ದುಡ್ಡು ಹಂಚಿದ್ದು ನಾನೇ, ಏನಿವಾಗ? ಸಾ.ರಾ ಮಹೇಶ್ ಪ್ರಶ್ನೆ!
ಮೈಸೂರು, ಮಾರ್ಚ್ 27 : ಜನರಿಗೆ ಹಣ ನೀಡಿರುವುದು ನಾನೇ, ಶಾಸಕನಾಗಿರುವವನು ಆ ತಾಲ್ಲೂಕಿನ ಜನತೆಗೆ ಆರ್ಥಿಕವಾಗಿ ಸಹಾಯ ಮಾಡುವುದು ತಪ್ಪೇ ಎಂದು ಸವಾಲೆಸೆದು ಈಗ ಸುದ್ದಿಯಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಘಟನೆಗೆ ಸಂಬಂಧಿಸಿದಂತೆ ಸ್ವತಃ ಶಾಸಕ ಸಾ.ರಾ.ಮಹೇಶ್ ವಿವರಣೆ ನೀಡಿದ್ದು,ತಾಲ್ಲೂಕಿನ ಜನತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಹತ್ತು ವರ್ಷಗಳಿಂದಲೂ ನಾನು ಆರ್ಥಿಕವಾಗಿ ಸಹಾಯ ಮಾಡುತ್ತಲೇ ಬಂದಿದ್ದೇನೆ. ಅಲ್ಲದೇ ಇದು ನಮ್ಮ ಕುಟುಂಬದ ಸಂಪದ್ರಾಯವೂ ಹೌದು. ಇದನ್ನು ನಾನು ಹೊಸದಾಗಿ ಚುನಾವಣೆ ಸಂದರ್ಭವೆಂದು ಮಾಡುತ್ತಿಲ್ಲ. ಇದನ್ನು ತಾಲ್ಲೂಕಿನ ಜನರೇ ಯಾರಿಗೆ ಬೇಕಾದರೂ ಸ್ಪಷ್ಟಪಡಿಸುತ್ತಾರೆ ಎಂದಿದ್ದಾರೆ.
ನಾನು 365 ದಿನವೂ ಬಡವರಿಗೆ ಸಹಾಯ ಮಾಡುತ್ತೇನೆ. ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಸಹಾಯ ನಿಲ್ಲಿಸುತ್ತೇನೆ. ನನ್ನ ವಿರುದ್ಧ ಪಕ್ಷದ ಒಳಗೂ ಮತ್ತು ಹೊರಗೂ ಕುತಂತ್ರ ನಡೆಯುತ್ತಿದೆ. ನಾನೇ ಬೆಳೆಸಿದ ನಾಯಕರು ನನ್ನ ಕಾಲು ಕಚ್ಚುತ್ತಿದ್ದಾರೆ. ಆದರೆ ಕ್ಷೇತ್ರದ ಜನರಿಗೆ ನಾನು ಏನು ಎನ್ನುವುದು ಚೆನ್ನಾಗಿ ಅರಿವಿದೆ ಎಂದು ತಿಳಿಸಿದರು.

ಟಿಆರ್ ಪಿ ಹೆಚ್ಚಳದ ಕುತಂತ್ರ: ಕೆಲವು ದೃಶ್ಯ ಮಾಧ್ಯಮದವರು ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಸತ್ಯವನ್ನು ಮರೆಮಾಚಿ ಇಲ್ಲಸಲ್ಲದ ವೀಡಿಯೊ ತುಣುಕುಗಳನ್ನು ಬೆಳಗ್ಗಿನಿಂದ ಸಂಜೆಯವರೆಗೂ ತೋರಿಸುವುದು, ಅಲ್ಲದೆ ಇದು ಬೇರೆ ಎಲ್ಲಿಯೂ ಇಲ್ಲ, ನಮ್ಮಲ್ಲಿ ಮಾತ್ರ ಎಕ್ಸ್‍ಕ್ಲೂಸಿವ್ ಸುದ್ದಿ ಎಂದು ಹೇಳುವುದು ಹಾಗೂ ದೂರವಾಣಿ ಕರೆಮಾಡಿ ಇಲ್ಲಸಲ್ಲದ ಪ್ರಶ್ನೆ ಕೇಳುವುದು ಅವರಿಗೀಗ ಚಾಳಿಯಾಗಿಬಿಟ್ಟಿದೆ ಎಂದು ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications