ಲಾಕ್‌ಡೌನ್: ಭಾರತದಿಂದ ಪಾಕಿಸ್ತಾನಕ್ಕೆ ಹೋದವರೆಷ್ಟು?

ನವದೆಹಲಿ, ಮೇ 27: ಕೊರೊನಾ ಲಾಕ್‌ಡೌನ್‌ನಿಂದ ಭಾರತದಲ್ಲಿ ಸಿಲುಕಿದ್ದ 400 ಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರನ್ನು ಕೇಂದ್ರ ಸರ್ಕಾರ ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಿ ಕೊಟ್ಟಿದೆ.

Recommended Video

      3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

      ಬುಧವಾರ ಪಂಜಾಬ್‌ನಲ್ಲಿರುವ ಅಟ್ಟಾರಿ-ವಾಘಾ ಬಾರ್ಡರ್ ಮೂಲಕ 176 ಪಾಕಿಸ್ತಾನಿ ನಾಗರಿಕರು ತಮ್ಮ ತಮ್ಮ ಮನೆ ಸೇರಿದರು.

      ಬುಧವಾರ ಮರಳಿದ 176 ಪಾಕಿಸ್ತಾನಿ ನಾಗರಿಕರು ಛತ್ತಿಸ್‌ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮತ್ತು ದೆಹಲಿ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಮಾರ್ಚ್ 20 ರಿಂದ 400 ಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರನ್ನು ಅಟ್ಟಾರಿ-ವಾಘಾ ಬಾರ್ಡರ್ ಮೂಲಕ ಭಾರತದಿಂದ ವಾಪಸ್ ಕಳುಹಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

      400 Pakistani People sent back Who Stuck In India Ahead Of Coronavirus Lockdown

      ಪಾಕ್ ಪ್ರಧಾನಮಂತ್ರಿ ಸೂಚನೆ ಮೇರೆಗೆ, ಭಾರತದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನಿಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ವಾಪಸ್ ಕಳುಹಿಸಲು, ನವದೆಹಲಿಯ ಪಾಕಿಸ್ತಾನದ ಹೈಕಮಿಷನರ್ ಪ್ರಯತ್ನಪಟ್ಟಿದ್ದರು, ಉಳಿದಿರುವ ಎಲ್ಲ ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸುವವರೆಗೆ ವಿದೇಶಾಂಗ ಸಚಿವಾಲಯದ ನಿರಂತರ ಪ್ರಯತ್ನಗಳನ್ನು ಹೈಕಮೀಷನರ್ ಮುಂದುವರಿಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

      ಈ ಹಿಂದೆ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ವಿಶ್ವದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್ ಪರಿಣಾಮವಾಗಿ ಸಿಲುಕಿರುವ 1,10,000 ಕ್ಕೂ ಹೆಚ್ಚು ಪಾಕಿಸ್ತಾನಿಗಳು ಮರಳಿ ದೇಶಕ್ಕೆ ಬರಲು ಬಯಸುತ್ತಾರೆ ಎಂದು ಹೇಳಿದ್ದರು. ಪಾಕಿಸ್ತಾನದಲ್ಲಿ ಈವರೆಗೆ 57,705 ಕೋವಿಡ್ 19 ಪ್ರಕರಣಗಳಿಗೆ ವರದಿಯಾಗಿದ್ದು, 1,197 ಜನ ಮಾರಕ ವೈರಸ್‌ನಿಂದ ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+