ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 99 ಜನ ವೈದ್ಯರು ಕೊರೊನಾದಿಂದ ಸಾವು

|
Google Oneindia Kannada News

ದೆಹಲಿ, ಜುಲೈ 16: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರ ಪೈಕಿ ಇದುವರೆಗೂ 99 ಜನರು ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಬುಧವಾರ ಮಾಹಿತಿ ನೀಡಿದೆ.

Recommended Video

Obama , Musk , Apple , Uber and may Twitter account Hacked | Oneindia Kannada

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ವೈದ್ಯರು ಸಾವನ್ನಪ್ಪಿದ್ದಾರೆ. ಒಟ್ಟು ವೈದ್ಯರ ಸಾವಿನ ಪೈಕಿ ಶೇಕಡಾ 20ರಷ್ಟು ಜನ ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!

ವಯಸ್ಸಿನ ಆಧಾರದಲ್ಲಿ ನೋಡುವುದಾದರೆ 73 ಮಂದಿ ವೈದ್ಯರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. 35-50 ವಯಸ್ಸಿನ 19 ಜನ ವೈದ್ಯರು ಹಾಗೂ 35 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು 7 ಮಂದಿ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.

 99 Doctors died due to COVID-19, says top Medical body

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವೈದ್ಯಕೀಯ ವೃತ್ತಿ ರಾಷ್ಟ್ರದ ಭರವಸೆಯ ದಾರಿದೀಪವಾಗಿದ್ದರೂ, ಕೊವಿಡ್‌ನಿಂದ ವೈದ್ಯರು ಸಾವನ್ನಪ್ಪತ್ತಿರುವುದು ಬಹಳ ಕಳವಳಕಾರಿಯಾಗಿದೆ ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜನ್ ಶರ್ಮಾ ಹೇಳಿದ್ದಾರೆ.

ಇನ್ನು 1302 ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಐಎಂಎ ತಿಳಿಸಿದೆ. ಮುಂಬೈನಲ್ಲಿ 1000 ಕ್ಕಿಂತ ಹೆಚ್ಚು ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ. ಮುಂಬೈನ ಕೆಇಎಂ ಮತ್ತು ಸಿಯೋನ್ ಆಸ್ಪತ್ರೆಯಲ್ಲಿ ತಲಾ 300 ಸಿಬ್ಬಿಂದಿಗೆ ಸೋಂಕು ಅಂಟಿಕೊಂಡಿದೆ ಎಂದು ತಿಳಿದಿದೆ.

English summary
99 Doctors died so far due to Coronavirus in India. 73 above 50 years, 19 between 35-50 age group and 7 below 35 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X