ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ 2ನೇ ಹಂತದ ಚುನಾವಣೆ; 11% ಅಭ್ಯರ್ಥಿಗಳ ಮೇಲಿದೆ ಕ್ರಿಮಿನಲ್ ಕೇಸ್

|
Google Oneindia Kannada News

ನವದೆಹಲಿ, ಮಾರ್ಚ್ 24: ಈ ಬಾರಿ ಅಸ್ಸಾಂ ಎರಡನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 345 ಅಭ್ಯರ್ಥಿಗಳ ಪೈಕಿ ಶೇ 11ರಷ್ಟು ಜನರು ಅಪರಾಧ ಪ್ರಕರಣ ಸಂಬಂಧಿ ಮೊಕದ್ದಮೆಗಳನ್ನು ಹೊಂದಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮಾಹಿತಿ ನೀಡಿದೆ.

ಅಸ್ಸಾಂ ಎಲೆಕ್ಷನ್ ವಾಚ್ ಹಾಗೂ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ 345 ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆ ನಡೆಸಿದ್ದು, ಶೇ 11ರಷ್ಟು ಅಭ್ಯರ್ಥಿಗಳು ತಮ್ಮ ಮೇಲೆ ಅಪರಾಧ ಪ್ರಕರಣ ಇರುವುದಾಗಿ ನಾಮಪತ್ರದಲ್ಲಿ ನಮೂದಿಸಿದ್ದಾರೆಂದು ತಿಳಿಸಿವೆ.

ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...

ಈ 345 ಅಭ್ಯರ್ಥಿಗಳ ಪೈಕಿ 37, ಅಂದರೆ ಶೇ 11ರಷ್ಟು ಮಂದಿ ತಮ್ಮ ಮೇಲೆ ಅಪರಾಧ ಪ್ರಕರಣವಿರುವುದಾಗಿ ತಾವೇ ಘೋಷಿಸಿಕೊಂಡಿದ್ದಾರೆ. 30 ಮಂದಿ (ಶೇ 9) ತಮ್ಮ ಮೇಲೆ ಗಂಭೀರ ಅಪರಾಧ ಪ್ರಕರಣವಿರುವುದಾಗಿ ಹೇಳಿಕೊಂಡಿದ್ದಾರೆ. ಮೂರು ಅಭ್ಯರ್ಥಿಗಳು ಮಹಿಳೆಯರ ಮೇಲಿನ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ. ಒಬ್ಬ ಅಭ್ಯರ್ಥಿಯು ತಮ್ಮ ಮೇಲೆ ಅತ್ಯಾಚಾರ ಪ್ರಕರಣವಿರುವುದಾಗಿ ಘೋಷಿಸಿದ್ದಾರೆ.

11 Percent Candidates Declared Criminal Cases Against themselves In Assam Phase 2 Election

ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಆಸ್ತಿ ಮಾಹಿತಿಯನ್ನೂ ಪರಿಶೀಲಿಸಿದ್ದು, 345 ಅಭ್ಯರ್ಥಿಗಳಲ್ಲಿ 73 ಮಂದಿ (ಶೇ 21ರಷ್ಟು) ಕೋಟ್ಯಧಿಪತಿಗಳಾಗಿದ್ದಾರೆ.

ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್‌ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ.

English summary
Eleven per cent of the 345 candidates contesting in the 2nd phase of the Assam assembly elections have declared criminal cases against themselves, says Association for Democratic Reforms report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X