ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಾರಾ ದರ್ಶನ್, ಸುದೀಪ್?!

ಮೈಸೂರು, ಡಿಸೆಂಬರ್ 12 : ಇನ್ನೇನು 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 4 ತಿಂಗಳಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ ಎಂಬ ಗುಮಾನಿಗಳು ಹೆಚ್ಚಾಗುತ್ತಿದೆ.

ಹೌದು, ಚುನಾವಣೆಗೆ ಸ್ಯಾಂಡಲ್ ವುಡ್'ನ ಗ್ಲಾಮರ್ ಕೊಡಲು ಸಿಎಂ ಪ್ಲಾನ್ ಮಾಡಿದ್ದಾರೆ. ಈ ಮೂಲಕ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಯನ್ನು ವರ್ಣಮಯವಾಗಿಸಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Will Kannada actors Darshan and Sudeep campaign for Siddaramaiah in Mysuru?

ಕಾಂಗ್ರೆಸ್ ನೇತೃತ್ವವನ್ನು ವಹಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಸ್ವಕ್ಷೇತ್ರದಲ್ಲಿ ಸಿನಿಮಾ ತಾರೆಯರ ದಂಡು ಇಳಿಸಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದ್ದಾರೆ. ನಟ ಸುದೀಪ್, ದರ್ಶನ್, ನಟಿ ರಮ್ಯಾ, ಭಾವನಾ ಅಖಾಡದಲ್ಲಿ ಇರುತ್ತಾರೆ.

ಸ್ವಕ್ಷೇತ್ರದಲ್ಲೇ ಇಬ್ಬರು ನಟರ ಭರ್ಜರಿ ಪ್ರಚಾರ:
ಕಾಂಗ್ರೆಸ್ ನೇತೃತ್ವವನ್ನು ವಹಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಸ್ವಕೇತ್ರದಲ್ಲಿ ಸಿನಿಮಾ ತಾರೆಯರ ದಂಡು ಇಳಿಸಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದ್ದಾರೆ. ನಟ ಸುದೀಪ್, ದರ್ಶನ್, ನಟಿ ರಮ್ಯಾ, ಭಾವನಾ ಅಖಾಡದಲ್ಲಿ ಇರುತ್ತಾರೆ ಎಂದು ಹೇಳಲಾಗಿದೆ.

ಈಗಾಗಲೇ ಪಕ್ಷದ ಪ್ರಚಾರದ ಹೊಣೆ ಹೊರಲು ಮಾಜಿ ಸಂಸದೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ನಟಿ ಭಾವನಾ ಪ್ರಚಾರದಲ್ಲಿ ಸಕ್ರಿಯವಾಗಿ ಇರುತ್ತಾರೆ. ಇವರ ಜೊತೆಗೆ ದರ್ಶನ್ ತಾಯಿ, ಇವರು ಈಗಾಗಲೇ ಮಹಿಳಾ ಕಾಂಗ್ರೆಸ್ ಘಟಕದಲ್ಲಿದ್ದಾರೆ. ಆದ್ದರಿಂದ ದರ್ಶನ್ ಸಿಎಂ ಕುಟುಂಬಕ್ಕೆ ಮನೆ ಮಗ ಇದ್ದಂತೆ. ಹಾಗಾಗಿ ತಾಯಿ ಜೊತೆಗೆ ದರ್ಶನ್ ಕೂಡ ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ಹೇಳಲಾಗಿದೆ.

ಇನ್ನು ಸಿಎಂ ತಮ್ಮ ಹಾಗೂ ಮಗನ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸುದೀಪ್ ಒಪ್ಪಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಸುದೀಪ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ನಟಿ ಭಾವನಾ ಪ್ರಚಾರದಲ್ಲಿ ಸಕ್ರಿಯವಾಗಿ ಇರುತ್ತಾರೆ. ಇವರ ಜೊತೆಗೆ ದರ್ಶನ್ ತಾಯಿ, ಇವರು ಈಗಾಗಲೇ ಮಹಿಳಾ ಕಾಂಗ್ರೆಸ್ ಘಟಕದಲ್ಲಿದ್ದಾರೆ. ಆದ್ದರಿಂದ ದರ್ಶನ್ ಸಿಎಂ ಕುಟುಂಬಕ್ಕೆ ಮನೆ ಮಗ ಇದ್ದಂತೆ. ಹಾಗಾಗಿ ತಾಯಿ ಜೊತೆಗೆ ದರ್ಶನ್ ಕೂಡ ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ಹೇಳಲಾಗಿದೆ.

ಸೋಮವಾರ ಸುದೀಪ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮುಂದಿನ ಚುನಾವಣೆಯಲ್ಲಿ ಸಿಎಂ ತಮ್ಮ ಹಾಗೂ ಮಗನ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸುದೀಪ್ ಒಪ್ಪಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಸುದೀಪ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+