಭವಿಸಿದೆ.

ದೆಹಲಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ಆರನೇ ಭೂಕಂಪವಾಗಿದೆ. ಜೂನ್ 8ರಂದು 2.1ರಷ್ಟು ತೀವ್ರತೆ, ಮೇ 10 ರಂದು 3.5 ತೀವ್ರತೆಯ ಲಘು ಭೂಕಂಪ ಸಂಭವಿಸಿತ್ತು. ಮೇ 31ರಂದು 2.2 ತೀವ್ರತೆ ಕಂಡು ಬಂದಿತ್ತು. ಏಪ್ರಿಲ್ ನಿಂದ ಇಂದಿನ ತನಕ ಸುಮಾರು 14 ಬಾರಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಸಿಸ್ಮೋಲಾಜಿ ಕೇಂದ್ರ ತಿಳಿಸಿದೆ.

A mild earthquake tremors were felt in New Delhi

ಜುಲೈ 03 ರಂದು ದೆಹಲಿಯಿಂದ 5 ಕಿ. ಮೀ ವ್ಯಾಪ್ತಿಯಲ್ಲಿ ಕೇಂದ್ರ ಬಿಂದು ಕಂಡು ಬಂದಿದೆ. ಇಂದು ಮಿಜೋರಾಂನ ಛಂಪಾಯಿಯಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಏಪ್ರಿಲ್ 12 ಹಾಗೂ 13 ರಂದು 3.5 ಹಾಗೂ 2.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಏಪ್ರಿಲ್ 16- (2); ಮೇ 3 - (3); ಮೇ 6 - ಫರಿದಾಬಾದ್ (2.3), ಮೇ 10 - ದೆಹಲಿ (3.4); ಮೇ 15 - ದೆಹಲಿ (2.2), ಮೇ 28 - ಫರಿದಾಬಾದ್(2.5); ಮೇ 29 - ರೋಹ್ಟಕ್ (4.5 ಹಾಗೂ 2.9); ಜೂನ್ 1 - ರೋಹ್ಟಕ್ (1.8 ಮತ್ತು 3) ಹಾಗೂ ಜೂನ್ 3 - ಫರಿದಾಬಾದ್ (3.2).

1956ರ ಅಕ್ಟೋಬರ್ 10 ರಂದು 6.7 ತೀವ್ರತೆಯ ಭೂಕಂಪ ಸಂಭವಿಸಿತ್ತು. 1966ರಲ್ಲಿ 5.8 ತೀವ್ರತೆಯ ಭೂಕಂಪ ದಾಖಲಾಗಿತ್ತು. ಅದಾದ ಬಳಿಕ 2001 ರಲ್ಲಿ 3.4 , 2004ರಲ್ಲಿ 2.8 ತೀವ್ರತೆಯ ಭೂಕಂಪ ದೆಹಲಿಯಲ್ಲಿ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+