ಸುಕೇಶ್ ಚಂದ್ರಶೇಖರ್ ವಿರುದ್ಧ 200 ಕೋಟಿ ಸುಲಿಗೆ ಪ್ರಕರಣ: ನೋರಾ ಫತೇಹಿ ವಿಚಾರಣೆ
ದೆಹಲಿ ಸೆಪ್ಟೆಂಬರ್ 3: ಸುಕೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ಪೊಲೀಸರು ಕಳೆದ ವಾರ ನೋರಾ ಫತೇಹಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಹೀಗಾಗಿ ನೋರಾ ಫತೇಹಿ ಅವರು ನಿನ್ನೆ ಬೆಳಿಗ್ಗೆ ತನಿಖಾಧಿಕಾರಿಯ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ಹಾಜರಾದರು. ಸುಕೇಶ್ ಅವರಿಂದ ಪಡೆದ ಉಡುಗೊರೆಗಳಿಗೆ ಸಂಬಂಧಿಸಿದಂತೆ ಆಕೆಗೆ 50 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು.
ರಾನ್‌ಬಾಕ್ಸಿ ಸಂಸ್ಥೆಯ ಶಿವಿಂದರ್ ಸಿಂಗ್ ಅವರು ಬೇರೊಂದು ಹಣ ಅವ್ಯವಹಾರ ಪ್ರಕರಣದಲ್ಲಿ 2019 ರಲ್ಲಿ ಜೈಲು ಸೇರಿದ್ದರು. ಅವರನ್ನು ಬಿಡಿಸಿಕೊಡುವ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್, ಶಿವಿಂದರ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ನಟಿ ನೋರಾ ಫತೇಹಿ ವಿಚಾರಣೆ
ಸುಕೇಶ್ ಪ್ರಧಾನಿ ಕಚೇರಿಯ ಅಧಿಕಾರಿಯಂತೆ ನಟಿಸಿ ಈ ಸುಲಿಗೆಯನ್ನು ಮಾಡಿದ್ದನು ಎಂದು ಹೇಳಲಾಗುತ್ತಿದೆ. ಸಂತ್ರಸ್ತೆಯ ಪತಿಗೆ ಜಾಮೀನು ಸಿಗಲಿದ್ದು, ನಂತರ ತನ್ನ ಫಾರ್ಮಾ ವ್ಯವಹಾರ ಪುನರಾರಂಭವಾಗಲಿದೆ ಎಂದು ಸುಕೇಶ್ ದೂರವಾಣಿ ಕರೆಯಲ್ಲಿ ಅದಿತಿ ಸಿಂಗ್‌ಗೆ ಭರವಸೆ ನೀಡಿದ್ದರು. ಈ ಭರವಸೆಯೊಂದಿಗೆ 200 ಕೋಟಿ ಸುಲಿಗೆ ಮಾಡಿದ್ದರು.
ಬಳಿಕ ಸುಕೇಶ್ ಮೋಸ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಇದರ ವಿಚಾರಣೆಯಲ್ಲಿ ಕಳೆದ ವರ್ಷ ದೆಹಲಿ ಪೊಲೀಸರು ಸುಕೇಶ್, ಅವರ ಪತ್ನಿ ಲೀನಾ ಮರಿಯಾ ಪಾಲ್ ಮತ್ತು ಇತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖೆ ವೇಳೆ ಸುಕೇಶ್ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ ಆರೋಪವನ್ನು ನೋರಾ ಫತೇಹಿ ಹೊತ್ತಿದ್ದಾರೆ.

ಸುಕೇಶ್ ಪತ್ನಿಯಿಂದ ಕಾರು ಉಡುಗೊರೆ
ಆದರೆ ಈ ಆರೋಪವನ್ನು ನೋರಾ ತಳ್ಳಿಹಾಕಿದ್ದಾರೆ. ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಯಾಗಿ ಸುಕೇಶ್ ಅವರ ಪತ್ನಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಹಿಂದೆ ಜಾರಿ ನಿರ್ದೇಶನಾಲಯ 200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿತ್ತು. ಇಡಿ ಆಗಸ್ಟ್‌ನಲ್ಲಿ ಬಾಲಿವುಡ್ ನಟಿಯ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಸುಲಿಗೆ ಮಾಡಿದ ಹಣದ ಫಲಾನುಭವಿ ಜಾಕ್ವೆಲಿನ್ ಎಂದು ಇಡಿ ಪತ್ತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕಳ್ಳ ಸುಕೇಶ್ ಚಂದ್ರಶೇಖರ್ ಸುಲಿಗೆಕೋರ ಎಂದು ಆಕೆಗೆ ತಿಳಿದಿತ್ತು ಎಂದು ಇಡಿ ಹೇಳಿದೆ. ಪ್ರಮುಖ ಸಾಕ್ಷಿಗಳು ಮತ್ತು ಆರೋಪಿಗಳ ಹೇಳಿಕೆಗಳಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಅವರೊಂದಿಗೆ ವೀಡಿಯೊ ಕರೆಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಶ್ರೀಲಂಕಾ ಮೂಲದ ನಟಿಗೆ ಉಡುಗೊರೆಗಳನ್ನು ನೀಡಿದ್ದಾಗಿ ಸುಕೇಶ್ ತಪ್ಪೊಪ್ಪಿಕೊಂಡಿದ್ದಾನೆ.

ಸುಕೇಶ್ ನಿಂದ ದುಬಾರಿ ಉಡುಗೊರೆ ಪಡೆದ ಜಾಕ್ವೆಲಿನ್
ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ನೀಡಿದ್ದಾರೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಜಾಕ್ವೆಲಿನ್ ಅಪರಾಧ ಚಟುವಟಿಕೆಗಳ ಮೂಲಕ ಈ ಹಣವನ್ನು ಪಡೆದಿದ್ದಾಳೆ ಎನ್ನಲಾಗುತ್ತಿದೆ. ಚಂದ್ರಶೇಖರ್ ಅವರು ಪಿಂಕಿ ಇರಾನಿ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಈ ಉಡುಗೊರೆಗಳನ್ನು ಕಳುಹಿಸಿದ್ದರು. ಪಿಂಕಿ ಸುಕೇಶ್‌ನ ಹಳೆಯ ಸ್ನೇಹಿತೆಯಾಗಿದ್ದು, ಆಕೆ ಕೂಡ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದಾಳೆ. ಜಾಕ್ವೆಲಿನ್‌ಗೆ 52 ಲಕ್ಷ ರೂಪಾಯಿ ಮೌಲ್ಯದ ಕುದುರೆ, 9 ಲಕ್ಷ ರೂಪಾಯಿ ಮೌಲ್ಯದ ಪರ್ಷಿಯನ್ ಬೆಕ್ಕು ನೀಡಲಾಗಿದೆ. ಇದಲ್ಲದೇ ಜಾಕ್ವೆಲಿನ್ ಕುಟುಂಬ ಸದಸ್ಯರಿಗೆ ಸುಕೇಶ್ ಸಾಕಷ್ಟು ಹಣವನ್ನೂ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ನೋರಾ ಬಿಟ್ಟು ನನ್ನ ವಿರುದ್ಧ ಪ್ರಕರಣ- ಜಾಕ್ವಲಿನ್
ಈ ಹಿಂದೆ ಸುಕೇಶ್ ಆಕೆಗೆ 10 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಕಳುಹಿಸಿದ್ದನ್ನು ಇಡಿ ಪತ್ತೆ ಹಚ್ಚಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಇದುವರೆಗೆ ನಟಿಯ 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್ ಜೊತೆಗಿನ ನಂಟುಗಳ ಆರೋಪದ ಮೇಲೆ ಇಡಿ ಹಲವು ಬಾರಿ ಪ್ರಶ್ನಿಸಿತ್ತು. ಮೂವತ್ಮೂರು ವರ್ಷದ ಸುಕೇಶ್ ಚಂದ್ರಶೇಖರ್ ಅವರನ್ನು ಹಲವು ರಾಜ್ಯ ಪೊಲೀಸರು ಮತ್ತು ಮೂರು ಕೇಂದ್ರೀಯ ಏಜೆನ್ಸಿಗಳು - ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆಯಿಂದ 32 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖೆ ನಡೆಸುತ್ತಿದೆ.
ಈ ನಡುವೆ ಜಾಕ್ವೆಲಿನ್ ತನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಟಿ ನೋರಾ ಫತೇಹಿಯಂತೆ ನಾನೂ ಕೂಡ ಉಡುಗೊರೆಯನ್ನು ಪಡೆದಿದ್ದೇನೆ. ಆದರೆ ನೋರಾ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ನನ್ನ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ. ಇದರಿಂದ ನನಗೆ ಮೋಸವಾಗಿದೆ. ಜಪ್ತಿ ಮಾಡಿದ ಆಸ್ತಿ ನನ್ನ ಸ್ವಂತ ದುಡಿಮೆಯಿಂದ ಬಂದಿದ್ದು, ಅದನ್ನು ವಾಪಸ್ಸು ಕೊಡುವಂತೆ ಜಾಕ್ವೆಲಿನ್ ಹೇಳಿದ್ದಾರೆ.
-
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications