ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣ: ಚೀನಾ ಕಂಪನಿಗಳು ಔಟ್

|
Google Oneindia Kannada News

ನವದೆಹಲಿ, ಆಗಸ್ಟ್‌ 22: ಭಾರತ-ಚೀನಾ ಗಡಿ ವಿವಾದದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಸದ್ಯಕ್ಕೆ ಕಮ್ಮಿ ಆಗುವ ಯಾವುದೇ ಲಕ್ಷಣಗಳಿಲ್ಲ. ಈಗಾಗಲೇ ಭಾರತವು ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ್ದು, ಅನೇಕ ಸರ್ಕಾರಿ ಸ್ವಾಮ್ಯದ ಕಂಪನಿಗಳ ಟೆಂಡರ್‌ ಹೊಂದಿದ್ದ ಚೀನಾ ಕಂಪನಿಗಳನ್ನ ಹೊರಗಿಟ್ಟಿದೆ.

ಇದರ ಜೊತೆಗೆ ಭಾರತ ಸೆಮಿ ಹೈಸ್ಪೀಡ್ ರೈಲು ಸೆಟ್‌ಗಳಿಗೆ ಬಿಡ್ಡಿಂಗ್ ಮಾಡುವುದರಿಂದ ಚೀನಾ ಕಂಪನಿಗಳನ್ನು ಹೊರಗಿಟ್ಟಿದೆ. ಇದನ್ನು ಚೀನಾಕ್ಕೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ.

ಭಾರತ-ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ 18ನೇ ಸುತ್ತಿನ ಸಭೆ ಭಾರತ-ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ 18ನೇ ಸುತ್ತಿನ ಸಭೆ

44 ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣ

44 ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣ

ವಂದೇ ಭಾರತ್ ಯೋಜನೆಯಡಿ 44 ಸೆಟ್‌ಗಳ ಹೈಸ್ಪೀಡ್ ರೈಲುಗಳಿಗೆ ಭಾರತೀಯ ರೈಲ್ವೆ ಅಂತರರಾಷ್ಟ್ರೀಯ ಟೆಂಡರ್ ನೀಡಿತ್ತು. ಈ ಟೆಂಡರ್‌ನಲ್ಲಿ ಚೀನಾದ ಕಂಪನಿಗಳು ಕೂಡ ಟೆಂಡರ್‌ಗಳನ್ನು ಭರ್ತಿ ಮಾಡಿವೆ. ಈಗ ರೈಲ್ವೆ ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ರೈಲ್ವೆ ಶೀಘ್ರದಲ್ಲೇ ಮತ್ತೆ ಹೊಸ ಟೆಂಡರ್ ನೀಡಲಿದೆ. ಇದರಲ್ಲಿ ಯಾವುದೇ ಚೀನೀ ಸಂಸ್ಥೆಯನ್ನು ಭಾಗವಹಿಸಲು ಅನುಮತಿಸುವುದಿಲ್ಲ.

ಟೆಂಡರ್ ರದ್ದುಗೊಳಿಸಿದ ರೈಲ್ವೆ

ಟೆಂಡರ್ ರದ್ದುಗೊಳಿಸಿದ ರೈಲ್ವೆ

ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಹೈಸ್ಪೀಡ್‌ ರೈಲುಗಳನ್ನು ಭಾರತದಲ್ಲಿ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಕಳೆದ ವರ್ಷ ಆಹ್ವಾನಿಸಲಾಗಿದ್ದ 44 ಅರೆ-ವೇಗದ ವಂದೇ ಭಾರತ್ ರೈಲುಗಳ ನಿರ್ಮಾಣದ ಟೆಂಡರ್ ರದ್ದುಗೊಳಿಸಿದೆ ಎಂದು ರೈಲ್ವೆ ಶುಕ್ರವಾರ ತಿಳಿಸಿದೆ.

1,000 ಕೋಟಿ ಅಕ್ರಮ ಹಣ ವರ್ಗಾವಣೆ ಕಿಂಗ್‌ಪಿನ್: ಯಾರು ಈ ಚೀನಾದ ಪ್ರಜೆ?1,000 ಕೋಟಿ ಅಕ್ರಮ ಹಣ ವರ್ಗಾವಣೆ ಕಿಂಗ್‌ಪಿನ್: ಯಾರು ಈ ಚೀನಾದ ಪ್ರಜೆ?

ಟೆಂಡರ್‌ಗೆ ಅರ್ಜಿ ಹಾಕಿದ್ದ ಚೀನಾ ಕಂಪನಿ

ಟೆಂಡರ್‌ಗೆ ಅರ್ಜಿ ಹಾಕಿದ್ದ ಚೀನಾ ಕಂಪನಿ

ಕಳೆದ ತಿಂಗಳು ಟೆಂಡರ್ ತೆರೆದಾಗ 16 ಬೋಗಿಗಳ ಈ 44 ಬೋಗಿಗಳಿಗೆ ವಿದ್ಯುತ್ ಉಪಕರಣಗಳು ಮತ್ತು ಇತರ ಸರಕುಗಳನ್ನು ಪೂರೈಸುವ ಆರು ಸ್ಪರ್ಧಿಗಳಲ್ಲಿ ಚೀನಾದ ಜಂಟಿ ಉದ್ಯಮ (ಸಿಆರ್ಆರ್ಸಿ-ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್) ಏಕೈಕ ವಿದೇಶಿಯರಾಗಿ ಹೊರಹೊಮ್ಮಿತು.

ಟೆಂಡರ್ ರದ್ದಿಗೆ ನಿರ್ದಿಷ್ಟ ಕಾರಣವಿಲ್ಲ

ಟೆಂಡರ್ ರದ್ದಿಗೆ ನಿರ್ದಿಷ್ಟ ಕಾರಣವಿಲ್ಲ

ಇನ್ನು ಟೆಂಡರ್ ರದ್ದುಪಡಿಸಿರುವ ಕುರಿತು ಯಾವುದೇ ನಿರ್ದಿಷ್ಟ ಕಾರಣವನ್ನು ಭಾರತೀಯ ರೈಲ್ವೆ ಉಲ್ಲೇಖಿಸಿಲ್ಲ.

ವರದಿಗಳ ಪ್ರಕಾರ, 6 ಕಂಪೆನಿಗಳು 16 ಕಂಪಾರ್ಟ್‌ಮೆಂಟ್‌ಗಳೊಂದಿಗೆ 44 ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲುಗಳಿಗೆ ವಿದ್ಯುತ್ ಉಪಕರಣಗಳು ಮತ್ತು ಇತರ ವಸ್ತುಗಳನ್ನು ಪೂರೈಸಲು ಟೆಂಡರ್ ಸಲ್ಲಿಸಿದ್ದವು. ಚೀನಾದ ಜಂಟಿ ಉದ್ಯಮ ಸಿಆರ್‌ಆರ್‌ಸಿ-ಪಯೋನೀರ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಏಕೈಕ ವಿದೇಶಿ ಕಂಪನಿಯಾಗಿತ್ತು, ಆದರೆ ಟೆಂಡರ್ ರದ್ದುಗೊಂಡಿದೆ.

English summary
Indian Railways has re-issued the tender for making 44 semi- high-speed Vande Bharat trains. The decision was taken by the Railways because of the bidding on behalf of a joint venture of a Chinese company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X