ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 200 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು

|
Google Oneindia Kannada News

ದೆಹಲಿ, ಏಪ್ರಿಲ್ 28: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮಾಡುತ್ತಿದೆ. ಈವರೆಗೂ ರಾಜ್ಯದಲ್ಲಿ 3108 ಜನರಿಗೆ ಕೊವಿಡ್ ಸೋಂಕು ತಗುಲಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಮೂರನೇ ರಾಜ್ಯ ದೆಹಲಿ.

ದೆಹಲಿಯಲ್ಲಿ ಸುಮಾರು 200 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯಂದರ್ ಜೈನ್ ಮಂಗಳವಾರ ಬೆಳಿಗ್ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 8 ಕೇಸ್ ಪತ್ತೆ, ಕಲಬುರಗಿ ಹೆಚ್ಚು, ಬೆಂಗಳೂರಿಗೆ ರಿಲೀಫ್ ರಾಜ್ಯದಲ್ಲಿ 8 ಕೇಸ್ ಪತ್ತೆ, ಕಲಬುರಗಿ ಹೆಚ್ಚು, ಬೆಂಗಳೂರಿಗೆ ರಿಲೀಫ್

200 ವೈದ್ಯಕೀಯ ಸಿಬ್ಬಂದಿ ಪೈಕಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಸೇರಿದ ಎಲ್ಲರೂ ಇದ್ದಾರೆ. ಜಹಾಂಗಿರಿ ಪ್ರದೇಶದಲ್ಲಿರುವ ಬಾಬು ಜಗಜೀವನ ರಾಮ್ ಆಸ್ಪತ್ರೆಯೊಂದರಲ್ಲಿ ಸುಮಾರು 60 ಜನರಿಗೆ ಸೋಂಕು ದೃಢವಾಗಿದೆ ಎಂದು ಹೇಳಿದ್ದಾರೆ.

200 Healthcare Staff Infected With COVID 19 In Delhi

ಅಂದ್ಹಾಗೆ, ದೆಹಲಿಯಲ್ಲಿ 3108 ಜನರಿಗೆ ಸೋಂಕು ವರದಿಯಾಗಿದ್ದು, 190 ಪ್ರಕರಣಗಳು ನಿನ್ನೆ ದಾಖಲಾಗಿದೆ. ಪ್ರಸ್ತುತ 2177 ಕೇಸ್‌ ಸಕ್ರಿಯವಾಗಿದ್ದು, 877 ಜನ ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 11 ಜನರು ವೆಂಟಿಲೇಟರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನುಳಿದಂತೆ ರಾಜ್ಯದಲ್ಲಿ ಇದುವರೆಗೂ 54 ಜನರು ಸೋಂಕಿನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

ಕೊರೊನಾ ವಿರುದ್ಧ ಹೋರಾಡುತ್ತಿರುವ ಜರ್ಮನ್ ವೈದ್ಯರಿಂದ 'ನಗ್ನ' ಪ್ರತಿಭಟನೆ: ಕಾರಣವೇನು?ಕೊರೊನಾ ವಿರುದ್ಧ ಹೋರಾಡುತ್ತಿರುವ ಜರ್ಮನ್ ವೈದ್ಯರಿಂದ 'ನಗ್ನ' ಪ್ರತಿಭಟನೆ: ಕಾರಣವೇನು?

ಇನ್ನು ಮೇ 3ರ ಬಳಿಕ ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ, ಇನ್ನು ನಾಲ್ಕೈದು ದಿನ ಬಾಕಿ ಇದೆ. ಈ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಅವಲೋಕಿಸಬೇಕಿದೆ. ಬಳಿಕ, ಕೇಂದ್ರ ಸರ್ಕಾರದ ಸಲಹೆ ಪಡೆದು, ಲಾಕ್‌ಡೌನ್‌ ವಿಸ್ತರಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

English summary
Around 200 Healthcare personnel infected with coronavirus in delhi said health minister satyendar jain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X