ಕಾಂಗ್ರೆಸ್ ನ 6 ಸಂಸದರನ್ನು ಅಮಾನತು ಮಾಡಿದ ಸ್ಪೀಕರ್ ಮಹಾಜನ್

Posted By:
Subscribe to Oneindia Kannada

ನವದೆಹಲಿ, ಜುಲೈ 24: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ನ ಆರು ಸಂಸದರನ್ನು ಐದು ದಿನಗಳ ಕಾಲ ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರ ಅಮಾನತು ಮಾಡಿದ್ದಾರೆ. ಸಂಸತ್ ನಲ್ಲಿ ಸಾಮೂಹಿಕ ಹಲ್ಲೆ ವಿಚಾರದ ಬಗ್ಗೆ ಧ್ವನಿ ಎತ್ತಿದ ವೇಳೆ ಸ್ಪೀಕರ್ ಅವರ ಕುರ್ಚಿ ಕಡೆಗೆ ಪೇಪರ್ ತುಣಕುಗಳನ್ನು ತೂರಿದರು.

ಕೇಂದ್ರ ಸಚಿವೆ ಸ್ಮತಿ ಇರಾನಿಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟ ರಮ್ಯಾ

ಅಧಿರ್ ರಂಜನ್ ಚೌಧುರಿ, ರಂಜಿತ್ ರಂಜನ್, ಸುಷ್ಮಿತಾ ದೇಬ್, ಗೌರವ್ ಗೊಗೊಯ್ ಹಾಗೂ ಕೆ.ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ.

6 Congress MPs Suspended From Lok Sabha For 5 Days

ಗೋ ರಕ್ಷಕರ ಹೆಸರಿನಲ್ಲಿ ದಿನೇದಿನೇ ಸಾಮೂಹಿಕ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಬೇಕು ಎಂದು ವಿಪಕ್ಷದ ಸಂಸದರು ಧ್ವನಿ ಎತ್ತಿದರು. ಇತ್ತ ಆಡಳಿತಾರೂಢ ಬಿಜೆಪಿಯ ಸಂಸದರು ಕಾಂಗ್ರೆಸ್ ನ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೋಫೋರ್ಸ್ ವಿವಾದದ ಬಗ್ಗೆ ಧ್ವನಿ ಎತ್ತಿದರು.

B S Yeddyurappa says, Congress has only 8 months Rule | Oneindia Kannada

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದು ಸರಿಯಾದ ಕ್ರಮವಲ್ಲ. ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಕೆಲವು ಸದಸ್ಯರು ನಿಯಮ ಉಲ್ಲಂಘನೆ ಮಾಡಿರಬಹುದು. ಈ ಹಿಂದೆ ಕೂಡ ಇಂಥ ಘಟನೆಗಳು ನಡೆದಿವೆ. ಇಂಥ ಉಗ್ರವಾದ ಶಿಕ್ಷೆ ವಿರುದ್ಧ ಧ್ವನಿ ಎತ್ತುತ್ತೇವೆ. ಮಂಗಳವಾರ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six Congress MP's have been suspended for 5 days by Lok Sabha Speaker Sumitra Mahajan on Monday for disrupting house proceedings.
Please Wait while comments are loading...