• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೃಹ ನಿರ್ಮಾಣ ನೆರವಿಗೆ 10,000 ಕೋಟಿ: ನಿರ್ಮಲಾ ಸೀತಾರಾಮನ್

|

ನವದೆಹಲಿ, ಸೆಪ್ಟೆಂಬರ್ 14: ರಫ್ತು ಹೆಚ್ಚಳ ಉತ್ತೇಜನ ಮತ್ತು ಗೃಹ ನಿರ್ಮಾಣ ಸಹಾಯಕ್ಕಾಗಿ ಭಾರಿ ನೆರವನ್ನು ಇಂದು ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತರಾಮನ್ ಘೋಷಿಸಿದರು.

ರಫ್ತು ಹೆಚ್ಚಳಕ್ಕೆ 50,000 ಕೋಟಿ ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್ ಮಧ್ಯಮ ವೆಚ್ಚದ ಗೃಹ ನಿರ್ಮಾಣ ಸಹಾಯಕ್ಕೆ 10,000 ಕೋಟಿ ನೆರವು ಘೋಷಿಸಿದ್ದಾರೆ.

ಕುಸಿದ ರಫ್ತು ವ್ಯವಹಾರಕ್ಕೆ ನಿರ್ಮಲಾ ಸೀತಾರಾಮನ್ ತೇಪೆ ಪ್ರಯತ್ನ

ಕೇಂದ್ರವು ಮಧ್ಯಮ ವೆಚ್ಚದ ಗೃಹ ನಿರ್ಮಾಣ ನೆರವಿಗೆ 10,000 ಕೋಟಿ ನೀಡಲಿದ್ದು, ಇಷ್ಟೇ ಪ್ರಮಾಣದ ಹಣ ಹೊರಗಿನಿಂದಲೂ ಹರಿದು ಬರಲಿದೆ ಎಂದು ಹೇಳಿದ್ದಾರೆ. ಭಾರಿ ಮೊತ್ತದ ಹಣದ ನೆರವಿನಿಂದಾಗಿ ಗೃಹ ಸಾಲಗಳು ಸೇರಿದಂತೆ ಗೃಹ ನಿರ್ಮಾಣದ ವೆಚ್ಚವೂ ಸ್ವಲ್ಪ ಕಡಿಮೆ ಆಗುವ ಸಾಧ್ಯತೆ ಇದೆ.

ಸರಕು ರಫ್ತಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ತೆರಿಗೆ ಇಳಿಕೆ ಮತ್ತು ಕೆಲವು ತೆರಿಗೆಗಳನ್ನು ಕಡಿತ ಮಾಡಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 50,000 ಕೋಟಿ ಹೊರೆ ಆಗಲಿದೆ. ಈ ಹೊಸ ತೆರಿಗೆ ಪದ್ಧತಿಯು 2020 ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಸಣ್ಣ ಮಟ್ಟದ ತೆರಿಗೆ ಅಪಧಾರಕ್ಕೆ ಕಾನೂನು ಕ್ರಮ ಇಲ್ಲ: ನಿರ್ಮಲಾ ಸೀತಾರಾಮನ್

ಹಣದುಬ್ಬರ ನಿಯಂತ್ರಣದಲ್ಲಿದ್ದು, ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ ಅಂತ್ಯದಿಂದ ಹೆಚ್ಚಳವಾಗಿದ್ದು, ಇನ್ನಷ್ಟು ಪ್ರಗತಿ ಹೊಂದುವ ಸ್ಪಷ್ಟ ಸೂಚನೆ ನೀಡಿದೆ ಎಂದು ಅವರು ಹೇಳಿದರು.

English summary
Finance minister Nirmala Sitharaman today announce 50,000 crore help to increase export sector and 10,000 crore help to affordable house construction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X