ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ, ಹೆಚ್ಚುತ್ತಲೇ ಇದೆ ದೂರು
ನವದೆಹಲಿ, ಜುಲೈ 25: ಇತ್ತೀಚೆಗಷ್ಟೇ ಬಿಡುಗಡೆಯಾದ 'ಥಾಮಸ್ ರಿಯೋಟರ್ಸ್ ಫೌಂಡೇಶನ್ ಸಮೀಕ್ಷೆ' ಈಗಾಗಲೇ ವಿಶ್ವದಲ್ಲೇ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಹೇಳಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಮಾಹಿತಿ ಪ್ರಕಾರ 2014 ರಿಂದ 2016ರ ವರೆಗೆ ಇದುವರೆಗೂ ವಿದೇಶಿ ಮಹಿಳೆಯರ ಮೇಲೆ ನಡೆದ 53 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್, ಒಟ್ಟು 53 ಪ್ರಕರಣಗಳಿಗೆ ಸಂಬಂಧಿಸಿದಂತೆ 76 ಜನರನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬನನ್ನು ಮಾತ್ರವೇ ದೋಷಿ ಎಂದು ಪರಿಗಣಿಸಲಾಗಿದೆ ಎಂದರು.
2014 ರಲ್ಲಿ 22 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 38 ಜನರನ್ನು ಬಂಧಿಸಲಾಗಿದೆ. 2015 ರಲ್ಲಿ 12 ಪ್ರಕರಣಗಳು, 2016 ರಲ್ಲಿ19 ಪ್ರಕರಣಗಳು ದಾಖಲಾಗಿವೆ.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ನಿಯಂತ್ರಿಸಲು ಮತ್ತು ದೌರ್ಜನ್ಯ ನಡೆದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸೂಚಿಸಿದೆ. ಅಲ್ಲದೆ, ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.












Click it and Unblock the Notifications