ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿವ್ ಇನ್ ಸಂಬಂಧದಲ್ಲಿ ಹುಟ್ಟಿದ ಮಗುವಿಗೂ ಇದೆ ಪೂರ್ವಿಕರ ಆಸ್ತಿಯಲ್ಲಿ ಹಕ್ಕು: ಸುಪ್ರೀಂ

|
Google Oneindia Kannada News

ನವದೆಹಲಿ, ಜೂ. 14: ಮದುವೆಯಾಗದೇ ಬಹಳ ಕಾಲದಿಂದ ಗಂಡು ಮತ್ತು ಹೆಣ್ಣು ಒಟ್ಟಿಗೆ ಸಹಜೀವನ ನಡೆಸುತ್ತಿದ್ದರೆ ಆ ಸಂಬಂಧವನ್ನು ಮದುವೆ ಎಂದೇ ಪರಿಗಣಿಸಲಾಗುತ್ತದೆ. ಇಂಥ ಲಿವ್ ಇನ್ ಸಂಬಂಧದಲ್ಲಿ ಹುಟ್ಟಿದ ಮಗುವಿಗೆ ಸಂಗಾತಿಯ ಪೋಷಕರು ಆಸ್ತಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಪುರುಷ ಮತ್ತು ಮಹಿಳೆ ಮದುವೆಯಾಗದೆ ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿರುವಾಗ ಅದನ್ನು ಮದುವೆ ಎಂದೇ ಕಾನೂನು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ಅಕ್ರಮ ಸಂಬಂಧ ಎಂದು ಹೇಳಲು ಬರುವುದಿಲ್ಲ. ಸಹಬಾಳ್ವೆ ನಡೆಸುವ ಈ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳೆಗೆ ಹುಟ್ಟುವ ಮಗುವಿಗೆ ಆಸ್ತಿಯಲ್ಲಿ ಪಾಳು ಕೇಳುವ ಹಕ್ಕಿದೆ ಇದನ್ನು ಪೋಷಕರು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೊರ್ಟ್‌ ತೀರ್ಪು ನೀಡಿದೆ.

ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?

ಕೇರಳ ಹೈಕೋರ್ಟ್ 2009ರಲ್ಲಿ ನೀಡಿದ ತೀರ್ಪನ್ನು ಈ ಮೂಲಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಲಿವ್ ಇನ್ ಸಂಬಂಧವನ್ನು ಅಕ್ರಮ ಸಂಬಂಧ ಎಂದು ಬಗೆದಿದ್ದ ಕೇರಳ ಹೈಕೋರ್ಟ್, ಈ ಸಂಬಂಧದಲ್ಲಿ ಹುಟ್ಟಿದ್ದ ಮಗುವಿಗೆ ಪೂರ್ವಿಕರ ಆಸ್ತಿಯಲ್ಲಿ ಪಾಲು ನೀಡಲಾಗುವುದಿಲ್ಲ ಎಂದು ತೀರ್ಪು ನೀಡಿತ್ತು. ಈಗ ಇದೇ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟು ನ್ಯಾಯಾಧೀಶರಾದ ಎಸ್‌. ಅಬ್ದುಲ್‌ ನಜೀರ್‌ ಹಾಗೂ ವಿಕ್ರಮ್‌ ನಾಥ್‌ ಅವರನ್ನೊಳಗೊಂಡ ಪೀಠ ಈಗ ಈ ಮಹತ್ವದ ತೀರ್ಪು ಪ್ರಕಟಿಸಿ, ಕೇರಳ ಹೈಕೊರ್ಟ್‌ ನೀಡಿದ್ದ ತೀರ್ಪನ್ನು ರದ್ದು ಮಾಡಿದೆ.

A Child Born in Live In Relationship Has Property Right: Supreme Court

ಓರ್ವ ಪುರುಷ ಹಾಗೂ ಮಹಿಳೆ ಒಟ್ಟಿಗೆ ಜೀವನ ನಡೆಸುತ್ತಿದ್ದರೆ ಅದನ್ನು ಮದುವೆಯೆಂದೇ ಪರಿಗಣಿಸಬೇಕು. ಕಾನೂನಿನ ಸಾಕ್ಷ್ಯಾಧಾರ ಸೆಕ್ಷನ್‌ 114ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಪುರುಷ ಮಹಿಳೆ ಇಬ್ಬರು ಒಟ್ಟಿಗೆ ಸಹಜೀವನ ನಡೆಸುತ್ತಿದ್ದು, ವಿವಾಹವಾಗಿಲ್ಲ ಎಂದು ಕಂಡು ಬಂದರೂ ಇದಕ್ಕೆ ಮದುವೆ ಎಂದೇ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

A Child Born in Live In Relationship Has Property Right: Supreme Court

ಸದರಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಕೊನೆಯ ತೀರ್ಪನ್ನು ನೀಡುವಲ್ಲಿ ಆಗಿರುವ ವಿಳಂಬವನ್ನು ಸುಪ್ರೀಂ ತಿಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ವಿಚಾರವಾಗಿ ವಿತರಣಾ ಮೊಕದ್ದಮೆಗಳಲ್ಲಿ ಪ್ರಾಥಮಿಕ ತೀರ್ಪು ಹೊರಡಿಸಿದ ತಕ್ಷಣ ಅಂತಿಮ ತೀರ್ಪು ನೀಡುವ ಪ್ರಕ್ರಿಯೆಗಳನ್ನು ಆರಂಭ ಮಾಡುವಂತೆ ಭಾರತದ ಎಲ್ಲ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

(ಒನ್ಇಂಡಿಯಾ ಸುದ್ದಿ)

English summary
The Supreme Court has ruled that a long-term live in relationship is to be regarded as a marriage and that the child born to this long-term male woman has no right to parental property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X