• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ದಿನ ಹೆಚ್ಚು ಕೊರೊನಾ ಕೇಸ್‌: 24 ಗಂಟೆಗಳಲ್ಲಿ 357 ಜನ ಸಾವು

|

ನವ ದೆಹಲಿ, ಜೂನ್ 11: ಭಾರತದಲ್ಲಿ ಪ್ರತಿ ದಿನವೂ ಕೊರೊನಾ ತನ್ನ ದಾಖಲೆಯನ್ನು ತಾನೇ ಮುರಿದು ಮುಂದೆ ಹೋಗುತ್ತಿದೆ. ದೇಶದಲ್ಲಿ ಒಂದೇ ದಿನ 9996 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಂದು ದಿನದಲ್ಲಿ ಕಂಡು ಬಂದ ಅತಿ ಹೆಚ್ಚು ಪ್ರಕರಣಗಳು ಇವಾಗಿವೆ.

ಒಂದು ದಿನಕ್ಕೆ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ 10 ಸಾವಿರದ ಗಡಿಗೆ ಬಂದಿದೆ. ಸದ್ಯ, ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,86,579ಕ್ಕೆ ಏರಿಕೆಯಾಗಿದೆ. 1,37,448 ಸಕ್ರೀಯ ಪ್ರಕರಣಗಳು ಕಂಡು ಬಂದಿದ್ದು, 1,41,028 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಕೊರೊನಾ ಬಗ್ಗೆ ಎಚ್ಚರವಿರಲಿ, ಹೊಸದಾಗಿ ಎರಡು ರೋಗಲಕ್ಷಣ ಸೇರ್ಪಡೆ?

ಈವರೆಗೂ 8102 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಬರೋಬ್ಬರಿ 357 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಯ ನಂತರ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.

ವಿಶ್ವದಲ್ಲಿ 7 ಮಿಲಿಯನ್‌ಗೂ ಹೆಚ್ಚು ಜನರಿಗೆ ಕೊರೊನಾ ವೈರಸ್‌ ಹಬ್ಬಿದೆ. 4,04,000 ಮಂದಿ ಕೊರೊನಾ ವೈರಸ್‌ನಿಂದ ಸಾವನಪ್ಪಿದ್ದಾರೆ.

English summary
Coronavirus in india: 9996 new coronavirus positive cases reported in one day. The total number increase to 2,86,579.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X