ಚಿನ್ನ ಕಳ್ಳಸಾಗಣೆ: 28 ಕೋಟಿ ರೂಪಾಯಿ ಮೌಲ್ಯದ 55.61 ಕೆಜಿ ಚಿನ್ನ ವಶಪಡಿಸಿಕೊಂಡ DRI

ನವದೆಹಲಿ, ಜನವರಿ 22: ಮ್ಯಾನ್ಮಾರ್‌ನಿಂದ ಭಾರತಕ್ಕೆ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದರ ಚಲನವಲನಗಳ ಮೇಲೆ ಕಣ್ಣಿಟ್ಟಿದದ್ದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದೆಹಲಿ ಮತ್ತು ಲಕ್ನೋದಲ್ಲಿ ಎಂಟು ವ್ಯಕ್ತಿಗಳಿಂದ 28 ಕೋಟಿ ರೂ.ಗಳ ಮೌಲ್ಯದ 55.61 ಕೆಜಿ ವಿದೇಶಿ ಮೂಲದ ಚಿನ್ನವನ್ನು ಗುರುವಾರ ವಶಪಡಿಸಿಕೊಂಡಿದೆ.

ಎರಡು ಸ್ಥಳಗಳಲ್ಲಿ ಚಿನ್ನದ ಸಾಗಣೆಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಆರ್‌ಐ, ನಿರ್ದಿಷ್ಟ ಮಾಹಿತಿಯನ್ನ ಆಧರಿಸಿ ಎಂಟು ಜನರಿಂದ ಭಾರೀ ಪ್ರಮಾಣದಲ್ಲಿ ಚಿನ್ನವನ್ನು ವಶಪಡಿಸಿಕೊಂಡಿದೆ.

''ದೇಶಾದ್ಯಂತ ಕೋವಿಡ್-19 ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಆರ್ಥಿಕ ಚಟುವಟಿಕೆಯ ವೇಗವು ಚಿನ್ನದ ಬೇಡಿಕೆಗೆ ಹೆಚ್ಚು ಕಾರಣವಾಗಿದ್ದು, ಇಂತಹ ಸಂದರ್ಭದಲ್ಲಿ ಕಳ್ಳಸಾಗಣೆ ಚಟುವಟಿಕೆ ಕೂಡ ಹೆಚ್ಚಾಗಿದೆ. ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ವಾಯು ಮಾರ್ಗಗಳಲ್ಲಿ ಚಿನ್ನದ ಕಳ್ಳಸಾಗಣೆಗೆ ಕಡಿವಾಣ ಹಾಕಿದ ಬಳಿಕ ಭೂ ಮಾರ್ಗಕ್ಕೆ ಕಳ್ಳಸಾಗಣಿಕೆದಾರರ ಕ್ರಮದಲ್ಲಿ ಗಮನಾರ್ಹ ಬದಲಾವಣೆ ಆಗಿದೆ'' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

55.61 Kg Of Foreign Gold Worth Rs 28 Crore Seized By DRI

ಲಾಕ್‌ಡೌನ್ ತೆರವಾದ ಬಳಿಕ ಕಳೆದ ಆರು ತಿಂಗಳಿನಲ್ಲಿ ಡಿಆರ್‌ಐ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಡಿಆರ್‌ಐ ಗುವಾಹಟಿ ಘಟಕವು 20 ರ ನವೆಂಬರ್‌ನಲ್ಲಿ 51.33 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದು, ಡಿಆರ್‌ಐ ವಲಯ ಘಟಕಗಳು ಆಗಸ್ಟ್‌ನಲ್ಲಿ 84 ಕೆಜಿ ಮತ್ತು ನವೆಂಬರ್‌ನಲ್ಲಿ 66 ಕೆಜಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ವಶಪಡಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+