ಒಂದೇ ದಿನ 4987 ಕೇಸ್ ಪತ್ತೆ, ಒಟ್ಟು ಸೋಂಕು 90927ಕ್ಕೆ ಏರಿಕೆ
ದೆಹಲಿ, ಮೇ 17: ದೇಶದಲ್ಲಿ ಒಂದೇ ದಿನ 4987 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದುವರೆಗೂ ದಿನವೊಂದರಲ್ಲಿ ವರದಿಯಾದ ಪ್ರಕರಣಗಳ ಪೈಕಿ ಇದೇ ಹೆಚ್ಚು.
ಈ ಮೂಲಕ ಭಾರತದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 90927ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 4987 ಹೊಸ ಕೇಸ್ ವರದಿಯಾಗಿದ್ದು, 120 ಮಂದಿ ಮೃತಪಟ್ಟಿದ್ದಾರೆ.
ಲಾಕ್‌ಡೌನ್ 4.O: ಈ 30 ಪ್ರದೇಶಗಳ ಮೇಲೆ ಕೇಂದ್ರ ಸರ್ಕಾರ ಕಟ್ಟೆಚ್ಚರ
90927 ಪ್ರಕರಣಗಳ ಪೈಕಿ 53946 ಜನರು ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 34109 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 2872 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ವಿಶ್ವದಲ್ಲಿ ಹೊಸ ಕೇಸ್‌ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ 23,488 ಹೊಸ ಕೇಸ್ ವರದಿಯಾಗಿದೆ. ರಷ್ಯಾದಲ್ಲಿ 9200 ಕೇಸ್ ದಾಖಲಾಗಿದೆ. ಬ್ರೆಜಿಲ್‌ನಲ್ಲಿ 14,919 ಕೇಸ್ ಪತ್ತೆಯಾಗಿದೆ. ಭಾರತದಲ್ಲಿ 4987 ಹೊಸ ಕೇಸ್ ಬೆಳಕಿಗೆ ಬಂದಿದೆ.
ಇನ್ನುಳಿದಂತೆ ದೇಶದಲ್ಲಿ ಮೇ 18 ರಿಂದ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಾಗಲಿದೆ. ಇಂದು ಕೇಂದ್ರ ಸರ್ಕಾರದಿಂದ ಮುಂದಿನ ಲಾಕ್‌ಡೌನ್ ಕುರಿತಂತೆ ಮಾರ್ಗಸೂಚಿಗಳನ್ನು ಹೊರಡಿಸಲಿದೆ.