ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ ಮುಗೀತು, ಲೆಕ್ಕಾಚಾರ ಶುರುವಾಯ್ತು!

ರಾಜ್ಯದ ಘಟಾನುಘಟಿ ನಾಯಕರೆಲ್ಲರನ್ನೂ ಪ್ರಚಾರಕ್ಕೆ ಕರೆಯಿಸಿಕೊಂಡ ಉಪಚುನಾವಣೆಯ ಅಂಗಳಕ್ಕೆ, ಬಿರು ಬಿಸಿಲಿನಲ್ಲೂ ಉತ್ಸಾಹದ ರಂಗಿತ್ತು. ಇದೀಗ ಮತದಾನ ಮುಗಿದು, ಫಲಿತಾಂಶ ಹೊರಬರಲಿರುವ ಹೊತ್ತಲ್ಲಿ ಮತ್ತಷ್ಟು ಕುತೂಹಲ ಮೂಡಿದೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 11 : ದಕ್ಷಿಣ ಕಾಶಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಮರ ಏಪ್ರಿಲ್ 9 ರಂದು ಮುಗಿದಿದ್ದು, ಇದೀಗ ರಾಜಕೀಯ ಮುಖಂಡರ ಚಿತ್ತವೇನಿದ್ದರೂ ಏಪ್ರಿಲ್ 13, ಗುರುವಾರದ ಫಲಿತಾಂಶದ ಮೇಲೆ ನೆಟ್ಟಿದೆ.
ಈಗಾಗಲೇ ಸೋಲು- ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಗ್ನಿಪರೀಕ್ಷೆಯಾಗಿರುವ ಕದನದ ಮತಗಳು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ. ಅತ್ತ ಮತದಾನ ಮುಗಿಯುತ್ತಿದ್ದಂತೆಯೇ ಇತ್ತ ಮುಖಂಡರು ಭಾಗಾಕಾರ, ಗುಣಾಕಾರದಲ್ಲಿ ನಿರತರಾಗಿದ್ದಾರೆ.

ರಾಜ್ಯದ ಘಟಾನುಘಟಿ ನಾಯಕರೆಲ್ಲರನ್ನೂ ಪ್ರಚಾರಕ್ಕೆ ಕರೆಯಿಸಿಕೊಂಡ ಉಪಚುನಾವಣೆಯ ಅಂಗಳಕ್ಕೆ, ಬಿರು ಬಿಸಿಲಿನಲ್ಲೂ ಉತ್ಸಾಹದ ರಂಗಿತ್ತು. ಪರಸ್ಪರ ತೇಜೋವಧೆ, ಆರೋಪದ ಸುರಿಮಳೆಗಳೆಲ್ಲ ಸೇರಿ ಬಿಸಿಲ ಝಳಕ್ಕೊಂದಷ್ಟು ಮನರಂಜನೆಯ ತಂಪು ನೀಡಿದ್ದಂತೂ ಸುಳ್ಳಲ್ಲ. ಇದೀಗ ಮತದಾನ ಮುಗಿದು, ಫಲಿತಾಂಶ ಹೊರಬರಲಿರುವ ಹೊತ್ತಲ್ಲಿ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರಲ್ಲಿ ಮತ್ತಷ್ಟು ಕುತೂಹಲ ಮೂಡಿದೆ.[ನಂಜನಗೂಡಲ್ಲಿ ಬೆಟ್ಟಿಂಗ್ ಜೋರು, ನಾವು ಗೆಲ್ಬೇಕು ಅಂತಾರೆ ಜನರು!]

ವರದಿ ಒಪ್ಪಿಸಿದ ಮುಖಂಡರು

ವರದಿ ಒಪ್ಪಿಸಿದ ಮುಖಂಡರು

ಹಲವು ದಿನಗಳಿಂದ ತಮ್ಮ ಅಭ್ಯರ್ಥಿಗಳಪರ ಓಡಾಟ ಮಾಡಿ ಮತದಾರರ ಬಳಿಗೆ ಅಲೆದಿದ್ದ ಮುಖಂಡರು ಈಗ ನಾಯಕರ ಮನೆಗೆ ತೆರಳಿ ತಮ್ಮ ಗ್ರಾಮದಲ್ಲಿ ನಡೆದಿರುವ ಮತದಾನದ ವಿವರ ಕೊಟ್ಟು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಪರ ಹಗಲಿರುಳು ಶ್ರಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಸಂಸದ ಧ್ರುವನಾರಾಯಣ್ ನಿವಾಸದ ಎದುರು ಜನಜಂಗುಳಿ ಕಾಣಿಸಿಕೊಂಡಿತ್ತು.

ಗೆಲುವಿನ ಕುರಿತು ಗಹನ ಚರ್ಚೆ

ಗೆಲುವಿನ ಕುರಿತು ಗಹನ ಚರ್ಚೆ

ಹಲವು ದಿನಗಳಿಂದ ಓಡಾಡಿ ದಣಿದಿದ್ದ ಶ್ರೀನಿವಾಸ್ ಪ್ರಸಾದ್ ತಮ್ಮ ಆಪ್ತಮುಖಂಡರು, ಬೆಂಬಲಿಗರೊಂದಿಗೆ ಚರ್ಚಿಸಿದರು. ಅವರ ಪರವಾಗಿ ಕೆಲಸ ಮಾಡಿದ್ದ ಅನೇಕ ಮುಖಂಡರು ಭೇಟಿಕೊಟ್ಟು ಸಮಾಲೋಚಿಸುತ್ತಿದ್ದು, ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿಗೆ ಎಲ್ಲೆಲ್ಲಿ ಮತಗಳು ಬಂದಿವೆ, ಎಲ್ಲೆಲ್ಲಿ ಜನರು ಬೆಂಬಲಿಸಿಲ್ಲ ಎಂಬೆಲ್ಲ ಕುರಿತು ಗಹನ ಚರ್ಚೆ ನಡೆಯುತ್ತಿದೆ.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ]

ಬಿ ಎಸ್ ವೈ vs ಸಿದ್ದರಾಮಯ್ಯ

ಬಿ ಎಸ್ ವೈ vs ಸಿದ್ದರಾಮಯ್ಯ

ಈ ಉಪಚುನಾವಣೆ ಕಾಂಗ್ರೆಸ್-ಬಿಜೆಪಿ ನಡುವಿನ ಕದನ ಎನ್ನುವುದಕ್ಕಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಪ್ರತಿಷ್ಠೆಯಾಗಿರುವ ಕಾರಣ ಕಾರ್ಯಕರ್ತರು ಭಾರೀ ತಲೆಕೆಡಿಸಿಕೊಂಡು ನಂಜನಗೂಡು ಉಪಚುನಾವಣೆ: ದಾಖಲೆಯ ಶೇ.77 ಮತದಾನಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.[ನಂಜನಗೂಡು ಉಪಚುನಾವಣೆ: ದಾಖಲೆಯ ಶೇ.77 ಮತದಾನ]

ಸಿಎಂ ಮನೆ ಇನ್ನು ಖಾಲಿ-ಖಾಲಿ

ಸಿಎಂ ಮನೆ ಇನ್ನು ಖಾಲಿ-ಖಾಲಿ

ಕಳೆದ 10 ದಿನಗಳಿಂದಲೂ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದ ಸಿಎಂ ಮನೆ ಎದುರು, ದಿನ ಬೆಳಗಾದರೆ ಜನಸಾಗರವೇ ಇರುತ್ತಿತ್ತು. ಒಟ್ಟಿನಲ್ಲಿ ಚುನಾವಣೆಯ ನೆಪದಲ್ಲಿ ಸಿಎಂ ಮನೆಯೆದುರು ಒಂದು ರೀತಿಯ ಜಾತ್ರೆಯ ವಾತಾವರಣವಿತ್ತು. ಆದರೆ ಉಪಚುನಾವಣೆಯ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ಸಾಗಿರುವುದರಿಂದ ಅಲ್ಲೀಗ ನೀರವ ಮೌನ ಆವರಿಸಿದೆ.[ಕಾಂಗ್ರೆಸ್ ಹಣದ ಹೊಳೆ ಹರಿಸಿದೆ - ಶ್ರೀನಿವಾಸ್ ಪ್ರಸಾದ್]

ಫಲಿತಾಂಶಕ್ಕಿನ್ನೊಂದೇ ದಿನ ಬಾಕಿ

ಫಲಿತಾಂಶಕ್ಕಿನ್ನೊಂದೇ ದಿನ ಬಾಕಿ

ಒಟ್ಟಾರೆ ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ನಂಜನಗೂಡು ಮತ್ತು ಗುಂಡ್ಲೆಪೇಟೆ ಉಪಚುನಾವಣೆಯ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಏಪ್ರಿಲ್ 13 ಗುರುವಾರದಂದು ಎಲ್ಲ ಕುತೂಹಲಕ್ಕೂ ತೆರೆಬೀಳಲಿದೆ.[ಕೊರಳಲ್ಲಿ ಕಾಂಗ್ರೆಸ್ ಶಾಲು, ನೀತಿ ಸಂಹಿತೆ ಉಲ್ಲಂಘಿಸಿದ ಕಳಲೆ]

English summary
Who will be the winner of by election battle? this is the only question in the Mysuru from past two days! Most awaited Nanjangud and Gundlupet by election ended on 9th April, Sunday. Now every one is keeping their eyes on the results. which is on this Thursday, 13th of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X