2014- 2019: 963 ಉಗ್ರರ ಹತ್ಯೆ, 413 ಭದ್ರತಾ ಸಿಬ್ಬಂದಿ ಬಲಿದಾನ

ನವದೆಹಲಿ, ಜುಲೈ 16: ಪ್ರಧಾನಿ ನರೇಂದ್ರ ಮೋದಿ ಮೊದಲ ಅವಧಿಗೆ ಅಧಿಕಾರ ಸ್ವೀಕರಿಸಿದಾಗ ಅಂದರೆ, 2014ರಿಂದ ಇದುವರೆಗೆ 963 ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಸಂಸತ್ತಿನಲ್ಲಿ ಈ ಕುರಿತ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಿದ ಗೃಹ ಸಚಿವಾಲಯ, 963 ಭಯೋತ್ಪಾದಕರ ಹತ್ಯೆಯಾಗಿದ್ದರೆ, 413 ಭದ್ರತಾ ಸಿಬ್ಬಂದಿಯೂ ಈ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ ಎಂದಿದೆ.

"ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉಗ್ರರ ಬಗ್ಗೆ ಶೂನ್ಯ ಸಹನೆ ಹೊಂದಿರುವುದರಿಂದ ಸೈನಿಕರೇ ಸ್ವಇಚ್ಛೆಯಿಂದ ಉಗ್ರರ ದಮನಕ್ಕೆ ಮುಂದಾಗಿದ್ದಾರೆ" ಎಂದು ಅದು ತಿಳಿಸಿದೆ.

963 terrorists killed in Jammu and Kashmir since 2014: Home Ministry

2019 ರ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಉಗ್ರ ದಮನಕ್ಕೆ ಮತ್ತಷ್ಟು ಮಹತ್ವ ನೀಡಿದೆ ಎಂದು ಅದು ಹೇಳಿದೆ.

ಭಯೋತ್ಪಾದನೆಯ ವಿರುದ್ಧ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆಯ ತನ್ನ ನೀತಿಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖಾ ಅಧಿಕಾರಗಳನ್ನು ಮತ್ತಷ್ಟು ವಿಸ್ತರಿಸುವ ಎನ್ ಐಎ (ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+