• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಯುವ ದಸರಾ: ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಆಹ್ವಾನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 27: ಯುವ ಸಮೂಹವನ್ನು ಪ್ರಮುಖವಾಗಿ ಆಕರ್ಷಿಸುವ ಯುವ ದಸರೆ ಉದ್ಘಾಟನೆಗೆ ಸುದೀಪ್ ಬಾರದ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಆಹ್ವಾನ‌ ನೀಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಯುವ ದಸರಾ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಂತರ ಮಾತನಾಡಿದ ಅವರು, ಸೆಪ್ಟೆಂಬರ್‌ 28ಕ್ಕೆ "ಅಪ್ಪು ನಮನ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಸರಾಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲವೂ ಯಾವುದೇ ತೊಂದರೆಗಳು ಇಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಯುವ ದಸರಾದಲ್ಲಿ ಗೋಲ್ಡ್ ಪಾಸ್ ಹೊರತುಪಡಿಸಿ ಯಾವುದೇ ಪಾಸ್ ಇರುವುದಿಲ್ಲ ಎಂದು ತಿಳಿಸಿದರು.

ಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆ

ಯುವ ದಸರಾ ಉಪಸಮಿತಿ ವತಿಯಿಂದ ನಾಳೆಯಿಂದ ಅಕ್ಟೋಬರ್‌ 3ರವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ನಟ ಡಾ.ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಹಾಗೂ ನಟ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಾಳೆ ಸಂಜೆ 7 ಗಂಟೆಯಿಂದ ಅಪ್ಪು ನಮನ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ಗುರುಕಿರಣ್, ವಿಜಯ ಪ್ರಕಾಶ್, ಕುನಾಲ್ ಗಾಂಜಾವಾಲ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.

 ಯುವ ಸಂಭ್ರಮ ವಿಜೇತರಿಂದ ನೃತ್ಯ

ಯುವ ಸಂಭ್ರಮ ವಿಜೇತರಿಂದ ನೃತ್ಯ

ಸೆಪ್ಟೆಂಬರ್‌ 29ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಪವನ್ ಡ್ಯಾನ್ಸರ್ ಹಾಗೂ ಇತರರಿಂದ ನೃತ್ಯ ರೂಪಕ, ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. ಸೆಪ್ಟೆಂಬರ್‌ 30ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮ, ಲೇಸರ್ ಆಕ್ಟ್ & ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನೃತ್ಯ ರೂಪಕ, ಸ್ಯಾಂಡಲ್‌ವುಡ್ ನೈಟ್ ನಡೆಯಲಿದೆ. ಅಕ್ಟೋಬರ್‌ 1ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಹಿನ್ನೆಲೆ ಗಾಯಕ ಸೋನು ನಿಗಮ್, ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ ಇರಲಿದೆ.

ವಿದ್ಯುದ್ದೀಪದ ಬೆಳಕಿನಲ್ಲಿ ಮೈಸೂರಿನಲ್ಲಿ 'ಅಂಬಾರಿ' ಪ್ರದಕ್ಷಿಣೆವಿದ್ಯುದ್ದೀಪದ ಬೆಳಕಿನಲ್ಲಿ ಮೈಸೂರಿನಲ್ಲಿ 'ಅಂಬಾರಿ' ಪ್ರದಕ್ಷಿಣೆ

 ಮಹಿಳಾ ತಂಡದವರಿಂದ ಬ್ಯಾಂಡ್ ಪ್ರದರ್ಶನ

ಮಹಿಳಾ ತಂಡದವರಿಂದ ಬ್ಯಾಂಡ್ ಪ್ರದರ್ಶನ

ಅಕ್ಟೋಬರ್‌ 2ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಖ್ಯಾತ ಚಿತ್ರತಾರೆಯರಾದ ಹರ್ಷಿಕಾ ಪೂಣಚ್ಚ, ವಿಜಯರಾಘವೇಂದ್ರ ಅವರಿಂದ ಕನ್ನಡ ಸ್ಟಾರ್ ನೈಟ್, ಗಾಯಕಿ ಮಂಗ್ಲಿ, ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ. ಇನ್ನು ಅಕ್ಟೋಬರ್‌ 3ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡದವರಿಂದ ಪ್ರದರ್ಶನ, ಫ್ಯಾಷನ್ ಶೋ, ಗಾಯಕಿ ಸುನಿಧಿ ಚೌಹಾಣ್‌ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ಇದೇ ವೇಳೆ ತಿಳಿಸಿದರು.

 ಭಿತ್ತಿ ಪತ್ರ ಬಿಡುಗಡೆ; ಭಾಗಿಯಾದ ಗಣ್ಯರು

ಭಿತ್ತಿ ಪತ್ರ ಬಿಡುಗಡೆ; ಭಾಗಿಯಾದ ಗಣ್ಯರು

ಭಿತ್ತಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಸಮಿತಿಯ ಕಾರ್ಯಾಧ್ಯಕ್ಷ ವೆಂಕಟರಾಜು ಎನ್ ಸಿ, ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷರುಗಳಾದ ಎಂ.ಬದರೀಶ್, ಸಂತೋಷ್ ಕುಮಾರ್, ಎಂ.ಮಹೇಂದ್ರ, ಕಾರ್ಯದರ್ಶಿ ಆಶಾದ್ ರೆಹಮಾನ್ ಷರೀಫ್, ಡಾ.ನಿಂಗರಾಜು ಆರ್ ಮತ್ತಿತರರು ಉಪಸ್ಥಿತರಿದ್ದರು.

 ಸುದೀಪ್ ಗೈರು ಬಗ್ಗೆ ಸಚಿವರ ಸ್ಪಷ್ಟನೆ

ಸುದೀಪ್ ಗೈರು ಬಗ್ಗೆ ಸಚಿವರ ಸ್ಪಷ್ಟನೆ

ಯುವ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಈ ಮೊದಲೇ ತಿಳಿಸಿದ್ದರು. ಕಾರ್ಯಕ್ರಮಕ್ಕೆ ಬರಲ್ಲವೆಂದು ಸುದೀಪ್ ಮಾಹಿತಿ ನೀಡಿದ್ದಾರೆ. ಪರ್ಯಾಯವಾಗಿ ಯಾರನ್ನು ಕರೆಸಬೇಕೆಂದು‌ ಯೋಚಿಸ್ತಿದ್ದೇವೆ ಎಂದು ಹೇಳಿದ್ದರು. ಇದೀಗ ಯುವ ದಸರಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಆಹ್ವಾನಿಸಿದ್ದಾರೆ.

English summary
invited to Ashwini Puneeth Rajkumar inaugurate mysuru Yuva Dasara. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X