ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯ ದೇಶದಲ್ಲೇ 3ನೇ ಅತ್ಯುತ್ತಮ ಮೃಗಾಲಯ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 16: ದೇಶದ ಅತ್ಯುತ್ತಮ ಮೃಗಾಲಯಗಳ ಶ್ರೇಯಾಂಕದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ 3ನೇ ಶ್ರೇಯಾಂಕ ಪಡೆದುಕೊಂಡಿದೆ. ಸೆಪ್ಟೆಂಬರ್ 10ರಂದು ಭುವನೇಶ್ವರದಲ್ಲಿ ಮೃಗಾಲಯದ ನಿರ್ದೇಶಕರ ಸಮಾವೇಶದಲ್ಲಿ ದೇಶದ ಎಲ್ಲಾ ಮೃಗಾಲಯಗಳ ಮಾಹಿತಿಯನ್ನು ಕಲೆ ಹಾಕಿ ಕೇಂದ್ರ ಮೃಗಾಲಯ ಪ್ರಾಧಿಕಾರ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಮೃಗಾಲಯಗಳ ಪರಿಣಾಮಕಾರಿ ನಿರ್ವಹಣೆಯ ಮೌಲ್ಯಮಾಪನದ ಆಧಾರದ ಮೇಲೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 3 ನೇ ಸ್ಥಾನ ಬಂದಿದ್ದರೆ, ದೊಡ್ಡ ಮೃಗಾಲಯ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ಘೋಷಣೆ ಮಾಡಿದಂತೆ ಡಾರ್ಜಿಲಿಂಗ್‌ನ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ ದೇಶದ ಅತ್ಯುತ್ತಮ ಮೃಗಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಚೆನ್ನೈನ ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್ 2ನೇ ಸ್ಥಾನಪಡೆದುಕೊಂಡಿದೆ. ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯ 9ನೇ ಶ್ರೇಯಾಂಕ ಪಡೆದುಕೊಂಡಿದೆ.

ಬಿಂಕದಕಟ್ಟಿ ಮೃಗಾಲಯದಿಂದ ತನ್ನ ಹುಟ್ಟುಹಬ್ಬಕ್ಕೆ ಚಿರತೆ ದತ್ತು ಪಡೆದ 5 ವರ್ಷದ ಪೋರಬಿಂಕದಕಟ್ಟಿ ಮೃಗಾಲಯದಿಂದ ತನ್ನ ಹುಟ್ಟುಹಬ್ಬಕ್ಕೆ ಚಿರತೆ ದತ್ತು ಪಡೆದ 5 ವರ್ಷದ ಪೋರ

ನಿರ್ವಹಣೆ, ಸ್ವಚ್ಛತೆ, ಪ್ರಾಣಿಗಳ ಎರವಲು ಪ್ರವಾಸಿಗರ ಆಕರ್ಷಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆದಿರುವ ಮೌಲ್ಯಮಾಪನದಲ್ಲಿ ದೊಡ್ಡ ಮೃಗಾಲಯಗಳ ವಿಭಾಗದಲ್ಲಿ ತಮಿಳುನಾಡಿನ ಅರಿಗ್ನಾರ್ ಅಣ್ಣ ಜಿಯಾಲಾಜಿಕಲ್ ಪಾರ್ಕ್ ಶೇಕಡಾ 80ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಶ್ರೀ ಚಾಮರಾಜೇಂದ್ರ ಮೃಗಾಲಯವು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಗುಜರಾತ್‌ನ ಸಕ್ರ್ಕರ್‍ಬಾಗ್ ಜಿಯಾಲಾಜಿಕಲ್ ಪಾರ್ಕ್ ಶೇ.76ರಷ್ಟು ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದೆ.

Mysuru zoological park 3rd best Zoo in the country

ಮಧ್ಯಮವರ್ಗ ಮೃಗಾಲಯಗಳ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಪದ್ಮಜನಾಯ್ಡು ಹಿಮಾಲಯನ್ ಜಿಯಾಲಾಜಿಕಲ್ ಪಾರ್ಕ್ ಶೇ.83ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದು, ಶೇ.78 ಅಂಕಪಡೆದ ಅಲಿಫೋರ್ ಜಿಯಾಲಾಜಿಕಲ್ ಪಾರ್ಕ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

Mysuru zoological park 3rd best Zoo in the country

157 ಎಕರೆ ವಿಸ್ತೀರ್ಣದ ಮೈಸೂರು ಮೃಗಾಲಯ ದೇಶದ ಅತ್ಯಂತ ಹಳೆಯ ಮೃಗಾಲಯ ಎನಿಸಿಕೊಂಡಿದೆ. 1892 ರಲ್ಲಿ ಮೃಗಾಲಯ ಆರಂಭಗೊಂಡಿತ್ತು. ಈ ಮೃಗಾಲಯ ಅರಮನೆಯಿಂದ ಕೆಲವೇ ಕಿ.ಮೀ. ದೂರದಲ್ಲಿದ್ದು, 1909 ರಲ್ಲಿ ಚಾಮರಾಜೇಂದ್ರ ಮೃಗಾಲಯ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಸುಮಾರು 1,300 ಪ್ರಾಣಿಗಳಿಗೆ ಈ ಮೃಗಾಲಯ ನೆಲೆ ಹೊದಗಿಸಿದೆ.

English summary
Mysuru Sri Chamarajendra Zoological Gardens third best zoo in the country ranked given by the Central Zoo Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X