ಕಾರ್ತಿ ಬೇಲ್ ಕ್ಯಾನ್ಸಲ್ : ನ್ಯಾಯಾಧೀಶರು ಹೇಳಿದ್ದೇನು?
Recommended Video

ನವದೆಹಲಿ, ಮಾರ್ಚ್ 02 : ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ವಿರುದ್ಧ, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಕೆ ಮಣ್ಣೆರಚಿ, ಹಣ ದುರುಪಯೋಗ ಮಾಡಿದ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸಿಬಿಐನ ಕಸ್ಟಡಿಗೆ ನೀಡಲಾಗಿದೆ.
ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯಾ ಅವರ ಐಎನ್ಎಕ್ಸ್ ಮೀಡಿಯಾ ಕಂಪನಿಗೆ ಮಾರಿಷನ್ ಕಂಪನಿಯಿಂದ ಹರಿದುಬಂದ ವಿದೇಶಿ ಹಣಕ್ಕೆ ತೆತ್ತಬೇಕಾದ ತೆರಿಗೆಯನ್ನು ವಂಚಿಸಲು, ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಕಾರ್ತಿ ಚಿದಂಬರಂ ಅವರಿಗೆ 10 ಲಕ್ಷ ರುಪಾಯಿ ಕಮಿಷನ್ ನೀಡಲಾಗಿದೆ ಎಂಬ ಆರೋಪ ಹೊರಿಸಲಾಗಿದೆ.
ಅವರನ್ನು ಸಿನಿಮೀಯ ರೀತಿಯಲ್ಲಿ ಚೆನ್ನೈ ಏರ್ಪೋರ್ಟಿನಲ್ಲಿ ಬಂಧಿಸಿದ ನಂತರ, ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಬುಧವಾರ ಭಾರೀ ನಾಟಕವೇ ನಡೆಯಿತು. ಕಾರ್ತಿಯ ಹುಚ್ಚಾಟಗಳನ್ನು ನೋಡಿದ ನ್ಯಾಯಾಧೀಶರು, ಕಡೆಗೆ ಅವರನ್ನು ಮಾರ್ಚ್ 5ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ, 46 ವರ್ಷದ ಕಾರ್ತಿಯ ಜಾಮೀನನ್ನು ನಿರಾಕರಿಸಿ, ವಿಶೇಷ ಸಿಬಿಐ ನ್ಯಾಯಾಧೀಶರಾದ ಸುನೀಲ್ ರಾಣಾ ಅವರು ಗಮನಿಸಿರುವ ಅಂಶಗಳು, ಜಾಮೀನು ನಿರಾಕರಿಸಲು ನೀಡಿರುವ ಕಾರಣಗಳು ಗಮನಾರ್ಹವಾಗಿವೆ.

ಆರೋಪ ಮೇಲ್ನೋಟಕ್ಕೆ ಸಾಬೀತು
ಕಾರ್ತಿ ಚಿದಂಬರ್ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ, ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗುವವರೆಗೆ ಅವರು ತನಿಖಾ ಸಂಸ್ಥೆಯ ವಶದಲ್ಲಿರಬೇಕಾಗಿರುವುದು ಅತೀ ಅವಶ್ಯ ಎಂದು ಸುನೀಲ್ ರಾಣಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಷಡ್ಯಂತ್ರ ಬಯಲಿಗೆಳೆಯಲು ವಶ ಅನಿವಾರ್ಯ
ಕಾರ್ತಿ ಅವರ ವಿರುದ್ಧ ಸಿಬಿಐ ಈಗಾಗಲೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ, ತನ್ನ ಬಳಿ ಸಾಕ್ಷ್ಯವಿದೆ ಎಂದು ಹೇಳಿದೆ. ಕಾರ್ತಿ ಮತ್ತು ಸಹ ಆರೋಪಿ ಸೇರಿ ಮಾಡಿದ್ದಾರೆನ್ನಲಾಗಿರುವ ಷಡ್ಯಂತ್ರವನ್ನು ಬಯಲಿಗೆಳೆಯಲು, ದಾಖಲೆಗಳನ್ನು ಪುಷ್ಟೀಕರಿಸಲು ಅವರು ಸಿಬಿಐ ವಶದಲ್ಲಿರುವುದು ಅನಿವಾರ್ಯವಾಗಿದೆ.

ಪ್ರಕರಣ ಗಂಭೀರ ಮತ್ತು ಕ್ಲಿಷ್ಟಕರ
ಈ ಪ್ರಕರಣ ಗಂಭೀರ ಮತ್ತು ಕ್ಲಿಷ್ಟಕರವಾಗಿದ್ದು, ಕೆಲವು ನಿರ್ದಿಷ್ಟ ಉತ್ತರಗಳನ್ನು ಪ್ರಮುಖ ಆರೋಪಿ ಕಾರ್ತಿ ಚಿದಂಬರಂ ಮತ್ತು ಇತರ ಸಹ ಆರೋಪಿಗಳಿಂದ ಪಡೆಯುವ ಅಗತ್ಯವಿರುವುದರಿಂದ ಕಾರ್ತಿ ಅವರ ಉಪಸ್ಥಿತಿ ಬೇಕೇಬೇಕಾಗಿದೆ.

ಹೆಚ್ಚಿನ ಮಾಹಿತಿ ತೆಗೆಯಲು ಪೊಲೀಸ್ ಕಸ್ಟಡಿ
ಆರೋಪಿಯಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಾಗಿರುವುದರಿಂದ ಸಿಬಿಐ ವಶಕ್ಕೆ ನೀಡಬೇಕು ಎಂಬ ಸಾಮಾನ್ಯ ಕೋರಿಕೆಯನ್ನು ಮನ್ನಿಸಲಾಗದು. ಆದರೆ, ರಿಮಾಂಡ್ ಗೆ ನೀಡಿದಾಗ ಹೆಚ್ಚಿನ ಮಾಹಿತಿಯನ್ನು ತೆಗೆಯಲು ಸಾಧ್ಯವಾಗದಿದ್ದರೆ, ಪೊಲೀಸ್ ಕಸ್ಟಡಿಗೆ ನೀಡುವುದು ಅನಿವಾರ್ಯವಾಗುತ್ತದೆ.

ಮಾರ್ಚ್ 6ರಂದು ಸಿಬಿಐ ಕೋರ್ಟಿಗೆ ಹಾಜರ್
ಕಾರ್ತಿ ಅವರನ್ನು ಮಾರ್ಚ್ 6ರಂದು ಸಿಬಿಐ ನ್ಯಾಯಾಲಯದ ಮುಂದೆ ಮತ್ತೆ ಹಾಜರುಪಡಿಸಬೇಕು. ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪ್ರತಿ 24 ಗಂಟೆಗಳಿಗೊಮ್ಮೆ ಅವರ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications