ಯದುವಂಶಕ್ಕೆ ಉತ್ತರಾಧಿಕಾರಿ ಯಾರು? ಸಸ್ಪೆನ್ಸ್!

ಮೈಸೂರು, ಡಿ. 12 : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಆದರೆ, ಅವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಜನರ ಕುತೂಹಲ ಕೆರಳಿಸಿದೆ. ಕಾಂತರಾಜ ಅರಸ್ ಒಡೆಯರ್ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಆದ್ದರಿಂದ ಅವರು ಉತ್ತರಾಧಿಕಾರಿ ಎಂಬ ಸುದ್ದಿಗಳು ಹಬ್ಬಿವೆ. ಆದರೆ, ಮುಂದಿನ ದಸರಾವರೆಗೂ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಒಡೆಯರ್ ಅಂತ್ಯಕ್ರಿಯೆ ಆಗುವ ಮುನ್ನವೇ ಉತ್ತರಾಧಿಕಾರಿ ಪ್ರಶ್ನೆಗೆ ಉತ್ತರ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಒಡೆಯರ್ ಸಂಸ್ಕಾರವನ್ನು ಅವರ ಅಕ್ಕ ಗಾಯತ್ರಿ ದೇವಿ ಅವರ ಪುತ್ರ ಕಾಂತರಾಜ ಅರಸ್ ನೆರವೇರಿಸಿದ್ದಾರೆ. ಆದರೆ, ಒಡೆಯರ್ ಅವರ ಅಂತಿಮ ವಿಧಿ-ವಿಧಾನ ನೆರವೇರಿಸುವ ಉದ್ದೇಶದಿಂದ ಮಾತ್ರ ಅವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಇದಕ್ಕೆ ಅರಮನೆ ಮತ್ತು ಪ್ರಮೋದಾ ದೇವಿ ಅವರ ಸಂಪೂರ್ಣ ಒಪ್ಪಿಗೆ ಇನ್ನೂ ಲಭಿಸಿಲ್ಲ ಎಂದು ಹೇಳಲಾಗುತ್ತಿದೆ. (ಒಡೆಯರ್ ಉತ್ತರಾಧಿಕಾರಿ ಯಾರು?)

Mysore

ತರಾತುರಿಯಲ್ಲಿ ಉತ್ತರಾಧಿಕಾರಿಯ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ಒಡೆಯರ್ ಅವರ ಸಂಸ್ಕಾರದ ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ಈ ಕುರಿತು ಚಿಂತನೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿಯ ದಸರಾ ಪೂರ್ಣಗೊಂಡಿದೆ, ಮುಂದಿನ ದರಸಾ ಉತ್ಸವದ ವೇಳೆಗೆ ಉತ್ತರಾಧಿಕಾರಿ ಆಯ್ಕೆ ಮಾಡುವ ಸಾಧ್ಯತೆ ಇದೆ. (ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್)

ಕರ್ನಾಟಕ ಸರ್ಕಾರ ಮತ್ತು ರಾಜವಂಶದ ನಡುವಿನ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದ್ದರಿಂದ ನ್ಯಾಯಾಲಯದದಿಂದ ಬರುವ ತೀರ್ಪನ್ನು ನೋಡಿಕೊಂಡು ಉತ್ತರಾಧಿಕಾರಿ ನೇಮಕದ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಮುಂದಿನ ದಸರಾ ವೇಳೆಗೆ ಉತ್ತರಾಧಿಕಾರಿ ನೇಮಕವಾಗಲು ಮುಂದಿನ ದಸರಾದವರೆಗೆ ಕಾಯಬೇಕಾಗಬಹುದು. (ಮೈಸೂರು ಯದುವಂಶ ಒಡೆಯರ್ ವಂಶಾವಳಿ)

ಎರಡು ದಿನ ಅರಮನೆ ಪ್ರವೇಶ ನಿಷೇಧ : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆ ನಂತರದ ವಿಧಿವಿಧಾನಗಳು ನಡೆಯುತ್ತಿರುವುದರಿಂದ ಅರಮನೆ ಪ್ರವೇಶಕ್ಕೆ ಸಾರ್ವಜಿನಿಕರಿಗೆ ನಿಷೇಧ ಹೇರಲಾಗಿದೆ. ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕರು ಅರಮನೆಯನ್ನು ನೋಡಲು ತೆರಳುವಂತಿಲ್ಲ.(ಸೂತಕದ ನಡುವೆ ಎದ್ದಿದೆ ಒಡೆಯರ್ ಆಸ್ತಿ ಪ್ರಶ್ನೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+