ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುದಳ ದೇಶದ ಬಲಿಷ್ಠತೆಯ ಸಂಕೇತ: ಮೋದಿ ಟ್ವೀಟ್

By Mahesh
|
Google Oneindia Kannada News

ನವದೆಹಲಿ, ಅ.08: ವಿಶ್ವದ ನಾಲ್ಕನೇ ಅತಿ ಬಲಿಷ್ಠ ವಾಯುಸೇನೆ ಹೊಂದಿರುವ ಭಾರತೀಯ ವಾಯುಸೇನೆ ತನ್ನ 83ನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ 08ರಂದು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ವಾಯುಸೇನೆ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು, ಸಾರ್ವಜನಿಕರು ಶುಭ ಹಾರೈಸಿದ್ದಾರೆ.

ದೇಶದ ಹಿತ ಕಾಯ್ದುಕೊಳ್ಳುವಲ್ಲಿ ಯೋಧರ ಸದಾ ಮುಂಚೂಣಿಯಲ್ಲಿರುವ ಭಾರತೀಯ ವಾಯು ದಳದ ಪಾತ್ರ ಮಹತ್ವದ್ದಾಗಿದೆ. ಏರ್ ಫೋರ್ಸ್ ಯೋಧರಿಗೆ ಹ್ಯಾಟ್ಸಾಫ್. ಗೌರವ ಉಳಿಸಿಕೊಳ್ಳುವ ಮಹತ್ವದ ಕೆಲಸ ಮುಂದುವರೆಸಿ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.[ವಾಯುಸೇನೆ ದಿನಾಚರಣೆಯಲ್ಲಿ ಕ್ಯಾಪ್ಟನ್ ಲುಕ್ ನಲ್ಲಿ ಸಚಿನ್]

ಈ ವರ್ಷ ಕೂಡಾ ಉತ್ತರ ಪ್ರದೇಶದ ಗಾಜಿಯಾಬಾದಿನ ಹಿಂಡಾನ್ ಏರ್ ಬೇಸ್ ನಲ್ಲೇ 'ಐಎಎಫ್ ಡೇ' ಆಚರಿಸಲಾಗುತ್ತಿದೆ. ಐಎಎಫ್ ಗ್ರೂಪ್ ಕ್ಯಾಪ್ಟನ್ ಆಗಿರುವ, ಮಾಜಿ ಕ್ರಿಕೆಟರ್, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.[ಇನ್ಮುಂದೆ ಭಾರತೀಯ ವಾಯುಸೇನೆಯಲ್ಲಿ 'ನಾರಿ ಶಕ್ತಿ']

ಆಕಾಶ್ ಗಂಗಾ ಸ್ಕೈ ಡೈವರ್ಸ್ ತ್ರಿವರ್ಣ ಧ್ವಜ ಹಿಡಿದು ಆಗಸದಿಂದ ಕೆಳಕ್ಕೆ ಹಾರುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಎಎನ್ 32 ಏರ್ ಕ್ರಾಫ್ಟ್ ಪ್ರದರ್ಶನ ನಂತರ ಎಂಐ-17 ವಿ5 ಹೆಲಿಕಾಪ್ಟರ್, ಸುಖೋಯ್ ಸು 30ಎಂಕೆಐ ಏರ್ ಕ್ರಾಫ್ಟ್, ಟೈಗತ್ ಮಾಥ್, ಸಿ17 ಗ್ಲೋಬ್ ಮಾಸ್ಟರ್ ಮುಂತಾದ ವಿಮಾನ ಪ್ರದರ್ಶನ ಮುಖ್ಯ ಆಕರ್ಷಣೆಯಾಗಿದೆ. ಸಮಾರಂಭದ ಕೆಲ ಚಿತ್ರಗಳು, ಶುಭ ಹಾರೈಕೆ ಟ್ವೀಟ್ ಗಳು ಇಲ್ಲಿವೆ...

ಸೂರ್ಯ ಕಿರಣ್ ತಂಡ ಮುಖ್ಯ ಆಕರ್ಷಣೆ

ಸೂರ್ಯ ಕಿರಣ್ ತಂಡ ಮುಖ್ಯ ಆಕರ್ಷಣೆ

ಆಕಾಶ್ ಗಂಗಾ ಸ್ಕೈ ಡೈವರ್ಸ್ ತ್ರಿವರ್ಣ ಧ್ವಜ ಹಿಡಿದು ಆಗಸದಿಂದ ಕೆಳಕ್ಕೆ ಹಾರುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಸೂರ್ಯ ಕಿರಣ್ ತಂಡ (SKAT) ಈ ಬಾರಿ ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.

ಏರ್ ಫೋರ್ಸ್ ಡೇ ಬಗ್ಗೆ ಮೋದಿ ಟ್ವೀಟ್

ವಾಯುದಳ ನಮ್ಮ ಹೆಮ್ಮೆ ಎಂದು ಏರ್ ಫೋರ್ಸ್ ಡೇ ಬಗ್ಗೆ ಮೋದಿ ಟ್ವೀಟ್.

ಏರ್ ಚೀಫ್ ಮಾರ್ಷಲ್ ಅರುಪ್ ರಹಾ

ಏರ್ ಚೀಫ್ ಮಾರ್ಷಲ್ ಅರುಪ್ ರಹಾ

ಏರ್ ಚೀಫ್ ಮಾರ್ಷಲ್ ಅರುಪ್ ರಹಾ ಅವರು ಸಮಾರಂಭದ ಬಗ್ಗೆ ವಿವರಣೆ ನೀಡುತ್ತಿದ್ದಾರೆ. PTI Photo by Manvender Vashist

ರಾಜ್ಯವರ್ಧನ್ ರಾಥೋಡ್ ರಿಂದ ಟ್ವೀಟ್

ಕೇಂದ್ರ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಟ್ವೀಟ್ ಮಾಡಿ ಯೋಧರಿಗೆ ಶುಭ ಹಾರೈಸಿದ್ದಾರೆ.

ಐಎಎಸ್ ಪ್ಯಾರಾಟ್ರೂಪರ್ಸ್ ತಯಾರಿ

ಐಎಎಸ್ ಪ್ಯಾರಾಟ್ರೂಪರ್ಸ್ ತಯಾರಿ

ಗಾಜಿಯಾಬಾದಿನ ಏರ್ ಬೇಸ್ ನಲ್ಲಿ ಐಎಎಸ್ ಪ್ಯಾರಾಟ್ರೂಪರ್ಸ್ ಪೂರ್ವ ತಯಾರಿ ಚಿತ್ರ

ವಾಯುಸೇನೆಗೆ ತೇಜಸ್ ಬಲ ಸಿಗಲಿದೆ

ವಾಯುಸೇನೆಗೆ ಮುಂದಿನ ತೇಜಸ್ ಬಲ ಸಿಗಲಿದೆ ಎಂದು ಟ್ವೀಟ್.

ಸಾರಾಂಗ್ ಹೆಲಿಕಾಪ್ಟರ್ ಪ್ರದರ್ಶನ

ಸಾರಾಂಗ್ ಹೆಲಿಕಾಪ್ಟರ್ ಪ್ರದರ್ಶನ

ಭಾರತೀಯ ವಾಯು ಸೇನೆಯ ಸಾರಾಂಗ್ ಹೆಲಿಕಾಪ್ಟರ್ ಪ್ರದರ್ಶನ

ಯುದ್ಧ ವಿಮಾನಕ್ಕೆ ಮಹಿಳಾ ಪೈಲಟ್ ಗಳು

ಯುದ್ಧ ವಿಮಾನಕ್ಕೆ ಮಹಿಳಾ ಪೈಲಟ್ ಗಳು ಸೇರ್ಪಡೆಗೊಳ್ಳುವ ಕಾಲ ಬಂದಿರುವುದು ಹೆಮ್ಮೆಯ ಸಂಗತಿ.

English summary
PM Narendra Modi wished Indian Air Force on the occasion of 83rd Air Force Day today (October 8). IAF day is celebrated at the Hindon air base in Ghaziabad. It is the 83rd anniversary of the Indian Air Force. On this day, various celebrations are organised across the country along with parades at the airbases all over India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X